Viral Video: ಯಾವುದೇ ಓರ್ವ ವ್ಯಕ್ತಿಯ ಉದ್ದೇಶ ಯಾವಾಗ ಬದಲಾಗುತ್ತವೆ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟಸಾಧ್ಯವೇ ಹೌದು. ನಮ್ಮ ಸುತ್ತಮುತ್ತಲು ಓಡಾಡಿಕೊಂಡು ಇರುವ ಜನರ ಬಗ್ಗೆ ನಾವು ಸಾಕಷ್ಟು ಜಾಗರೂಪರಾಗಿರಬೇಕು. ಏಕೆಂದರೆ ನಾವು ಸ್ವಲ್ಪ ಮೈಮರೆತರೆ ಅವರು ನಮ್ಮೊಂದಿಗೆ ಏನು ಬೇಕಾದರೂ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (Woman Robbery In Lift Viral Video). ಈ ವೈರಲ್ ವೀಡಿಯೋ ಯಾವಾಗ ಮತ್ತು ಎಲ್ಲಿಂದ ಹೊರಹೊಮ್ಮಿದೆ ಅಥವಾ ಇದು ರೀಲ್ ಅಥವಾ ನಿಜವೇ ಎಂಬುದರ ಮಾಹಿತಿಯನ್ನು ನಾವು ಖಚಿತಪಡಿಸುವುದಿಲ್ಲ. ಆದರೆ ಈ ವೀಡಿಯೋ ನೋಡಿದ ಬಳಿಕ ನೀವೂ ಕೂಡ ಶಾಕ್ ಆಗುವಿರಿ. (Viral News In Kannada)
ಇದನ್ನೂ ಓದಿ-Viral Video: ಸಾರಾಯಿ-ಚಕನಾ ಹಿಡಿದು ಸ್ಕೂಲ್ ಗೆ ಆಗಮಿಸಿದ ಶಿಕ್ಷಕ, ಮೇಜಿನ ಮೇಲೆಯೇ ಪೆಗ್ ತಯಾರಿಸಿ!
ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ (Shocking Video) ಮಹಿಳೆಯೊಬ್ಬರು ಲಿಫ್ಟ್ ಹತ್ತಿದ್ದನ್ನು ನೀವು ನೋಡಬಹುದು ಮತ್ತು ಆಕೆ ತನ್ನ ಮುಖಕ್ಕೆ ಫೇಸ್ ಮಾಸ್ಕ್ ಧರಿಸಿದ್ದಾಳೆ. ಸ್ವಲ್ಪ ಹೊತ್ತು ಆಕೆ ಲಿಫ್ಟ್ ನಲ್ಲಿ ಮೆಲಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಹೋಗುತ್ತಾ ನಿರೀಕ್ಷೆ ಮಾಡುತ್ತಾಳೆ. ಇದಾದ ಬಳಿಕ ಮತ್ತೊರ್ವ ಮಹಿಳೆ ಲಿಫ್ಟ್ ಹತ್ತುತ್ತಾಳೆ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿರುವ ಮಹಿಳೆ ಕರವಸ್ತ್ರದಲ್ಲಿ ಪ್ರಜ್ನೆ ತಪ್ಪಿಸುವ ಔಷಧಿ ಹಾಕಿ ಮುಂದಿನ ಮಹಿಳೆಯನ್ನು ಪ್ರಜ್ಞಾಹೀನನನ್ನಾಗಿಸುತ್ತಾಳೆ. ನಂತರ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಪ್ರಾರಿಯಾಗುತ್ತಾಳೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊವನ್ನು X ನಲ್ಲಿ @sanjayjourno ಅವರು ಹಂಚಿಕೊಳ್ಳಲಾಗಿದೆ, ಇದುವರೆಗೆ ಇದನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ-Viral Video: ಸಾರಾಯಿ-ಚಕನಾ ಹಿಡಿದು ಸ್ಕೂಲ್ ಗೆ ಆಗಮಿಸಿದ ಶಿಕ್ಷಕ, ಮೇಜಿನ ಮೇಲೆಯೇ ಪೆಗ್ ತಯಾರಿಸಿ!
ವೈರಲ್ ವಿಡಿಯೋಗೆ ಜನರ ಪ್ರತಿಕಿರಿಯೆ ಹೇಗಿದೆ?
ಈ ವೈರಲ್ ವೀಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಮಹಿಳಾ ಬಳಕೆದಾರರು ' ಅರೆ ನಾನು ಆಗಾಗ್ಗೆ ಲಿಫ್ಟ್‌ನಲ್ಲಿ ಮೇಲಕ್ಕೆ ಮತ್ತು ಕೆಳಗೆ ಹೋಗುತ್ತೇನೆ, ಇಂತಹ ವೀಡಿಯೊ ನೋಡಿ ನನಗೆ ಹೆದರಿಕೆಯಾಗುತ್ತಿದೆ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು 'ಜನರು ಚಲನಚಿತ್ರಗಳಲ್ಲಿ ಮಾತ್ರ ಮೂರ್ಛೆ ಹೋಗುತ್ತಾರೆ ಮತ್ತು ವಾಸ್ತವದಲ್ಲಿ ಅಲ್ಲ' ಎಂದಿದ್ದಾರೆ. ಮೂರನೇ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ 'ಇದು ರೀಲ್, ಬ್ರೋ, ಇದು ನಿಜವಾದ ವಿಡಿಯೋ ಅಲ್ಲ' ಎಂದು ಬರೆದಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ
वायरल वीडियो कब और कहाँ का है? रील है या रियल है? नहीं मालूम!!! लेकिन सतर्क करने वाला है। pic.twitter.com/2J4zThVKVi
— SANJAY TRIPATHI (@sanjayjourno) February 29, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ