New Ocean: 14 ಕೋಟಿ ವರ್ಷಗಳ ಬಳಿಕ ಹುಟ್ಟಲಿದೆ ಹೊಸ ಮಹಾಸಾಗರ! ಈ ಖಂಡ ಇಬ್ಭಾಗ, 6 ದೇಶಗಳ ನಕ್ಷೆಯೇ ಬದಲಾಗುತ್ತೆ!

New Ocean: ಸಂಶೋಧನಾ ವರದಿಗಳ ಪ್ರಕಾರ, ಟೆಕ್ಟೋನಿಕ್ ಪ್ಲೇಟ್ ಒಡೆಯಲು ಪ್ರಾರಂಭಿಸಿದಾಗ, ಅದನ್ನು ರಿಫ್ಟಿಂಗ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಭೂಮಿಯ ಮೇಲಿನ ಭಾಗದಿಂದ ಬಿರುಕುಗಳು ಆರಂಭವಾಗಿ ಸಮುದ್ರದ ತಳಕ್ಕೆ ಹೋಗಿ ಖಾಲಿ ಜಾಗದಲ್ಲಿ ಸಮುದ್ರ ನಿರ್ಮಾಣವಾಗುತ್ತದೆ.

Written by - Bhavishya Shetty | Last Updated : Mar 28, 2023, 11:23 PM IST
    • ಖಂಡದ ವಿಭಜನೆಯು ಪೂರ್ವ ಆಫ್ರಿಕಾದ ಬಿರುಕುಗೆ ಸಂಬಂಧಿಸಿದೆ.
    • ಈಗ 56 ಕಿಮೀ ಉದ್ದದ ಬಿರುಕು ಕಂಡುಬಂದಿದೆ.
    • ಈ ಬಿರುಕುಗಳು ಇಥಿಯೋಪಿಯಾದ ಮರುಭೂಮಿಯಿಂದ ಪ್ರಾರಂಭವಾಗಿದ್ದು, ಅದು ನಿರಂತರವಾಗಿ ಹೆಚ್ಚುತ್ತಿದೆ ಎನ್ನಲಾಗಿದೆ.
New Ocean: 14 ಕೋಟಿ ವರ್ಷಗಳ ಬಳಿಕ ಹುಟ್ಟಲಿದೆ ಹೊಸ ಮಹಾಸಾಗರ! ಈ ಖಂಡ ಇಬ್ಭಾಗ, 6 ದೇಶಗಳ ನಕ್ಷೆಯೇ ಬದಲಾಗುತ್ತೆ! title=
New Ocean

New Ocean: ಆಫ್ರಿಕಾ ಖಂಡವು ಎರಡು ಭಾಗಗಳಾಗಿ ಒಡೆಯಲು ಪ್ರಾರಂಭಿಸಿದೆ. ಈ ಖಂಡವನ್ನು ಒಡೆದು ಇಲ್ಲಿ ಹೊಸ ಸಾಗರ ಹುಟ್ಟುತ್ತಿದೆ. ಪೀರ್ ರಿವ್ಯೂ ಜರ್ನಲ್ ಜಿಯೋಫಿಸಿಕಲ್‌’ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಈ ಖಂಡದ ಜೊತೆಗೆ ಪ್ರಪಂಚವನ್ನು ಸಹ ಎರಡು ವಿಭಾಗಗಳಾಗಿ ವಿಂಗಡಿಸಿ ಹೊಸ ಮಹಾಸಾಗರವೊಂದು ಸೃಷ್ಟಿಯಾಗಲಿದೆ.

ಸಂಶೋಧನಾ ವರದಿಗಳ ಪ್ರಕಾರ, ಟೆಕ್ಟೋನಿಕ್ ಪ್ಲೇಟ್ ಒಡೆಯಲು ಪ್ರಾರಂಭಿಸಿದಾಗ, ಅದನ್ನು ರಿಫ್ಟಿಂಗ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಭೂಮಿಯ ಮೇಲಿನ ಭಾಗದಿಂದ ಬಿರುಕುಗಳು ಆರಂಭವಾಗಿ ಸಮುದ್ರದ ತಳಕ್ಕೆ ಹೋಗಿ ಖಾಲಿ ಜಾಗದಲ್ಲಿ ಸಮುದ್ರ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!

IFL ಸೈನ್ಸ್ ಪ್ರಕಾರ, ಈ ಮೊದಲು, ಖಂಡವನ್ನು ಒಡೆದು ಮಹಾ ಸಾಗರ ನಿರ್ಮಾಣವಾದ ಘಟನೆ ನಡೆದಿದೆ. ಸುಮಾರು 138 ಮಿಲಿಯನ್ ವರ್ಷಗಳ ಹಿಂದೆ, ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾ ಬೇರ್ಪಟ್ಟವು. ಅರೇಬಿಯನ್ ಪ್ಲೇಟ್ ಆಫ್ರಿಕಾದಿಂದ ದೂರ ಸರಿಯಿತು. ಈ ಘಟನೆಯಿಂದಾಗಿಯೇ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳು ರೂಪುಗೊಂಡಿವೆ.

ವರದಿಯ ಪ್ರಕಾರ, ಖಂಡದ ವಿಭಜನೆಯು ಪೂರ್ವ ಆಫ್ರಿಕಾದ ಬಿರುಕುಗೆ ಸಂಬಂಧಿಸಿದೆ. ಈಗ 56 ಕಿಮೀ ಉದ್ದದ ಬಿರುಕು ಕಂಡುಬಂದಿದೆ. ಈ ಬಿರುಕುಗಳು ಇಥಿಯೋಪಿಯಾದ ಮರುಭೂಮಿಯಿಂದ ಪ್ರಾರಂಭವಾಗಿದ್ದು, ಅದು ನಿರಂತರವಾಗಿ ಹೆಚ್ಚುತ್ತಿದೆ ಎನ್ನಲಾಗಿದೆ.

6 ದೇಶಗಳ ನಕ್ಷೆ ಬದಲಾಗುವುದು:

ಹೊಸ ಸಾಗರ ಹುಟ್ಟುವುದರೊಂದಿಗೆ 6 ದೇಶಗಳ ನಕ್ಷೆಯೇ ಬದಲಾಗಲಿದೆ. ಪ್ರಸ್ತುತ ಆಫ್ರಿಕಾ ಖಂಡದಲ್ಲಿ 6 ದೇಶಗಳಿವೆ, ಅದು ಸಂಪೂರ್ಣ ಭೂಮಿಯಿಂದ ಆವೃತವಾಗಿದೆ, ಆದರೆ ಈ ಬಿರುಕು ಮೂಡಿದ ನಂತರ ಈ 6 ದೇಶಗಳು ಸಮುದ್ರ ತೀರವನ್ನು ಪಡೆಯುತ್ತವೆ. ರುವಾಂಡಾ, ಉಗಾಂಡಾ, ಕಾಂಗೋ, ಬುರುಂಡಿ, ಮಲಾವಿ, ಜಾಂಬಿಯಾ. ಕೀನ್ಯಾ, ತಾಂಜಾನಿಯಾ ಮತ್ತು ಇಥಿಯೋಪಿಯಾ ದೇಶಗಳಿಗೆ ಸಮುದ್ರ ತಟಗಳು ಬರಲಿವೆ.

ಇದನ್ನೂ ಓದಿ: Brother duos in Team India: ಟೀಂ ಇಂಡಿಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ 5 ಪ್ರಸಿದ್ಧ ಸಹೋದರ ಜೋಡಿಗಳು

2018 ರಲ್ಲಿ, ಕೀನ್ಯಾದ ರಾಜಧಾನಿ ನೈರೋಬಿಯಿಂದ ಸುಮಾರು 142 ಕಿಮೀ ದೂರದಲ್ಲಿರುವ ನರೋಕ್ ಎಂಬ ಸಣ್ಣ ಪಟ್ಟಣದಲ್ಲಿ ಇದೇ ರೀತಿಯ ಬಿರುಕು ಕಂಡುಬಂದಿತ್ತು. ಭಾರಿ ಮಳೆಯ ನಂತರ ಇಲ್ಲಿ ಬಿರುಕು ಹೆಚ್ಚುತ್ತಲೇ ಇತ್ತು. ಆ ಸಮಯದಲ್ಲಿ ಇದು ಮಳೆಯ ಕಾರಣದಿಂದಾಗಿರಬಹುದು ಎಂದು ಹೇಳಲಾಗಿತ್ತು. ಆದರೆ ಭೂವಿಜ್ಞಾನಿಗಳು ಈ ಬಗ್ಗೆ ವಿಶ್ಲೇಷಣೆ ನಡೆಸಿದ ಬಳಿಕ ನೆಲದ ಒಳಗಿನ ಚಲನೆಯಿಂದಾಗಿ, ಭೂಮಿ ಮೇಲೆ ಬಿರುಕು ಉಂಟಾಗಿದೆ ಎಂದು ಹೇಳಿದ್ದಾರೆ. ಪ್ರತಿ ವರ್ಷ 7 ಮಿ.ಮೀ ದೂರ ಬಿರುಕು ಹೆಚ್ಚಾಗುತ್ತಲೇ ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News