Viral Video: ಸಾವಿನಲ್ಲೂ ಸಾರ್ಥಕತೆ ಮೆರೆದ ತಾಯಿ ಹೃದಯ..ತನ್ನ ಮರಿಗಳನ್ನು ಉಳಿಸಿಕೊಳ್ಳಲು ಈ ಪಕ್ಷಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

Viral video: ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ತನ್ನ ಮರಿಗಳನ್ನು ಕ್ರೂರ ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋವನ್ನು ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ.   

Written by - Zee Kannada News Desk | Last Updated : Oct 14, 2024, 10:44 AM IST
  • ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ.
  • ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ.
  • ವಿಡಿಯೋ ನೋಡಿದ ನೆಟ್ಟಿಗರು ಮಾತೃ ತ್ಯಾಗ ನೋಡಿ ಕಣ್ಣೀರಿಟ್ಟಿದ್ದಾರೆ.
Viral Video: ಸಾವಿನಲ್ಲೂ ಸಾರ್ಥಕತೆ ಮೆರೆದ ತಾಯಿ ಹೃದಯ..ತನ್ನ ಮರಿಗಳನ್ನು ಉಳಿಸಿಕೊಳ್ಳಲು ಈ ಪಕ್ಷಿ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ title=

Viral video: ತಾಯಿ ಹಕ್ಕಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ತನ್ನ ಮರಿಗಳನ್ನು ಕ್ರೂರ ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋವನ್ನು ಕೆನಡಾದ ಆಲ್ಬರ್ಟಾದಲ್ಲಿರುವ ಡೈನೋಸಾರ್ ಪ್ರಾಂತೀಯ ಉದ್ಯಾನವನದಲ್ಲಿ ಜೂನ್ 9 ರಂದು ಸೆರೆ ಹಿಡಿಯಲಾಗಿದೆ. 

ಜೂನ್ 9 ರಂದು ಸೆರೆಹಿಡಿಯಲಾದ ಈ ವಿಡಿಯೋವನ್ನು Natureismetal ಎಂಬ ಬಳಕೆದಾರರು ಜೂನ್ 25 ರಂದು ಪೋಸ್ಟ್ ಮಾಡಿದ್ದಾರೆ, ಈವರೆಗೆ ಈ ವಿಡಿಯೋಗೆ 110,556 ಲೈಕ್ಸ್‌ ಸಿಕ್ಕಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಾತೃ ತ್ಯಾಗ ನೋಡಿ ಕಣ್ಣೀರಿಟ್ಟಿದ್ದಾರೆ. 

ಇದನ್ನೂ ಓದಿ: Viral video: ದಾಹದಿಂದ ಬಂದ ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ..! ಮನುಷ್ಯನ ಸಹಾಯ ಮೆಚ್ಚಿ ದೈತ್ಯ ಸರ್ಪ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ

ಈ ವಿಡಿಯೋದಲ್ಲಿ ಪಕ್ಷಿ ಕ್ರೂರ ಹಾವಿನಿಂದ ತನ್ನ ಮರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ, ಸಾಮಾನ್ಯವಾಗಿ ಹಾವುಗಳು ಹಕ್ಕಗಳ ಮೊಟ್ಟೆಗಳನ್ನು ಆಹರವಾಗಿ ಆಯ್ದುಕೊಳ್ಳುತ್ತವೆ ಅದಕ್ಕೆ ಕಾರನ ಅದೊಂದೆ ಸುಭವಾದ ಭೇಟೆ. ಇಲ್ಲಿಯೂ ಕೂಡ ಹಾಗೆ ಹಾವೊಂದು ಆಹಾರವನ್ನು ಅರಸಿ ಪಕ್ಷಿ ಮೊಟ್ಟೆ ಇಟ್ಟಿದ್ದ ಗೂಡಿನ ಕಡೆಗೆ ಬಂದಿದೆ, ನಂತರ ಹಾವು ತನ್ನ ಮರಿಗಳ ಕಡೆಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಹಕ್ಕಿ, ಹಾವಿನ ಜೊತೆ ಸೆನೆಸಾಡಲು ಆರಂಭಿಸುತ್ತದೆ. ನಂತರ ಹಾವಿನ ಜೊತೆ ದೀರ್ಘಕಾಲ ಕಾದಾಡಿದ ನಂತರ ತನ್ನ ಮರಿಗಳನ್ನು ರಕ್ಷಿಸುವಲ್ಲಿ ಪಕ್ಷಿ ಯಶಸ್ವಿಯಾಗುತ್ತದೆ. ಆದರೆ, ನಂತರ ಆಗಿದ್ದೆ ವಿಧಿಯ ವಿಪರ್ಯಾಸ.

ಹೌದು, ಹೀಗೆ ತನ್ನ ಮರಿಗಲ ಪ್ರಾಣ ಉಳಿಸಲೆಂದು ಕಾದಾಡಲು ಹೋಗುವ ಪಕ್ಷಿ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ಕಣ್ಣೀರಿಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ಪಕ್ಷಿಯ ಮಾತೃ ಹೈದಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. 

ಇದನ್ನೂ ಓದಿ: Viral video: ಇಲಿಯ ಕರಾಟೆ ಕಲೆಗೆ ಭೇಟೆಯಾಡಲು ಬಂದ ಹಾವು ಫುಲ್ ಸುಸ್ತು! ವಿಡಿಯೋ ನೋಡಿ ನೀವೂ ಕೂಡ ಫಿದಾ ಆಗ್ತೀರ

ಈ ವಿಡಿಯೋ ಅತ್ಯಂತ ಭಯಂಕರವಾಗಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಸಖತ್‌ ರೆಸ್ಪಾನ್ಸ್‌ ಸಿಗುತ್ತಿದ್ದು, ದೃಶ್ಯ ನೋಡಿ ನೆಟ್ಟಿಗರು, ಶಾಕ್‌ ಆಗಿದ್ದಾರೆ. ಇನ್ನೊಂದೆಡೆ ತಾಯಿ ಹೃದಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. 

 

 

Trending News