ಮಹಾರಾಷ್ಟ್ರ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಮದುವೆ ಸಮಾರಂಭದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುಮಕ್ಕಳಿಗೆ ಸಂಬಂಧಿಕರ, ಸ್ನೇಹಿತರು ಕುಚೇಷ್ಠೆ ಮಾಡುವುದು, ಡ್ಯಾನ್ಸ್ ಮಾಡುವುದು, ಹಾಡು ಹಾಡುವದು ಮತ್ತು ಊಟಕ್ಕಾಗಿ ಕ್ಯಾತೆ ತೆಗೆಯುವುದು ಇದೆಲ್ಲಾ ಮಾಮೂಲಿಯಾಗಿ ನಡೆಯುತ್ತಿರುತ್ತದೆ. ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಹೌದು, ಮದುವೆಗೆ ಬಂದಿದ್ದ ಎಲ್ಲರೂ ಸಂಭ್ರಮದಲ್ಲಿದ್ದರು. ಇನ್ನೇನು ಮದುವೆ ಗಂಡು ತಾಳಿ ಕಟ್ಟಬೇಕು ಅನ್ನೋ ಟೈಮಿನಲ್ಲಿ ದೊಡ್ಡ ಎಡವಟ್ಟಾಗಿದೆ. ಎಷ್ಟೇ ಕೂಗಿ ಕೂಗಿ ಕರೆದರೂ ವಧುವಿನ ಮಾತಿಗೆ ಬೆಲೆ ಕೊಡದ ವರ ನೃತ್ಯ ಮಾಡುತ್ತಲೇ ಇದ್ದ. ಹೀಗಾಗಿ ವಿಧಿ ಇಲ್ಲದೆ ವಧು ತನ್ನ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ.
ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಮಲ್ಕಾಪುರ್ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಧುವಿಗೆ ತಾಳಿ ಕಟ್ಟುವ ಮುನ್ನ ಸಂಭ್ರಮದಲ್ಲಿದ್ದ ಮದುವೆ ಗಂಡು ಸಂಬಂಧಿಕರ ಜೊತೆ ಸೇರಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡುತ್ತಿದ್ದ. ಇದನ್ನು ಮಂಟಪದಲ್ಲಿದ್ದ ಮಧು ಸ್ವಲ್ಪ ಹೊತ್ತು ನೋಡಿ ಖುಷಿಪಟ್ಟಿದ್ದಾಳೆ. ಆದರೆ ವರನಿಗೆ ಅತ್ಯುತ್ಸಾಹ ಬಂದು ನೃತ್ಯವನ್ನೇ ಮುಂದುವರೆಸಿದ್ದಾನೆ. ಹೀಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ವರನು ವಧುವನ್ನು ಮರೆತುಬಿಟ್ಟಿದ್ದಾನೆ.
ಇದನ್ನೂ ಓದಿ: Snake Video : ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಾವುಗಳ ಮಿಲನ ಮಹೋತ್ಸವ!
ತಾನು ಮದುವೆಯಾಗಬೇಕಾಗಿದ್ದ ಯುವತಿಯನ್ನೇ ಮರೆತು ವರ ಡ್ಯಾನ್ಸ್ ಮಾಡುವುದುನ್ನು ಮುಂದುವರೆಸಿದ್ದಾನೆ. ಈ ವೇಳೆ ವೇದಿಕೆಯಲ್ಲಿದ್ದ ವಧು ಎಷ್ಟೇ ಕೂಗಿ ಕೂಗಿ ಕರೆದರೂ ವರ ಆಕೆಯ ಮಾತಿಗೆ ಕಿವಿಗೊಟ್ಟಿಲ್ಲ. ಇದರಿಂದ ಆಕೆಗೆ ವಿಪರಿತ ಕೋಪ ಬಂದಿದೆ. ಸಿಟ್ಟಾದ ಆಕೆ ಆತನನ್ನು ನಾನು ಮದುವೆಯಾಗುವುದಲ್ಲವೆಂದು ಹೇಳಿದ್ದಾಳೆ.
ಮನೆಯವರು ನಿರ್ಧರಿಸಿದ್ದ ಹುಡುಗನನ್ನು ತಾಳಿಕಟ್ಟುವ ಕೊನೆ ಕ್ಷಣದಲ್ಲಿ ನಿರಾಕರಿಸಿದ ಯುವತಿ ಮದುವೆಗೆ ಬಂದಿದ್ದ ತನ್ನ ಸ್ನೇಹಿತನೊಂದಿಗೆ ಮದುವೆಯಾಗಿದ್ದಾಳೆ. ವರದಿಗಳ ಪ್ರಕಾರ ಮದುವೆ ಸಂಭ್ರಮದಲ್ಲಿದ್ದ ಹುಡುಗ ಮತ್ತು ಆತನ ಸಂಬಂಧಿಕರು ಕಂಠಪೂರ್ತಿ ಕುಡಿದು ಮನಬಂದಂತೆ ಡ್ಯಾನ್ಸ್ ಮಾಡಿದ್ದಾರೆ.
ಹಲವು ಗಂಟೆ ಕಾದರೂ ನೃತ್ಯ ನಿಲ್ಲಸದೆ ಹುಚ್ಚಾಟ ಮಾಡಿದ್ದಾರೆ. ಇದರಿಂದ ಯುವತಿಯ ಕೋಪ ನೆತ್ತಿಗೇರಿದೆ. ಹೀಗಾಗಿ ಆಕೆ ಆತನನ್ನು ತಾನು ಮದುವೆಯಾಗುವುದಿಲ್ಲವೆಂದು ಖಂಡ-ತುಂಡವಾಗಿ ಹೇಳಿದ್ದಾಳೆ. ಈ ವೇಳೆ ಹುಡುಗನ ಸಂಬಂಧಿಕರು ವಧುವಿನ ತಂದೆ ಮತ್ತು ಸಂಬಂಧಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಬೇಸರಗೊಂಡ ವಧುವಿನ ಕುಟುಂಬಸ್ಥರು ಮದುವೆಗೆ ಬಂದಿದ್ದ ಆಕೆಯ ಸ್ನೇಹಿತನೊಂದಿಗೆ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: Viral Video: ಜಿಮ್‍ನಲ್ಲಿ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.