Viral News: ಖ್ಯಾತ ರೆಸ್ಟೊರೆಂಟ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸಿಗರೇಟ್!‌

Cigarettes in ordered food: ಖ್ಯಾತ ರೆಸ್ಟೊರೆಂಟ್‌ನಲ್ಲಿ ಆರ್ಡರ್‌ ಮಾಡಿ ತರಿಸಿದ ಆಹಾರದಲ್ಲಿ ಸಿಗರೇಟ್ ತುಂಡು ಕಂಡುಬಂದಿದ್ದು, ಅದನ್ನು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

Written by - Savita M B | Last Updated : Nov 6, 2023, 02:35 PM IST
  • ಜನಪ್ರಿಯ ರೆಸ್ಟೋರೆಂಟ್ ನಿಂದ ತನ್ನ ಒಂದೂವರೆ ವರ್ಷದ ಮಗುವಿಗಾಗಿ ತರಿಸಿದ ಆಹಾರದಲ್ಲಿ ಸಿಗರೇಟ್ ತುಂಡು
  • ಸಿಗರೇಟ್ ತುಂಡುಗಳು ಮತ್ತು ಸಿಗರೇಟ್ ಬೂದಿ ಕಂಡು ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದಾರೆ.
  • ಸದ್ಯ ಆ ಪೋಸ್ಟ್‌ ವೈರಲ್‌ ಆಗಿದೆ
Viral News: ಖ್ಯಾತ ರೆಸ್ಟೊರೆಂಟ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸಿಗರೇಟ್!‌  title=

Viral News: ಜನಪ್ರಿಯ ರೆಸ್ಟೋರೆಂಟ್ ನಿಂದ ತನ್ನ ಒಂದೂವರೆ ವರ್ಷದ ಮಗುವಿಗಾಗಿ ತರಿಸಿದ ಆಹಾರದಲ್ಲಿ ಸಿಗರೇಟ್ ತುಂಡುಗಳು ಮತ್ತು ಸಿಗರೇಟ್ ಬೂದಿ ಕಂಡು ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದಾರೆ. ಹ್ಯಾಪಿ ಮೀಲ್ಸ್ ಮತ್ತು ಕೆಲವು ಫ್ರೆಂಚ್ ಫ್ರೈಗಳನ್ನು ಆರ್ಡರ್‌ ಮಾಡಿದ ಮಹಿಳೆ ಪಾರ್ಸೆಲ್ ಪ್ಯಾಕೆಟ್ ತೆರೆದಾಗ ಫ್ರೆಂಚ್‌ ಪ್ರೈಸ್‌ನ ಬಣ್ಣದಲ್ಲೇ ಸಿಗರೇಟ್ ಕಂಡು ಬಂದಿದೆ.. 

 

ಇದನ್ನೂ ಓದಿ-ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ: ದಂಪತಿ ಪ್ರಾಣಾಪಾಯದಿಂದ ಪಾರು!

ನಂತರ ಈ ದೃಶ್ಯವನ್ನು ತನ್ನ ಫೋನ್‌ನಲ್ಲಿ ಸೆರೆಹಿಡಿದ ಮಹಿಳೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾಳೆ. ಅದರ ಬಗ್ಗೆ ಪೋಸ್ಟ್‌ನಲ್ಲಿ, “ಮಕ್ಕಳಿಗಾಗಿ ಕುರುಕುಲು ತಿಂಡಿಗಳನ್ನು ತರಿಸುವುದನ್ನು ತಪ್ಪಿಸಿ.. ಇಲ್ಲವಾದರೇ ಕಾಳಜಿ ವಹಿಸಿ" ಎಂದು ಬರೆದುಕೊಂಡಿದ್ದಾರೆ.. 

ಇದನ್ನೂ ಓದಿ-ಕೆ‌ಪಿ‌ಎಸ್‌ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ: ಜೆಡಿಎಸ್

ಅಲ್ಲದೇ "ಇತ್ತೀಚಿನ ದಿನಗಳಲ್ಲಿ, ಮಕ್ಕಳ ಆಹಾರಕ್ಕೆ ರುಚಿಯನ್ನು ಸೇರಿಸಲು ಸಿಗರೇಟ್ ತುಂಡುಗಳು ಮತ್ತು ಬೂದಿಯನ್ನು ಸೇರಿಸಲಾಗುತ್ತದೆ. ಹೀಗಾಗಿ ನಾನು ದೂರು ನೀಡಲು ರೆಸ್ಟೋರೆಂಟ್ಗೆ ಕರೆ ಮಾಡಿದೆ. ಆದರೆ ತುಂಬಾ ದುರಹಂಕಾರದಿಂದ ಮಾತನಾಡಿದ ಮಹಿಳಾ ಸಿಬ್ಬಂದಿ ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಫೋನ್ ಕಟ್ ಮಾಡಿದ್ದಾರೆ." ಎಂದು ಹೇಳಿಕೊಂಡಿದ್ದಾರೆ. ಇನ್ನು ಫೇಸ್ ಬುಕ್ ನಲ್ಲಿ ಅವರ ಪೋಸ್ಟ್ ಗೆ ನೆಟಿಜನ್ ಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News