Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿವಿಧ ರೀತಿಯ ವಿಡಿಯೋಗಳನ್ನು ನೀವು ನೋಡಿರಬಹುದು. ಕೆಲ ವಿಡಿಯೋಗಳು ವೀಕ್ಷಿಸಲು ಸಾಕಷ್ಟು ಆಸಕ್ತಿದಾಯಕವಾಗಿರುತ್ತವೆ ಮತ್ತು ಅವುಗಳಿಂದ ನೀವು ಏನನ್ನಾದರೂ ಕಲಿಯಬಹುದು. ಕೆಲವು ವೀಡಿಯೋಗಳಲ್ಲಿ ಯಾವುದೇ ವಿಷಯದ ಚರ್ಚೆ ಇರುವುದಿಲ್ಲ ಅವುಗಳನ್ನು ನೋಡಿದ ನಂತರ ನಮಗೆ ತುಂಬಾ ತಮಾಷೆ ಅನ್ನಿಸುತ್ತವೆ. ಅಂತಹುದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ಹುಡುಗ ಮಾಲ್ನಲ್ಲಿ ಬಟ್ಟೆ ಬದಲಾಯಿಸುವ ಕೋಣೆಗೆ ಪ್ರವೇಶಿಸುತ್ತಾನೆ ಮತ್ತು ನಂತರ ಹುಡುಗಿಯ ಧ್ವನಿ ಬರಲು ಪ್ರಾರಂಭಿಸುತ್ತದೆ. (Viral News In Kannada)
ಮಾಲ್ನಲ್ಲಿ ಹುಡುಗನ ಚೇಷ್ಟೆ
ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಸಾಕಷ್ಟು ತಮಾಷೆಯ ವಿಡಿಯೋಗಳನ್ನು ವೀಕ್ಷಿಸಿರಬಹುದು. ಆದರೆ ಈ ವಿಡಿಯೋ ಸ್ವಲ್ಪ ಡಿಫರೆಂಟ್ ಆಗಿದೆ. ಈ ರೀತಿಯ ಚೇಷ್ಟೆ ಈ ಹಿಂದೆ ಎಂದೂ ನೀವೂ ನೋಡಿರಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬಾಲಕನೊಬ್ಬ ಮಾಲ್ಗೆ ಹೋಗಿದ್ದಾನೆ. ನಂತರ ಅವನು ಮಾಲ್ನ ಬಟ್ಟೆ ಬದಲಾಯಿಸುವ ಕೋಣೆಗೆ ಪ್ರವೇಶಿಸುತ್ತಾನೆ. ಬಳಿಕ ಕೋಣೆಯಿಂದ ಸ್ವಲ್ಪ ಬಳಿಕ ಹುಡುಗನ ಜೊತೆಗೆ ಹುಡುಗಿಯ ಧ್ವನಿಯೂ ಬರಲು ಶುರುವಾಗುತ್ತದೆ. ಹುಡುಗ-ಹುಡುಗಿಯ ನಡುವಿನ ಸಂಭಾಷಣೆಯಿಂದ ಒಳಗೆ ಏನಾದರೂ ಗಂಭೀರವಾದ ಘಟನೆ ನಡೆಯುತ್ತಿದೆ ಎಂಬಂತೆ ತೋರುತ್ತದೆ. ಮಾಲ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಿವಿಗೆ ಬೀಳುವಷ್ಟು ಜೋರಾಗಿ ಧ್ವನಿ ಕೇಳಿಸಲು ಆರಂಭವಾಗುತ್ತದೆ.
ಇದನ್ನೂ ಓದಿ-Viral Video: Live ರಿಪೋರ್ಟಿಂಗ್ ವೇಳೆ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿಕೊಳ್ಳಲಾರಂಭಿಸಿದ ವರದಿಗಾರ್ತಿ!
ಸ್ವಲ್ಪ ಸಮಯದ ನಂತರ, ಬಟ್ಟೆ ಬದಲಾಯಿಸುವ ಆ ಕೋಣೆಯ ಬಾಗಿಲಿನ ಮುಂದೆ ಮಾಲ್ ಉದ್ಯೋಗಿಗಳ ಗುಂಪೆ ನೆರೆಯುತ್ತದೆ. ಅವರು ಹುಡುಗನನ್ನು ಹೊರಗೆ ಬರಲು ವಿನಂತಿಸುತ್ತಾರೆ. ಅವನು ಹೊರಗೆ ಬರುತ್ತಾನೆ. ಮಾಲ್ ಸಿಬ್ಬಂದಿ ಅವನಿಗೆ 'ನೀವು ಏನು ಮಾಡುತ್ತಿದ್ದೀರಿ? ಇದಕ್ಕೆಲ್ಲ ಇಲ್ಲಿ ಅವಕಾಶವಿಲ್ಲ ಎಂಬ ಸಮಜಾಯಿಸಿ ಹೇಳುತ್ತಾರೆ. ಆದರೆ ಹುಡುಗ ಮಾತ್ರ ನಾನೇನೂ ಮಾಡಿಲ್ಲ, ಒಳಗೆ ನಾನೊಬ್ಬನೇ ಇದ್ದೆ ಎನ್ನುತ್ತಾನೆ. ಇದಾದ ನಂತರ ಮಾಲ್ ಉದ್ಯೋಗಿಗಳು ಬಟ್ಟೆ ಬದಲಾಯಿಸುವ ಕೊಠಡಿಯೊಳಗೆ ಹೋಗಿ ನೋಡುತ್ತಾರೆ. ಅಲ್ಲಿ ಯಾವ ಹುಡುಗಿಯೂ ಅವರಿಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ, ಹುಡುಗ ಹುಡುಗಿಯ ಧ್ವನಿಯನ್ನು ಅನುಕರಿಸುವ ಮೂಲಕ ಮಾಲ್ ಉದ್ಯೋಗಿಗಳ ಜೊತೆಗೆ ಚೇಷ್ಟೆ ಮಾಡುತ್ತಿದ್ದ ಎಂಬುದು ಸ್ಪಸ್ತವಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜನರು ಕೂಡ ಸಾಕಷ್ಟು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ
ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X ನಲ್ಲಿ @terakyalenadena ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ವಿಡಿಯೋವನ್ನು ಸುಮಾರು 1.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊಗೆ ಜನರಿಂದ ವಿವಿಧ ರೀತಿಯ ಕಾಮೆಂಟ್ಗಳು ಬರುತ್ತಿವೆ. ಈ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ, 'ಏಟು ತಿನ್ನುವ ವಿಧಾನವು ಸ್ವಲ್ಪ ಸಾಂದರ್ಭಿಕವಾಗಿದೆ' ಎಂದು ಬರೆದಿದ್ದಾನೆ, ಮತ್ತ್ರೋವ ಬಳಕೆದಾರರು 'ನಿಜವಾದ ಮೋಯೆ-ಮೋಯೆ ಅಂದ್ರೆ ಇದು' ಎಂದು ಬರೆದಿದ್ದಾರೆ, ಮೂರನೇ ಬಳಕೆದಾರರು 'ಯಾವ ದಿನ ಈತನಿಗೆ ಒದೆ ಬೀಳುತ್ತೋ, ಆಗ ಇಂತಹ ಕೆಟ್ಟ ಫ್ರಾಂಕ್ ಮಾಡುವುದನ್ನು ಈತ ನಿಲ್ಲಿಸುತ್ತಾನೆ' ಎಂದು ಆಕ್ರೋಶ ಹೊರಹಾಕಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Staff ke sath Moye Moye ho gaya 😂 pic.twitter.com/ZQ4gVraSm2
— Ankit (@terakyalenadena) February 3, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.