ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಸ್ಫೋಟ, 12 ಸಾವು; 25 ಮಂದಿಗೆ ಗಾಯ

ಹೆರಾತ್ ನಗರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ 12 ಕ್ಕೆ ಏರಿದೆ. 25 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

Written by - Ranjitha R K | Last Updated : Apr 2, 2022, 08:33 AM IST
  • ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ ಸ್ಫೋಟ
  • 12 ಮಂದಿ ಸಾವು, 25 ಮಂದಿಗೆ ಗಾಯ
  • ಇದುವರೆಗೂ ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಸ್ಫೋಟ, 12 ಸಾವು; 25 ಮಂದಿಗೆ ಗಾಯ title=
Afghanistan Blast

ನವದೆಹಲಿ : ಅಫ್ಘಾನಿಸ್ತಾನದ (Afghanistan) ಪಶ್ಚಿಮ ಪ್ರಾಂತ್ಯದ ಹೆರಾತ್‌ನಲ್ಲಿ (Herat city) ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದಾರೆ (Afghanistan Blast). ಘಟನೆಯಲ್ಲಿ 25 ಜನರು ಗಾಯಗೊಂಡಿದ್ದಾರೆ. ಹೆರಾತ್ ಪ್ರಾಂತ್ಯದ ರಾಜಧಾನಿಯ PD12 ನಲ್ಲಿ ಸ್ಫೋಟ ಸಂಭವಿಸಿದೆ. ಇದುವರೆಗೂ ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ಸ್ಫೋಟದಲ್ಲಿ 12 ಜನರ ಸಾವು : 
ಹೆರಾತ್ ನಗರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ 12 ಕ್ಕೆ ಏರಿದೆ (Afghanistan Blast). 25 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕಗಳನ್ನು ಕ್ರೀಡಾ ಮೈದಾನದಲ್ಲಿ ಹೂತುಹಾಕಲಾಗಿತ್ತು. ಅಲ್ಲಿ ಜನರು ಆಟ ವಾಡುತ್ತಿದ್ದಾಗ, ಘಟನೆ ಸಂಭವಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಮೃತಪಟ್ಟವರಲ್ಲಿ ಕನಿಷ್ಠ ನಾಲ್ವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : "ನೀವು ಪ್ರಧಾನಿಯಾಗುವ ಮೊದಲು ಪಾಕಿಸ್ತಾನ ಚೆನ್ನಾಗಿತ್ತು...!"

ಕಳೆದ ವರ್ಷ ದಾಳಿಗಳು : 
ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ (Taliban) ವಶಪಡಿಸಿಕೊಂಡ ನಂತರ, ದೇಶಾದ್ಯಂತ ಹಲವಾರು ದಾಳಿಗಳು ನಡೆದಿವೆ. ಅವುಗಳಲ್ಲಿ ಕೆಲವು ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಹೊತ್ತುಕೊಂಡಿತ್ತು.  ಜನವರಿಯಲ್ಲಿ, ಹೆರಾತ್ ನಗರದಲ್ಲಿ ನಡೆದ ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದ್ದರು. ಒಂಭತ್ತುಮಂದಿ ಗಾಯ ಗೊಂಡಿದ್ದರು.  

ಇದನ್ನೂ ಓದಿ :  ಆರ್ಥಿಕ ಬಿಕ್ಕಟ್ಟು : ರಾತ್ರೋರಾತ್ರಿ ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಭಾರಿ ಪ್ರತಿಭಟನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News