Viral News: ಮದುವೆ ವೇಳೆ ವರನ ತಲೆಯಿಂದ ಕಳಚಿಬಿದ್ದ ವಿಗ್, ಆಮೇಲೇನಾಯ್ತು ಗೊತ್ತಾ..?

ಮದುವೆಯಾಗಲು ಸಜ್ಜಾಗಿದ್ದ ವರ ತಾನು ಬೋಳು ತಲೆ ಹೊಂದಿರುವುದನ್ನು ಮುಚ್ಚಿಟ್ಟಿದ್ದ. ಆದರೆ, ಆತನ ಬಣ್ಣ ವರಮಾಲಾ ಕಾರ್ಯಕ್ರಮದ ವೇಳೆ ಬಯಲಾಗಿದೆ.

Written by - Puttaraj K Alur | Last Updated : May 23, 2022, 08:10 PM IST
  • ವರಮಾಲಾ ಕಾರ್ಯಕ್ರಮದಲ್ಲಿ ಬಯಲಾಯ್ತು ವರನ ಬಣ್ಣ
  • ವರನ ಬೋಳು ತಲೆಯ ಕಾರಣ ಮುರಿದುಬಿದ್ದ ಮದುವೆ
  • ವರನ ತಲೆಯಿಂದ ಕಳಚಿಬಿದ್ದ ವಿಗ್, ಮದುವೆ ಬೇಡವೆಂದ ವಧು
Viral News: ಮದುವೆ ವೇಳೆ ವರನ ತಲೆಯಿಂದ ಕಳಚಿಬಿದ್ದ ವಿಗ್, ಆಮೇಲೇನಾಯ್ತು ಗೊತ್ತಾ..? title=
ವರನ ತಲೆಯಿಂದ ಕಳಚಿಬಿದ್ದ ವಿಗ್!

ನವದೆಹಲಿ: ‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಅನ್ನೋದು ಹಿರಿಯರ ಗಾದೆಮಾತು. ಮದುವೆಯಾಗುವ ಜೀವನ ಸಂಗಾತಿಯಿಂದ ತಪ್ಪುಗಳನ್ನು ಮುಚ್ಚಿಡದೆ ಎಲ್ಲಾ ಸತ್ಯಗಳನ್ನು ಹೇಳಿಬಿಡಬೇಕು. ಇಲ್ಲದಿದ್ದರೆ ದೊಡ್ಡ ಅನಾಹುತಗಳೇ ನಡೆಯುತ್ತವೆ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ಮದುವೆಯಾಗಲು ಹೋಗಿ ಅನೇಕರು ಮುಜುಗರ ಅನುಭವಿಸಿದ ಘಟನೆಗಳು ನಡೆದಿವೆ.

ಇದಕ್ಕೆ ತಾಜಾ ನಿದರ್ಶನವೇ ಈ ಮದುವೆ ಘಟನೆ. ಇಲ್ಲಿ ವರ ತಾನು ಬೋಳು ತಲೆ ಹೊಂದಿದ್ದೇನೆಂಬ ಸತ್ಯವನ್ನ ಮರೆಮಾಚಿದ್ದ. ಆದರೆ ಮದುವೆ ಮಂಟಪದಲ್ಲಿ ಆತನ ಬಣ್ಣ ಬಟಾಬಯಲಾಗಿದೆ. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಉನ್ನಾವೊದಲ್ಲಿ.  

ವರಮಾಲಾ ಕಾರ್ಯಕ್ರಮದ ವೇಳೆ ಕಳಚಿದ ವಿಗ್!

ಉನ್ನಾವೊದಲ್ಲಿ ಇನ್ನೇನು ಸಪ್ತಪತಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ಅಂದುಕೊಂಡಿದ್ದ ವರನಿಗೆ ಶಾಕ್ ಆಗಿದೆ. ವರಮಾಲಾ ಕಾರ್ಯಕ್ರಮದ ವೇಳೆ ಇದ್ದಕ್ಕಿದ್ದಂತೆಯೇ ವರನ ತಲೆಯಿಂದ ವಿಗ್ ಕಳಚಿಬಿದ್ದಿದೆ. ಇದರಿಂದ ಮುಜುಗರಕ್ಕೊಳಗಾದ ವರ ತಲೆತಗ್ಗಿಸಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಎಲ್ಲರ ಎದುರೇ ವರನ ವಿಗ್ ಕಳಚಿ ಕಳೆಗೆ ಬಿದ್ದಿದ್ದರಿಂದ ವಧುವಿನ ಸಿಟ್ಟು ನೆತ್ತಿಗೇರಿದೆ. ಪರಿಣಾಮ ತನಗೆ ವಂಚಿಸಲು ಸಜ್ಜಾಗಿದ್ದ ವರನಿಗೆ ಕೋಪದಲ್ಲಿ ಬೈದು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ್ದಾಳೆ.

ಇದನ್ನೂ ಓದಿ: Guinness Record: 50 ವರ್ಷಗಳ ಕಾಲ ಬರ್ಗರ್ ತಿಂದು ವಿಶ್ವದಾಖಲೆ ಮಾಡಿದ ವ್ಯಕ್ತಿ

ಮದುವೆಯಾಗಲು ಸಜ್ಜಾಗಿದ್ದ ವರ ತಾನು ಬೋಳು ತಲೆ ಹೊಂದಿರುವುದನ್ನು ಮುಚ್ಚಿಟ್ಟಿದ್ದ. ಆದರೆ, ಆತನ ಬಣ್ಣ ವರಮಾಲಾ ಕಾರ್ಯಕ್ರಮದ ವೇಳೆ ಬಯಲಾಗಿದೆ. ಬೋಳು ತಲೆ ವರನನ್ನು ಮದುವೆಯಾಗಲು ವಧು ನಿರಾಕರಿಸಿ ಕಣ್ಣೀರು ಹಾಕಿ ಮದುವೆ ಮಂಟಪದಿಂದ ಕೆಳಗಿಳಿದು ಹೋಗಿದ್ದಾಳೆ.

ವೇದಿಕೆ ಮೇಲೆ ಪ್ರಜ್ಞೆ ತಪ್ಪಿದ ವರ!

ಸಫಿಪುರ್ ಕೊತ್ವಾಲಿ ಪ್ರದೇಶದ ಪರಿಯಾರ್ ನಿವಾಸಿ ಲಖನ್ ಕಶ್ಯಪ್ ಅವರ ಪುತ್ರಿ ನಿಶಾ ಮತ್ತು ಕಲ್ಯಾಣಪುರದ ಆವಾಸ್ ವಿಕಾಸ್ ಕಾಲೋನಿ ನಿವಾಸಿ ಪಂಕಜ್ ಅವರ ಪುತ್ರ ಅಶೋಕ್ ಕುಮಾರ್ ಕಶ್ಯಪ್ ಅವರೊಂದಿಗೆ ಮೇ 20 ರಂದು ಸ್ಥಳೀಯ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ವಧು-ವರರು ವರಮಾಲಾ ಕಾರ್ಯಕ್ರಮಕ್ಕೆ ವೇದಿಕೆ ತಲುಪಿದರು. ಇಬ್ಬರೂ ಕೈಯಲ್ಲಿ ಹೂಮಾಲೆ ಹಿಡಿದುಕೊಂಡು ಒಬ್ಬರಿಗೊಬ್ಬರು ಸಾಗುತ್ತಿದ್ದ ವೇಳೆ ವರನಿಗೆ ತಲೆ ಸುತ್ತು ಬಂದು ವೇದಿಕೆಯ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಇದನ್ನೂ ಓದಿ: Shocking: ಪಂಜರದಲ್ಲಿರುವ ಸಿಂಹದ ಜೊತೆಗೆ ಚೆಲ್ಲಾಟ, ನೋಡುತ್ತಲೇ ನಡೆದ್ಹೋಯ್ತು ಈ ಘಟನೆ

ಬೋಳು ತಲೆಯಿಂದ ಬಿದ್ದ ವಿಗ್!

ಮದುವೆ ಸಮಾರಂಭದಲ್ಲಿ ವರನಿಗೆ ಮೂರ್ಛೆ ಬಂದು ಬಿದ್ದಿದ್ದರಿಂದ ನೆರೆದಿದ್ದ ಬಂಧು-ಬಳಗ ಮತ್ತು ಅತಿಥಿಗಳು ಒಂದುಕ್ಷಣ ಗಾಬರಿಯಾಗಿದ್ದರು. ವಧುವಿನ ಸಹೋದರ ಕೂಡಲೇ ವರನನ್ನು ಸೋಫಾ ಮೇಲೆ ಮಲಗಿಸಿ ಮುಖಕ್ಕೆ ನೀರು ಚಿಮುಕಿಸಿ ಆತನ ತಲೆಕೂದಲ ಮೇಲೆ ಕೈಯಾಡಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ವರನ ತಲೆಯಿಂದ ವಿಗ್ ಹೊರಬಂದು ನಿತಿನ್ ಕೈಗೆ ಸೇರಿದೆ. ವರನ ಬೋಳುತಲೆ ನೋಡಿದ ಹುಡುಗಿಗೆ ಒಂದುಕ್ಷಣ ಗಾಬರಿಯಾಗಿದೆ. ಇದರಿಂದ ದಿಗ್ಭ್ರಮೆಗೊಂಡ ಆಕೆ ನನಗೆ ಈ ಮದುವೆ ಬೇಡ ಅಂತಾ ಹೇಳಿ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದಾಳೆ. ತನ್ನ ಮಗಳನ್ನು ವರ ವಂಚಿಸಿದ್ದಾನೆಂದು ಆಕೆಯ ತಂದೆ ಆರೋಪಿಸಿ ಗಲಾಟೆ ಮಾಡಿದ್ದಾರೆ. ವರನ ಬೋಳುತಲೆ ಕಾರಣಕ್ಕೆ ಮದುವೆಯೇ ಮುರಿದುಬಿದ್ದಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News