ಶೂ ಖರೀದಿಸಿ ಸುಸ್ತಾದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಆತನ ಕೆಲಸ ನೋಡಿದ್ರೆ ಶಾಕ್‌ ಆಗ್ರೀರಾ

ಹೀಗೆ ಮಾಡುವುದರಿಂದ ಶೂಗಳ ಬಗ್ಗೆ ಪದೇ ಪದೇ ತಲೆಕೆಡಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ವ್ಯಕ್ತಿಯ ಆಲೋಚನೆಯಾಗಿದೆ. ಹೀಗಾಗಿ ಅವನು ಶೂ ಕೊಳ್ಳುವ ಬದಲು ಶೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

Written by - Bhavishya Shetty | Last Updated : Jun 15, 2022, 05:10 PM IST
ಶೂ ಖರೀದಿಸಿ ಸುಸ್ತಾದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಆತನ ಕೆಲಸ ನೋಡಿದ್ರೆ ಶಾಕ್‌ ಆಗ್ರೀರಾ title=
Nike Shoes

ಪದೇ ಪದೇ ಶೂ ಕಿತ್ತುಹೋಗೋದು ಒಂದೆಡೆಯಾದ್ರೆ ಅದಕ್ಕೆ ದುಡ್ಡು ಖರ್ಚು ಮಾಡಿ ಖರೀದಿಸೋ ಚಿಂತೆ ಇನ್ನೊಂದು ಕಡೆ. ಇವೆಲ್ಲದರಿಂದ ಬೇಸತ್ತ ವ್ಯಕ್ತಿಯೋರ್ವ ಕೆಲಸವೊಂದನ್ನು ಮಾಡಿದ್ದು, ಒಂದಿಷ್ಟು ನಗೆಪಾಟಲಿಗೀಡು ಮಾಡಿದೆ. ಈ ವ್ಯಕ್ತಿ ಹಣ ಉಳಿಸೋ ಉದ್ದೇಶದಿಂದ ಕಾಲಿಗೆ ಹಚ್ಚೆ ಹಾಕಿಸಿಕೊಂಡಿದ್ದಾನೆ. 

ಇದನ್ನು ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದನೇ ದುಬೈ ಮೂಲದ ಎನ್‌ಆರ್‌ಐ!  

ದಕ್ಷಿಣ ಆಫ್ರಿಕಾದ ಪ್ರಸಿದ್ಧ ಹಚ್ಚೆ ಕಲಾವಿದ ಡೀನ್ ಗುಂಥರ್ ಅವರು ಈ ಟ್ಯಾಟೂ ಹಾಕಿದ್ದಾನೆ. ಕಲಾವಿದನ 10 ಗಂಟೆಗಳ ಕಠಿಣ ಪರಿಶ್ರಮದ ನಂತರ, ತನ್ನ ಗ್ರಾಹಕನಿಗೆ ಬೂಟ್‌ನ ಹಚ್ಚೆಯನ್ನು ಹಾಕಿದ್ದಾನೆ. ವಾಸ್ತವವಾಗಿ, ಗ್ರಾಹಕನ ಬೇಡಿಕೆಯ ಪ್ರಕಾರ, ಅವನು ತನ್ನ ಕಾಲುಗಳ ಮೇಲೆ ನೈಕ್ ಶೂಸ್‌ನ ಟ್ಯಾಟೂ ಹಾಕಿಸಿಕೊಳ್ಳಬೇಕಿತ್ತು. ಹೀಗೆ ಮಾಡುವುದರಿಂದ ಶೂಗಳ ಬಗ್ಗೆ ಪದೇ ಪದೇ ತಲೆಕೆಡಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ವ್ಯಕ್ತಿಯ ಆಲೋಚನೆಯಾಗಿದೆ. ಹೀಗಾಗಿ ಅವನು ಶೂ ಕೊಳ್ಳುವ ಬದಲು ಶೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಈ ಮೊದಲು ಕೂಡ ಈ ಟ್ಯಾಟೂ ಕಲಾವಿದನ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿಂದೆ ಕಲಾವಿದನೊಬ್ಬನ ಹೊಟ್ಟೆಯ ಮೇಲೆ ಸಿಕ್ಸ್ ಪ್ಯಾಕ್‌ ಹಚ್ಚೆಗಳನ್ನು ಬಿಡಿಸಿದ್ದಾರೆ. ಕಲಾವಿದನ ಕಲಾಚಾತುರ್ಯದಿಂದ ಗ್ರಾಹಕನ  ದೇಹವನ್ನು ಯಾರೂ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕೆಲಸವೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಕಾಲಿಗೆ ಶೂ ತರಹದ ಹಚ್ಚೆ ಹಾಕಲಾಗಿದ್ದು, ಇದೂ ಸಹ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.   

ಇದನ್ನು ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದನೇ ದುಬೈ ಮೂಲದ ಎನ್‌ಆರ್‌ಐ!

ಡೀನ್ ಗುಂಥರ್  ಈ ಕೆಲಸವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ, 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ಬಗ್ಗೆ ಅನೇಕ ಬಳಕೆದಾರರಿಂದ ವಿಭಿನ್ನ ಪ್ರತಿಕ್ರಿಯೆಳು ಬಂದಿವೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News