Viral Video : ತನ್ನ ಪಾಡಿಗೆ ತಾನಿದ್ದ ನಾಯಿಯ ಮುಂದೆ ಮಂಗನ ದಾದಾಗಿರಿ..!

ತನ್ನ ಪಾಡಿಗೆ ತಾನು ಕುಳಿತಿದ್ದ ನಾಯಿಯ ಮೇಲೆ ಕೋತಿಯೊಂದು ಎರಗಿ ಕೊಂಡು ಬಂದಿದೆ. ಸುಖಾ ಸುಮ್ಮನೆ ನಾಯಿಗೆ ಕೋತಿ ಕಾಟ ಕೊಡಲು ಆರಂಭಿಸುತ್ತದೆ. 

Written by - Ranjitha R K | Last Updated : Jun 3, 2022, 02:49 PM IST
  • ನಾಯಿಗೆ ಕಾಟ ಕೊಡುತ್ತಿರುವ ಮಂಗ
  • ಕೋತಿ ಕಾಟಕ್ಕೆ ತಕ್ಕ ಉತ್ತರ ಕೊಟ್ಟ ನಾಯಿ
  • ವೈರಲ್ ಆಯಿತು ನಾಯಿ, ಕೋತಿ ಆಟದ ವಿಡಿಯೋ
Viral Video : ತನ್ನ ಪಾಡಿಗೆ ತಾನಿದ್ದ ನಾಯಿಯ ಮುಂದೆ ಮಂಗನ ದಾದಾಗಿರಿ..!   title=
DOg Monkey Viral news (Photo Instagram)

ಬೆಂಗಳೂರು : ಈ ಸಮಾಜವೇ ಹಾಗೆ. ನಮಗಿಂತ ದುರ್ಬಲರು ಎಂದು ಗೊತ್ತಾದರೆ ಸಾಕು ಮೈ ಮೇಲೆ ಎರಗಿ ಬಂದು ಬಿಡುತ್ತಾರೆ. ಎದುರಿಗಿರುವವನು ತಕ್ಕ ಉತ್ತರ ನೀಡುತ್ತಾನೆ ಎಂದು ತಿಳಿದರೆ ಬಾಲ ಮುದುರಿಕೊಂಡು ಹೋಗುತ್ತಾರೆ. ಅದು ಮನುಷ್ಯರೇ ಆಗಲಿ, ಪ್ರಾಣಿಗಳೇ ಆಗಲಿ. ಬಗ್ಗಿದವನಿಗೆ ಗುದ್ದು ಜಾಸ್ತಿ ಎನ್ನುವ ಮಾತಿನಂತೆ ಸುಮ್ಮನಿದ್ದರೆ ವಿನಾ ಕಾರಣ ತೊಂದರೆ ಅನುಭವಿಸಬೇಕಾಗುತ್ತದೆ. 

ಈ ವೀಡಿಯೋವನ್ನು ನೋಡಿದಾಗ ಮೇಲೆ ಹೇಳಿದ ಮಾತು ನಿಜ ಎನ್ನುವುದು ಅರಿವಾಗುತ್ತದೆ. ಇಲ್ಲಿ ತನ್ನ ಪಾಡಿಗೆ ತಾನು ಕುಳಿತಿದ್ದ ನಾಯಿಯ ಮೇಲೆ ಕೋತಿಯೊಂದು ಎರಗಿ ಕೊಂಡು ಬಂದಿದೆ. ಸುಖಾ ಸುಮ್ಮನೆ ನಾಯಿಗೆ ಕೋತಿ ಕಾಟ ಕೊಡಲು ಆರಂಭಿಸುತ್ತದೆ. ಮಂಗನಿಗೂ ತಾನೇ ಬಲಶಾಲಿ ಎನ್ನುವ ಭಾವನೆ ಬಂದು ಬಿಟ್ಟಂತಿದೆ. ಅದಕ್ಕೆ ಮತ್ತೆ ಮತ್ತೆ ನಾಯಿಗೆ ತೊಂದರೆ ಕೊಡಲು ಹೋಗುತ್ತಿದೆ.

ಇದನ್ನೂ ಓದಿ : Viral Video : ಜೀವಂತ ಹಾವನ್ನು ಕುಕ್ಕಿ ತಿನ್ನಲು ಯತ್ನಿಸುವ ರಣಹದ್ದು..! ಹಾವು ಮಾಡಿದ್ದೇನು ?

ಪಾಪ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಗೆ ಕೋತಿ ಕೊಡುವ ಕಾಟ ಅಷ್ಟಿಷ್ಟಲ್ಲ. ಮೊದಲು ನಾಯಿ ಸುಮ್ಮನಿದ್ದರೂ, ನಂತರ ಕೋತಿಯನ್ನು ನೋಡಿ ನಾಯಿ ಬೊಗಳಲು ಶುರು ಮಾಡುತ್ತದೆ. ಕೋತಿ ಮತ್ತೆ ಮತ್ತೆ ನಾಯಿ ಮೇಲೆ ಎರಗಲು ಆರಂಭಿಸುತ್ತದೆ. ನಂತರ ನಾಯಿ ಕೂಡಾ ಕೋತಿ ವಿರುದ್ದ ತಿರುಗಿ ಬೀಳುತ್ತದೆ. ಇಷ್ಟಾಗುತ್ತಿದ್ದಂತೆಯೇ ಕೋತಿ ಅಲ್ಲಿಂದ ಜಾಗ ಖಾಲಿ ಮಾಡಿ ಬಿಡುತ್ತದೆ. 

 

ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸಿ ಆನಂದಿಸಿದ್ದಾರೆ. ಈ ವಿಡಿಯೋವನ್ನು arvind_kumarr ಹೆಸರಿನ ಖಾತೆಯಿಂದ Instagram ನಲ್ಲಿ ಅಪ್‌ಲೋಡ್ ಮಾಡಿಲಾಗಿದೆ. ಅನೇಕ ಮಂದಿ ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ :  Monkey Leopard Video: ಮರದ ಮೇಲೇರಿದ ಕೋತಿಯನ್ನು ಜಿಗಿದು ಹಿಡಿದ ಚಿರತೆ- ವಾಚ್ ಶಾಕಿಂಗ್ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News