Viral Video: ಹುಡುಗಿಯ ತಲೆ ಕೂದಲಿನ ಮಧ್ಯೆ ಬಂತು ಹಾವಿನ ಮರಿ!

Viral Video:ಹಾವುಗಳಿಂದ ದೂರವಿರಬೇಕು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ಬಗೆಯ ವಿಡಿಯೋಗಳನ್ನು ನೀವು ನೋಡಿರಬೇಕು. ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ತುಂಬಾ ಅಚ್ಚರಿದಾಯಕವಾಗಿದೆ. 

Written by - Chetana Devarmani | Last Updated : Apr 25, 2022, 01:00 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ಬಗೆಯ ವಿಡಿಯೋಗಳನ್ನು ನೀವು ನೋಡಿರಬೇಕು
  • ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ
  • ಅದರಲ್ಲೂ ಕೆಲವು ವಿಡಿಯೋಗಳು ತುಂಬಾ ಅಚ್ಚರಿದಾಯಕವಾಗಿದೆ
Viral Video: ಹುಡುಗಿಯ ತಲೆ ಕೂದಲಿನ ಮಧ್ಯೆ ಬಂತು ಹಾವಿನ ಮರಿ!  title=
ಹಾವು

Snake Viral Video: ಹಾವನ್ನು ಕಂಡರೆ ಎಂಥವರಿಗೂ ಭಯವಾಗುತ್ತದೆ. ಹಾವು ತೆವಳುವ ರೀತಿಯನ್ನು ನೋಡಿದರೆ ಸಾಕು ಎದೆ ಝಲ್‌ ಎನ್ನುತ್ತದೆ. ಈ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಸೇರಿವೆ. ಸರಿಸೃಪಗಳಲ್ಲಿ ಮೊಸಳೆಗಳು ಮತ್ತು ಹಾವುಗಳನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಕೆಲವು ಹಾವುಗಳು ಈ ಭೂಮಿಯ ಮೇಲೆ ಕಂಡುಬರುತ್ತವೆ. ಕೆಲವು ಹಾವುಗಳು ತುಂಬಾ ವಿಷಕಾರಿ ಮತ್ತು ಅಪಾಯಕಾರಿಯಾಗಿವೆ. ಅದಕ್ಕಾಗಿಯೇ ಹಾವುಗಳಿಂದ ದೂರವಿರಬೇಕು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. 

 

 
 
 
 

 
 
 
 
 
 
 
 
 
 
 

A post shared by Kingdom of snakes 🐍 (@snake_unity)

 

ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ಬಗೆಯ ವಿಡಿಯೋಗಳನ್ನು ನೀವು ನೋಡಿರಬೇಕು. ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವು ವಿಡಿಯೋಗಳು ತುಂಬಾ ಆಶ್ಚರ್ಯಕರವಾಗಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಅಚ್ಚರಿಯ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಚೀನಾ ಪ್ರವಾಸಿ ವೀಸಾ ರದ್ದುಗೊಳಿಸಿದ ಭಾರತ: ಕಾರಣ ಇಲ್ಲಿದೆ

ಈ ವಿಡಿಯೋದಲ್ಲಿ ನೀವು ಹುಡುಗಿಯ ಕೂದಲಿಗೆ ಸಿಕ್ಕಿಹಾಕಿಕೊಂಡ ಅಪಾಯಕಾರಿ ಹಾವಿನ ಮರಿಯನ್ನು ನೋಡಬಹುದು. ಈ ಹಾವಿನ ಮರಿ ಹುಡುಗಿಯ ಕೂದಲಿಗೆ ಎಲ್ಲಿಂದ ಸಿಕ್ಕಿಹಾಕಿಕೊಂಡಿತೋ ಗೊತ್ತಿಲ್ಲ. ಈ ವಿಡಿಯೋದಲ್ಲಿ ಕಂಡು ಬಂದ ಅತ್ಯಂತ ಅಚ್ಚರಿಯ ಸಂಗತಿಯೆಂದರೆ ಸಾಮಾನ್ಯವಾಗಿ ಹಾವುಗಳನ್ನು ನೋಡಿದ ಜನ ಭಯಪಡುತ್ತಾರೆ. ಆದರೆ ಈ ಹುಡುಗಿ ಹಾವಿನ ಮರಿಗೆ ಹೆದರುವುದಿಲ್ಲವಂತೆ. ಹಾವು ಕಚ್ಚುತ್ತದೆ ಎಂದು ಹುಡುಗಿಗೆ ಸ್ವಲ್ಪವೂ ಭಯವಿಲ್ಲ. 

ಇದನ್ನೂ ಓದಿ:ದೇಶದಲ್ಲಿ ತೈಲ ಬೆಲೆಯಲ್ಲಿ ಏರಿಳಿತ: ಇಂದಿನ ಇಂಧನ ದರ ಇಂತಿದೆ

ಹುಡುಗಿ ತನ್ನ ಕೂದಲಿನಿಂದ ಹಾವನ್ನು ತುಂಬಾ ಆರಾಮವಾಗಿ ಹೊರತೆಗೆಯುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಈ ಆಘಾತಕಾರಿ ವಿಡಿಯೋವನ್ನು ಸ್ನೇಕ್_ಯುನಿಟಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಇದುವರೆಗೂ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News