Viral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆ

White Snake Viral Video: ಈ ಹಾವಿನ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸರೀಸೃಪವನ್ನು ನೋಡಿ ಅಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಈ ವಿಡಿಯೋ ನೋಡಬಹುದು.  

Written by - Bhavishya Shetty | Last Updated : Aug 17, 2024, 05:35 PM IST
    • ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಅಪರೂಪದ ಹಾವು ಕಾಣಿಸಿಕೊಂಡಿದೆ.
    • ಇದನ್ನು ಶ್ವೇತ ನಾಗರ ಎಂದೂ ಸಹ ಕರೆಯಲಾಗುತ್ತದೆ.
    • ಈ ಹಾವು ನಿರ್ದಿಷ್ಟ ಬಣ್ಣವನ್ನು ಹೊಂದಿರುವುದಿಲ್ಲ. ಇದು ಅಪರೂಪದ ವರ್ಗಕ್ಕೆ ಸೇರುತ್ತದೆ.
Viral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆ title=
File Photo

White Snake Viral Video: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಅಪರೂಪದ ಹಾವು ಕಾಣಿಸಿಕೊಂಡಿದೆ. ಇದನ್ನು ಕಂಡ ಸ್ಥಳೀಯರಲ್ಲಿ ಕುತೂಹಲದ ಜೊತೆ ಭಯವೂ ಮೂಡಿದೆ. ಈ ಭಾಗದಲ್ಲಿ ಇತ್ತೀಚೆಗೆ ಅಲ್ಬಿನೋ ಎಂಬ ಹಾವು ಕಾಣಿಸಿಕೊಂಡಿದ್ದು, ಇದನ್ನು ಶ್ವೇತ ನಾಗರ ಎಂದೂ ಸಹ ಕರೆಯಲಾಗುತ್ತದೆ. ಇನ್ನು ಈ ಹಾವು ನಿರ್ದಿಷ್ಟ ಬಣ್ಣವನ್ನು ಹೊಂದಿರುವುದಿಲ್ಲ. ಇದು ಅಪರೂಪದ ವರ್ಗಕ್ಕೆ ಸೇರುತ್ತದೆ.

ಇದನ್ನೂ ಓದಿ: ನನ್ನ ಮಗಳಿಗೆ ಪ್ರತಿ ಸೆಕೆಂಡ್‌ʼಗೆ ಒಬ್ಬ ಬೇಕು, ಇವತ್ತು ಒಬ್ಬ... ಖ್ಯಾತ ನಟಿ ಶ್ವೇತಾ ಹೇಳಿಕೆ

ಅಂದಹಾಗೆ ಈ ಹಾವಿನ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸರೀಸೃಪವನ್ನು ನೋಡಿ ಅಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಈ ವಿಡಿಯೋ ನೋಡಬಹುದು.

 

ವಿಡಿಯೋ ವೈರಲ್ ಆದ ತಕ್ಷಣ, ಸಾಮಾಜಿಕ ಜಾಲತಾಣ ಬಳಕೆದಾರರು ಅಪರೂಪದ ಹಾವನ್ನು ನೋಡಿ ಬೆರಗಾಗಿದ್ದಾರೆ. ಈ ಜೀವಿ ಐದು ಅಡಿ ಉದ್ದವಿದ್ದು, ಪೊದೆಗಳ ನಡುವೆ ತೆವಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಶೋಯೆಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ! ಸಾನಿಯಾ ಮಿರ್ಜಾ ಮಾಜಿ ಪತಿ ಮೇಲಿನ ಅಪವಾದ ನಿಜ?

ಇನ್ನು ಕೊಯಮತ್ತೂರಿನಲ್ಲಿಯೂ 5 ಅಡಿ ಉದ್ದದ ಅಪರೂಪದ ಅಲ್ಬಿನೋ ಕೋಬ್ರಾ ಕಂಡುಬಂದಿತ್ತು. ಆ ಬಳಿಕ ಅದನ್ನು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್‌ʼನ ಸದಸ್ಯರು ರಕ್ಷಿಸಲು ಸ್ಥಳಕ್ಕೆ ಆಗಮಿಸಿ ಕೊಯಮತ್ತೂರು ಅರಣ್ಯ ವಿಭಾಗದ ರೇಂಜ್ ಆಫೀಸ್‌ʼಗೆ ಹಸ್ತಾಂತರಿಸಿದ್ದರು. ನಂತರ, ಇದನ್ನು ಆನೈಕಟ್ಟಿಯ ಮೀಸಲು ಅರಣ್ಯಕ್ಕೆ ಬಿಡಲಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News