ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯರ ಮೇಲೆ ನಡೆದ ಜನಾಂಗೀಯ ದಾಳಿಯ ಭಯಾನಕ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಕ್ಸಾಸ್‌ನ ಬೀದಿಗಳಲ್ಲಿ ತಿರುಗಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರೊಂದಿಗೆ ಅಮೆರಿಕ-ಮೆಕ್ಸಿಕನ್ ಮಹಿಳೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಥಳಿಸಿ ಬಳಿಕ ಬಂದೂಕು ತೋರಿಸಿ ಗುಂಡು ಹಾರಿಸಲು ಯತ್ನಿಸಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ದಾಳಿಗೊಳಗಾದ ಭಾರತೀಯ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದು, ಭಾರತಕ್ಕೆ ಹಿಂತಿರುಗುವಂತೆ ಆದೇಶ ಮಾಡುತ್ತಿರುವುದು ವೈರಲ್ ವೀಡಿಯೊದಲ್ಲಿ ಕಂಡುಬರುತ್ತದೆ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ ಎಂದಿದ್ದಾಳೆ.
ಇದನ್ನೂ ಓದಿ: ಭತ್ತದ ವಿಸ್ತಿರ್ಣದಲ್ಲಿ ಕುಸಿತ, ಭಾರತದ ಮತ್ತು ಪ್ರಪಂಚದ ಮೇಲಾಗುವ ಪರಿಣಾಮವೇನು ಗೊತ್ತೇ?
ಟೆಕ್ಸಾಸ್‌ನ ಡಲ್ಲಾಸ್‌ನ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, 4 ಭಾರತೀಯ ಮೂಲದ ಮಹಿಳೆಯರು ಹೋಟೆಲ್‌ನಿಂದ ಭೋಜನ ಮುಗಿಸಿ ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿದ್ದರು. ಆಗ ಅಮೆರಿಕ-ಮೆಕ್ಸಿಕನ್ ಮೂಲದ ಮಹಿಳೆಯೊಬ್ಬಳು ಅಲ್ಲಿಗೆ ಬಂದು ಭಾರತೀಯ ಮಹಿಳೆಯರ ಮೇಲೆ ಅಶ್ಲೀಲ ಟೀಕೆಗಳನ್ನು ಮಾಡಿದ್ದಾಳೆ.
'ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಇವರೆಲ್ಲರೂ ಉತ್ತಮ ಜೀವನವನ್ನು ಹುಡುಕಿಕೊಂಡು ಅಮೆರಿಕಕ್ಕೆ ಬರುತ್ತಾರೆ: ಎಂದು ಮಹಿಳೆ ಭಾರತೀಯರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾಳೆ. ಸದ್ಯ ಘಟನೆಯ ವಿಡಿಯೋ ಅಮೆರಿಕದಾದ್ಯಂತದ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ವೈರಲ್ ಆಗಿದೆ. ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ.
This is so scary. She actually had a gun and wanted to shoot because these Indian American women had accents while speaking English.
Disgusting. This awful woman needs to be prosecuted for a hate crime. pic.twitter.com/SNewEXRt3z
— Reema Rasool (@reemarasool) August 25, 2022
ಈ ವೀಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿ ಇಂಡೋ-ಅಮೆರಿಕನ್ ಮಹಿಳೆಯ ಮಗ. "ನನ್ನ ತಾಯಿ, ಶಾಂತವಾಗಿ, ಆ ಮೆಕ್ಸಿಕನ್-ಅಮೆರಿಕನ್ ಮಹಿಳೆಯ ದುರ್ವರ್ತನೆಗೆ ಪ್ರತಿಕ್ರಿಯಿಸಿದ್ದಾರೆ. ಅಶ್ಲೀಲ ಪದಗಳನ್ನು ಉಪಯೋಗಿಸಬೇಡಿ ಎಂದು ನನ್ನ ತಾಯಿ ಅವರ ಬಳಿ ಕೇಳಿಕೊಳ್ಳುತ್ತಿದ್ದರು. ಆದರೆ ಆಕೆ ಭಾರತೀಯರನ್ನು ನಿಂದಿಸುತ್ತಿದ್ದಳು. ಭಾರತದಲ್ಲಿ ಜೀವನ ಇಷ್ಟು ಚೆನ್ನಾಗಿದ್ದರೆ ನೀನೇಕೆ ಇಲ್ಲಿದ್ದೀಯಾ? ನೀನು ಎಲ್ಲಿಗೆ ಹೋದರೂ ಸಹ ಭಾರತೀಯಳು ಎಂದು ಮಾತನಾಡುತ್ತಿದ್ದರು. ಮಹಿಳೆಯ ದೌರ್ಜನ್ಯ ಹೆಚ್ಚಾದಾಗ, ನನ್ನ ತಾಯಿ ಅವಳ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಇದನ್ನು ಕಂಡು ಕೋಪಗೊಂಡ ಆಕೆ ನನ್ನ ತಾಯಿ ಹಾಗೂ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಿದ್ದಾರೆ.
ಏಷ್ಯನ್-ಅಮೆರಿಕನ್ ನಾಯಕಿ ರೀಮಾ ರಸೂಲ್ ಕೂಡ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್‌ನಲ್ಲಿ, 'ಇದೊಂದು ಬೆದರಿಕೆಯ ಅನುಭವ. ಆ ಮಹಿಳೆಯ ಬಳಿ ಗನ್ ಇತ್ತು. ಆಕೆ ಅವರನ್ನು ಶೂಟ್ ಮಾಡಲು ಬಯಸಿದ್ದಳು. ಅವಳ ಇಂಗ್ಲಿಷ್ ಮಾತನಾಡುವ ಧ್ವನಿಯಿಂದ ಮಹಿಳೆಗೆ ತೊಂದರೆಯಾಯಿತು. ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Imran Khan : ಇಮ್ರಾನ್ ಖಾನ್‌ಗೆ ಮಧ್ಯಂತರ ಜಾಮೀನು
10 ಸಾವಿರ ಅಮೆರಿಕನ್ ಡಾಲರ್ ದಂಡ: ಆಗಸ್ಟ್ 25ರಂದು, ಸರಿಸುಮಾರು ಮಧ್ಯಾಹ್ನ 3:50 ಗಂಟೆಗೆ, ಪ್ಲಾನೋ ಪೊಲೀಸ್ ಡಿಟೆಕ್ಟಿವ್‌ಗಳು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಅವರನ್ನು ಬಂಧಿಸಿದೆ. ಅಷ್ಟೇ ಅಲ್ಲದೆ ಒಟ್ಟು 10,000 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.