Video Viral : "ಅಮ್ಮನಿಗೆ ಹೊಡಿಬೇಡ ಅಂತ ಹೇಳ್ದೆತಾನೆ.." ಅಪ್ಪನಿಗೆ ಪುಟ್ಟ ಪೋರಿಯ ಅವಾಜ್‌

Trending Video : ಸೋಶಿಯಲ್ ಮೀಡಿಯಾ ಒಂದು ಹೂಗುಚ್ಛದಂತಿದ್ದು ಇಲ್ಲಿ ದಿನನಿತ್ಯ ವಿವಿಧ ಬಣ್ಣಗಳ ಹೂವುಗಳು ಕಾಣಸಿಗುತ್ತವೆ. ಕೆಲವೊಮ್ಮೆ ಮಗುವಿನ ಮೋಹಕತೆ ಮತ್ತು ಕೆಲವೊಮ್ಮೆ ವಯಸ್ಕರ ಮೋಜಿನ ಶೈಲಿಯು ವೈರಲ್ ಆಗುತ್ತದೆ. ಇದೀಗ ಪುಟ್ಟ ಹುಡುಗಿಯ ಮುದ್ದಾದ ವಿಡಿಯೋವೊಂದು ವೈರಲ್‌ ಆಗಿದೆ.

Written by - Chetana Devarmani | Last Updated : Feb 28, 2023, 12:30 PM IST
  • "ಅಮ್ಮನಿಗೆ ಹೊಡಿಬೇಡ ಅಂತ ಹೇಳ್ದೆತಾನೆ.."
  • ಅಪ್ಪನಿಗೇ ಅವಾಜ್‌ ಹಾಕುವ ಪುಟ್ಟ ಪೋರಿ
  • ಈ ಕ್ಯೂಟ್‌ ವಿಡಿಯೋ ನೀವೂ ಒಮ್ಮೆ ನೋಡಿ
Video Viral : "ಅಮ್ಮನಿಗೆ ಹೊಡಿಬೇಡ ಅಂತ ಹೇಳ್ದೆತಾನೆ.." ಅಪ್ಪನಿಗೆ ಪುಟ್ಟ ಪೋರಿಯ ಅವಾಜ್‌  title=
Trending Video

Girl Child Cute Viral Video : ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿವೆ. ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ಅನೇಕ ಬಾರಿ ಗಮನಸೆಳೆಯುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಉದ್ವೇಗದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಈ ಪೈಕಿ ಚಿಕ್ಕ ಮಕ್ಕಳ ವಿಡಿಯೋಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ.

ಸೋಶಿಯಲ್ ಮೀಡಿಯಾ ಒಂದು ಹೂಗುಚ್ಛದಂತಿದ್ದು ಇಲ್ಲಿ ದಿನನಿತ್ಯ ವಿವಿಧ ಬಣ್ಣಗಳ ಹೂವುಗಳು ಕಾಣಸಿಗುತ್ತವೆ. ಕೆಲವೊಮ್ಮೆ ಮಗುವಿನ ಮೋಹಕತೆ ಮತ್ತು ಕೆಲವೊಮ್ಮೆ ವಯಸ್ಕರ ಮೋಜಿನ ಶೈಲಿಯು ವೈರಲ್ ಆಗುತ್ತದೆ. ಅದರಲ್ಲೂ ಮಕ್ಕಳ ಮುದ್ದಾದ ವಿಡಿಯೋಗಳು ಹೃದಯಸ್ಪರ್ಶಿಯಾಗಿವೆ.

ಇದನ್ನೂ ಓದಿ : Headless Dog : ತಲೆಯೇ ಇಲ್ಲದ ನಾಯಿ, ಇಡೀ ವಿಶ್ವಕ್ಕೆ ಯಕ್ಷಪ್ರಶ್ನೆಯಾಯ್ತು ಈ ಶ್ವಾನ.!

ಇದೀಗ ಪುಟ್ಟ ಹುಡುಗಿಯ ಮುದ್ದಾದ ವಿಡಿಯೋವೊಂದು ವೈರಲ್‌ ಆಗಿದೆ. ಇದರಲ್ಲಿ ಬಾಲಕಿಯ ತಂದೆ ಮೋಜಿಗಾಗಿ ಬಾಲಕಿಯ ತಾಯಿಗೆ ಹೊಡೆಯುವಂತೆ ನಾಟಕವಾಡಿದ್ದು, ಬಾಲಕಿ ಮರುಪ್ರಶ್ನೆ ಮಾಡಿ ತಂದೆಗೆ ಅವಾಜ್‌ ಹಾಕುತ್ತಾಳೆ. ಅಪ್ಪನಿಗೆ ಸಿಟ್ಟು ಬಂದರೂ ಆ ರೀತಿ ಹೊಡೆಯುವುದು ತುಂಬಾ ತಪ್ಪು ಎಂದು ಆ ಪುಟ್ಟ ಬಾಲಕಿ ಅಪ್ಪನಿಗೆ ಹೇಳುತ್ತಾಳೆ. ಹುಡುಗಿಯ ಅಬ್ಬರದ ನೋಟ ಮತ್ತು ಸ್ಟೈಲ್ ವೇಗವಾಗಿ ವೈರಲ್ ಆಗುತ್ತಿದೆ.

 

 
 
 
 

 
 
 
 
 
 
 
 
 
 
 

A post shared by GiDDa CoMpAnY (@giedde)

 

ಈ ವಿಡಿಯೋದಲ್ಲಿ ಪೋಷಕರು ತಮ್ಮ ಮಗಳ ಮುಂದೆ ನಾಟಕವಾಡುತ್ತಿರುವುದನ್ನು ಕಾಣಬಹುದು. ತಂದೆ ತಾಯಿಯನ್ನು ಹೊಡೆಯುವಂತೆ ನಟಿಸಿದರೆ ಮಗುವಿಗೆ ತುಂಬಾ ಕೋಪ ಬರುತ್ತದೆ. ಹುಡುಗಿ ತನ್ನ ತಂದೆಯನ್ನು ಎರಡು ಅಥವಾ ಮೂರು ಬಾರಿ ಹೊಡೆಯುತ್ತಾಳೆ. ಇದಲ್ಲದೆ, ಹುಡುಗಿ ತನ್ನ ತಾಯಿಯನ್ನು ಹೊಡೆಯುವುದು ಸರಿಯಲ್ಲ ಎಂದು ತನ್ನ ತಂದೆಗೆ ಹೇಳುತ್ತಾಳೆ.

ಇದನ್ನೂ ಓದಿ : ನಾಟು ನಾಟು’ ಹಾಡಿಗೆ ನಾಚುತ್ತಾ ಕುಣಿದ ಕೊರಿಯಾ ರಾಯಭಾರಿ: ಡ್ಯಾನ್ಸ್ ಕಂಡು ಮೋದಿ ಏನಂದ್ರು ಗೊತ್ತಾ?

ಆದರೆ ಅಪ್ಪ ಅಮ್ಮನಿಗೆ ಮತ್ತೆ ಹೊಡೆದಾಗ ಕೋಪ ಇನ್ನೂ ಹೆಚ್ಚಾಗುತ್ತದೆ. ಅವಳು ಮತ್ತೆ ತನ್ನ ತಂದೆಯ ಮೇಲೆ ಕೋಪಗೊಳ್ಳುತ್ತಾಳೆ. ಅದೇ ಸಮಯದಲ್ಲಿ ತುಂಬಾ ತಾಳ್ಮೆಯಿಂದ ತನ್ನ ತಾಯಿಯನ್ನು ಈ ರೀತಿ ಹೊಡೆಯಬೇಡಿ ಎಂದು ತನ್ನ ತಂದೆಗೆ ಹೇಳುತ್ತಾಳೆ.

ಹೆಣ್ಣು ಮಗುವಿನ ಈ ಮುದ್ದಾದ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ಇದುವರೆಗೆ ಸಾವಿರಾರು ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ನೆಟಿಜನ್‌ಗಳು ಸಾಕಷ್ಟು ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News