ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು? ಸಮೀಕ್ಷೆ ಹೇಳಿದ್ದೇನು!!

NFHS survey : ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

Written by - Zee Kannada News Desk | Last Updated : Aug 20, 2022, 10:05 AM IST
  • ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು?
  • 2019-2021ರ ಅವಧಿಯಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
  • 12 ತಿಂಗಳುಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದ್ದೇನು?
ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು? ಸಮೀಕ್ಷೆ ಹೇಳಿದ್ದೇನು!! title=
ಸಮೀಕ್ಷೆ

NFHS survey : ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ದೇಶದ 707 ಜಿಲ್ಲೆಗಳಲ್ಲಿ 1.1 ಲಕ್ಷ ಮಹಿಳೆಯರು ಮತ್ತು ಒಂದು ಲಕ್ಷ ಪುರುಷರು ಈ ಸಮೀಕ್ಷೆಯ ಭಾಗವಾಗಿದ್ದರು. 2019-2021ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಈ ಸಮೀಕ್ಷೆ ನಡೆಸಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿ ಏನೆಂದರೆ, ನಗರ ಪ್ರದೇಶದ ಮಹಿಳೆಯರಿಗಿಂತ ಗ್ರಾಮೀಣ ಭಾಗದ ಮಹಿಳೆಯರದ್ದೇ ಇದರಲ್ಲಿ ಹೆಚ್ಚಿನ ಪಾಲಿದೆ. ಮದುವೆಯಾದವರಿಗಿಂತ ಪ್ರಸ್ತುತ ಮದುವೆಯಾಗಿರದ, ವಿಚ್ಛೇದಿತ, ವಿಧವೆ ಅಥವಾ ಗಂಡನಿಂದ ಬೇರ್ಪಟ್ಟ ಮಹಿಳೆಯರು ಇಬ್ಬರು ಅಥವಾ ಅದಕ್ಕಿಂತ ಹಚ್ಚಿನ ಪಾಲುದಾರರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದು 12 ತಿಂಗಳುಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. 

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 7 ಮಂದಿಯ ದುರ್ಮರಣ, 25ಕ್ಕೂ ಹೆಚ್ಚು ಜನರಿಗೆ ಗಾಯ

ಆದರೂ ತಮ್ಮ ಪತ್ನಿಯಲ್ಲದ ಅಥವಾ ಸಹಜೀವನ ನಡೆಸದ ಇತರ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಪುರುಷರ ಸಂಖ್ಯೆ ಶೇ. 3.6ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ. 0.5ರಷ್ಟಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ದತ್ತಾಂಶಗಳು ಹೇಳುತ್ತವೆ.   

ರಾಜಸ್ಥಾನ, ಹರಿಯಾಣ, ಚಂಡೀಘಡ, ಜಮ್ಮು/ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಕೇರಳ, ಅಸ್ಸಾಂ, ಲಕ್ಷದ್ವೀಪ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಈ ಮಾಹಿತಿ ಸಂಗ್ರಹಿಸಲಾಗಿದೆ. 

ಕಡಿಮೆ ಕಾಂಡೋಮ್ ಬಳಕೆ ಸಾಮಾನ್ಯವಾಗಿ ಎಚ್‌ಐವಿ/ಏಡ್ಸ್‌ನ ಅಪಾಯಕ್ಕೆ ಹೆಚ್ಚಿನ ಜನರನ್ನು ತಳ್ಳುತ್ತದೆ. ಅಂತಹ ಲೈಂಗಿಕತೆಯ ಸಮಯದಲ್ಲಿ ಹೆಚ್ಚಿನ ಅಪಾಯದ ಲೈಂಗಿಕ ಸಂಭೋಗ ಮತ್ತು ಕಾಂಡೋಮ್ ಬಳಕೆಯ ಪ್ರಮಾಣವನ್ನು ಅಳೆಯಲು ಈ ಸಮೀಕ್ಷೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದೆ.

ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ನೆರವಾಗುವ ಸಾಮಾಜಿಕ-ಆರ್ಥಿಕ ಮತ್ತು ಇತರ ಅಂಶಗಳನ್ನು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಈ ರಾಜ್ಯಗಳಲ್ಲಿ ಭಾರೀ ಮಳೆ-ಪ್ರವಾಹದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News