ನವದೆಹಲಿ: ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅನ್ನೋ ಮಾತಿದೆ. ಒಬ್ಬೊಬ್ಬರಿಗೆ ಮದುವೆ ಬಗ್ಗೆ ಒಂದೊಂದು ಕನಸು. ಜೀವನದಲ್ಲಿ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಬ್ಬರನ್ನು ವಿವಾಹವಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 11 ಮದುವೆ (Woman Married 11 Times) ಆಗಿದ್ದಾಳೆ.
ಉತಾಹ್ ಮೂಲದ ಮೊನೆಟ್ ಡಯಾಸ್, ಅವರು ಇತ್ತೀಚೆಗೆ TLC ಶೋ ಅಡಿಕ್ಟೆಡ್ ಟು ಮ್ಯಾರೇಜ್‌ನಲ್ಲಿ ಕಾಣಿಸಿಕೊಂಡರು. 52 ವರ್ಷದ ಇವರು, 11 ಬಾರಿ ಮದುವೆಯಾಗಿದ್ದಾರಂತೆ. ಇಷ್ಟಕ್ಕೆ ತೃಪ್ತಿಯಾಗದ ಇವರು ೧೨ನೆ ಪತಿಯ ಬಯಕೆಯಲ್ಲಿಯೂ ಇದ್ದಾರಂತೆ.
ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ: ಅರ್ಧ ಬೆಲೆಗೆ ರಸಗೊಬ್ಬರ, ಬೀಜಗಳು & ಟ್ರ್ಯಾಕ್ಟರ್ ಖರೀದಿಸಿ, ಹೇಗೆಂದು ತಿಳಿಯಿರಿ
ಶೋದಲ್ಲಿ, ಅವರು ತನ್ನನ್ನು 'boy crazy' ಎಂದು ವಿವರಿಸುತ್ತಾರೆ. 2 ವರ್ಷ ವಯಸ್ಸಿನಲ್ಲಿಯೇ ಇವರು ಮೊದಲ ಕ್ರಷ್ ಹೊಂದಿದ್ದರಂತೆ.
"ನಾನು ವೇಗವಾಗಿ ಪ್ರೀತಿಯಲ್ಲಿ ಬೀಳುತ್ತೇನೆ. ನನ್ನ ಮದುವೆ ಹೇಗಿರುತ್ತದೆ, ನನ್ನ ಪತಿ ಹೇಗಿರುತ್ತಾನೆ ಎಂಬುದರ ಬಗ್ಗೆ ನಾನು ಯಾವಾಗಲೂ ಕಲ್ಪನೆ ಮಾಡುತ್ತೇನೆ" ಎಂದು ಅವರು ಹೇಳಿಕೊಂಡಿದ್ದಾರೆ.
Can you name all of your sister's ex-husbands?
Marcie: .... 😂 #AddictedToMarriage pic.twitter.com/RLI26GAcpH— TLC Network (@TLC) November 17, 2021
ಇವರಿಗೆ ಮದುವೆಯಾಗುವುದೇ ಒಂದು ಹವ್ಯಾಸದಂತಾಗಿದೆ. ಇವರು 10 ಗಂಡಂದಿರ ಜತೆಯಲ್ಲಿ ಹೆಚ್ಚೆಂದರೆ 2 ತಿಂಗಳು ಸಂಸಾರ ಮಾಡಿದ್ದಾರಂತೆ. ಆದರೆ 11 ಪತಿಯ ಜತೆ ಮಾತ್ರ 10 ವರ್ಷಗಳಿಂದ ಇದ್ದಾರಂತೆ. ಇದೀಗ ಅವರು ತಮ್ಮ 12ನೇ ಪತಿಯ ಹುಡುಕಾಟದಲ್ಲಿದ್ದಾರೆ.