ನವದೆಹಲಿ: ಬಾಂಗ್ಲಾದೇಶದ ಪ್ರಯಾಣಿಕ ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುನಲ್ಲಿರುವ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 78 ಪ್ರಯಾಣಿಕರಿದ್ದರು ಎಂದು ವರದಿಯಾಗಿದ್ದು, ಕನಿಷ 50 ಮಂದಿ ಸಾವನ್ನಪ್ಪಿರುವುದಾಗಿ ಸುಡಿ ಸಂಸ್ಥೆಯೊಂದು ತಿಳಿಸಿದೆ.
ಇದಕ್ಕೂ ಮುನ್ನ 38 ಮಂದಿ ಸಾವನ್ನಪ್ಪಿದ್ದು, 23 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿತ್ತು. ಗಾಯಗೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಸಂಪೂರ್ಣವಾಗಿ ನಾಶಗೊಂಡಿದೆ.
#WATCH: A plane has crashed at Tribhuvan International Airport in Kathmandu, Nepal. More details awaited. (Source:Unverified) pic.twitter.com/lpsWrvFjZd
— ANI (@ANI) March 12, 2018
ಲ್ಯಾಂಡಿಂಗ್ ಸಮಯದಲ್ಲಿ ಕ್ರಾಶ್
ನೇಪಾಳದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ಲೇನ್ S2-AGU, ಬೊಂಬಾರ್ಡಿಯರ್ ಡ್ಯಾಶ್ 8 Q400. ಆದಾಗ್ಯೂ, ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಮಾಹಿತಿ ಪ್ರಕಾರ, ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪ್ಪಳಿಸಿತು. ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ ಫ್ಲೈಟರ್ 24 ಪ್ರಕಾರ, ಅಪಘಾತವು ಸುಮಾರು 2:20 ಗಂಟೆಗೆ ಸಂಭವಿಸಿದೆ.
#BREAKING #Nepal: A US-Bangla airlines aircraft has crashed in the eastern side of the Tribhuvan International Airport (TIA) in the #Kathmandu on Monday. Details yet to come. https://t.co/qsxgS4w3sG pic.twitter.com/ODr8L2xS9X
— Pradeep Bashyal (@pdpbasyal) March 12, 2018
ಅನೇಕ ಪ್ರಯಾಣಿಕರು ಕಲ್ಲುಮಣ್ಣುಗಳಲ್ಲಿ ಸಿಕ್ಕಿಹಾಕಿಕೊಂಡರು
ವಿಮಾನ ಅಪಘಾತದ ನಂತರ ನೇಪಾಳದ ಸ್ಥಳೀಯ ಮಾಧ್ಯಮಗಳ ಪ್ರಕಾರ ಸುಮಾರು 50 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇತರರನ್ನು ರಕ್ಷಿಸಲಾಗಿದೆ. ವಿಮಾನದ ಅವಶೇಷಗಳು ಸಂಪೂರ್ಣವಾಗಿ ಚದುರಿಹೋಗಿದೆ. ಅನೇಕ ಪ್ರಯಾಣಿಕರು ಈಗಲೂ ಕಲ್ಲುಮಣ್ಣುಗಳಲ್ಲಿ ಸಿಲುಕಿದ್ದಾರೆ.
Nepal: A plane crashed at Tribhuvan International Airport in Kathmandu. Airport has been closed for operations. pic.twitter.com/U7iCHKo4ej
— ANI (@ANI) March 12, 2018
ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ವಿಮಾನದಿಂದ ಹೊಗೆ ಕಂಡುಬಂದಿದೆ. ವಿಮಾನ ಅಪಘಾತಕ್ಕೊಳಗಾದಾಗ, 71 ಜನರು ವಿಮಾನದಲ್ಲಿದ್ದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕೆಲಸ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದುವರೆಗೂ 28 ಜನರನ್ನು ವಿಮಾನದಿಂದ ಹೊರಗೆಳದಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Nepal: A US Bangla Airlines plane carrying 67 passengers on board crashed at Tribhuvan International Airport in Kathmandu. Airport has been closed for all operations. Rescue operation underway. pic.twitter.com/4odnceud94
— ANI (@ANI) March 12, 2018