ನವದೆಹಲಿ: ದೇಶದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅವರು ಯಾರೊಬ್ಬರ ಸೃಜನಶೀಲ ಕಲ್ಪನೆಯನ್ನು ಇಷ್ಟಪಟ್ಟರೆ, ಅದನ್ನು ಹೊಗಳುವುದನ್ನು ಮರೆಯುವುದಿಲ್ಲ ಮತ್ತು ಅದನ್ನು ತನ್ನ ಹಿಂಬಾಲಕರ ಜೊತೆಗೆ ಟಕ್ ಅಂತ ಹಂಚಿಕೊಳ್ಳುತ್ತಾರೆ. ಇದೆಗೆ ಮತ್ತೊಮ್ಮೆ ಅವರು ಅಂತಹುದೇ ಒಂದು ಸ್ವಾರಸ್ಯಕರ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನೋಡುಗರು ಕೂಡ ಇಷ್ಟಪಡುತ್ತಿದ್ದಾರೆ. (Viral News In Kannada)
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಎರಡು ಆಸನಗಳ ಸೋಫಾವನ್ನು ಕಾರಾಗಿ ಪರಿವರ್ತಿಸಿರುವುದನ್ನು ನೀವು ನೋಡಬಹುದು. ಇಬ್ಬರೂ ಸೋಫಾದಿಂದ ತಯಾರಿಸಿದ ಕಾರಿನಲ್ಲಿ ಕುಳಿತು ಸವಾರಿಯನ್ನು ಆನಂದಿಸುತ್ತಿದ್ದಾರೆ. ವೀಡಿಯೊದ ಆರಂಭದಲ್ಲಿ, ಇಬ್ಬರೂ ಮೊದಲು ಸೋಫಾವನ್ನು ಆರ್ಡರ್ ಮಾಡುತ್ತಿರುವುದು ಕಂಡುಬರುತ್ತದೆ. ನಂತರ ಅವರು ತನ್ನ ಇಂಜಿನಿಯರಿಂಗ್ ಬುದ್ಧಿಮತ್ತೆಯನ್ನು ಸೋಫಾದಲ್ಲಿ ಬಳಸಿ ಅದರಲ್ಲಿ ಮೋಟಾರ್ ಮತ್ತು ಫ್ಲೈವೀಲ್ ಅಳವಡಿಸುತ್ತಾನೆ.
ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ
ನಂತರ ಇಬ್ಬರೂ ಅದರ ಮೇಲೆ ಕುಳಿತು ನಗರದಲ್ಲಿ ರೈಡ್ ಮಾಡಲು ಹೋಗುತ್ತಾರೆ. ರಸ್ತೆಯುದ್ದಕ್ಕೂ ಜನರು ಜನರೂ ಆಶ್ಚರ್ಯದಿಂದ ಆಶ್ಚರ್ಯಚಕಿತರಾಗಿ ಅವರನ್ನು ನೋಡುತ್ತಿದ್ದಾರೆ. ಹೀಗಿರುವಾಗ ಇಬ್ಬರು ಯುವಕರು ಆನಂದ್ ಮಹೀಂದ್ರಾ ಅವರನ್ನು ಪ್ರಭಾವಿತಗೊಳಿಸಲು ಯಾವುದೇ ಛಾನ್ಸ್ ಬಿಟ್ಟಿಲ್ಲ. ಇವರಿಬ್ಬರ ಕ್ರಿಯೇಟಿವಿಟಿಯನ್ನು ಆನಂದ್ ಮಹೀಂದ್ರ ಹೊಗಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಿಂದ ಪ್ರಭಾವಿತರಾದ ಆನಂದ್ ಮಹೀಂದ್ರಾ
ವಿಡಿಯೋ ಕುರಿತು ತಮ್ಮ ಅಧಿಕೃತ X ಹ್ಯಾಂಡಲ್ ನಲ್ಲಿ ಬರೆದುಕೊಂಡ ಆನಂದ್ ಮಹೀಂದ್ರಾ, 'ಇದನ್ನು ಒಂದು ಇಂಟರೆಸ್ಟಿಂಗ್ ಪ್ರಾಜೆಕ್ಟ್ ಎನ್ನಬಹುದು. ಇದನ್ನು ತಯಾರಿಸಲು ಸಾಕಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಗಿದೆ ಹಾಗೂ ಆಟೋಮೇಟಿವ್ ಕೌಶಲ್ಯವನ್ನು ಬಳಸಲಾಗಿದೆ. ಇದು ನಂಬಲಸಾಧ್ಯವಾಗಿದೆ. ಯಾವುದೇ ಒಂದು ದೇಶವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜ ರಾಷ್ಟ್ರವನ್ನಾಗಿಸಲು ಇಂತಹ ಇಂಜಿನೀಯರ್ ಗಳ ಅವಶ್ಯಕತೆ ಇದೆ ಎಂದಿದ್ದಾರೆ. ಇದರ ಜೊತೆಗೆ ಇಂತಹ ಗಾಡಿಗಳನ್ನು ಆರ್ಟಿಓಬಳಿ ನೋಂದಣಿಗಾಗಿ ತೆಗೆದುಕೊಂಡು ಹೋದರೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂದೂ ಕೂಡ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ-ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ವಿರುದ್ಧ ದಿಕ್ಕಿನಲ್ಲಿ ಕುಳಿತ ಆಂಟಿಯ ಫ್ತ್ಲೆಯಿಂಗ್ ಕಿಸ್ಸ್ ಭಾರಿ ವೈರಲ್!
ವಿಡಿಯೋಗೆ ಸಾಕಷ್ಟು ವೀಕ್ಷಣೆಗಳು ಬರುತ್ತಿವೆ
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ಭಾರೀ ವೀಕ್ಷಣೆಗೆ ಒಳಗಾಗುತ್ತಿದೆ. ಆನಂದ್ ಮಹೀಂದ್ರಾ ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಇತರ ಬಳಕೆದಾರರೂ ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಆದಾಗ್ಯೂ, ದಯವಿಟ್ಟು ಈ ವೀಡಿಯೊದ ಕುರಿತು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ಇದನ್ನೂ ಓದಿ-ಲೈವ್ ರಿಪೋರ್ಟಿಂಗ್ ವೇಳೆ ವ್ಯಕ್ತಿಗೆ ಜಬರ್ದಸ್ಟ್ ಕಪಾಳಮೋಕ್ಷ ಮಾಡಿದ ಪತ್ರಕರ್ತೆ! ವಿಡಿಯೋ ನೋಡಿ..
ವೈರಲ್ ವಿಡಿಯೋ ಇಲ್ಲಿದೆ ನೋಡಿ
Just a fun project? Yes, but look at the passion and engineering effort that went into it. If a country has to become a giant in automobiles, it needs many such ‘garage’ inventors…
Happy driving kids, and I’d like to see the look on the face of the RTO inspector in India, when… pic.twitter.com/sOLXCpebTU— anand mahindra (@anandmahindra) December 30, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ