ವ್ಲಾಡಿವೋಸ್ಟಾಕ್ - ಚೆನ್ನೈ ಕಡಲ ಮಾರ್ಗ.. ಚೀನಾವನ್ನು ಬದಿಗೊತ್ತಲು ಬಯಸಿತಾ ರಷ್ಯಾ?

Chennai - Vladivostok Maritime Corridor: ಚೀನಾ ಕೆಲ ಸಮಯದ ಹಿಂದೆ ರಷ್ಯಾದ ವ್ಲಾಡಿವೋಸ್ಟಾಕ್ ಬಂದರನ್ನು ಗುತ್ತಿಗೆಗೆ ನೀಡಿತ್ತು. ಆದರೆ ರಷ್ಯಾ ತನ್ನ ನಿರ್ಧಾರಕ್ಕೆ ವಿಷಾದಿಸಿದೆ. ಈಗ ಭಾರತವು ಈ ಬಂದರಿನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ರಷ್ಯಾ ಬಯಸಿದೆ.  

Written by - Chetana Devarmani | Last Updated : Jun 4, 2023, 03:03 PM IST
  • ವ್ಲಾಡಿವೋಸ್ಟಾಕ್ - ಚೆನ್ನೈ ಕಡಲ ಮಾರ್ಗ
  • ವ್ಲಾಡಿವೋಸ್ಟಾಕ್ ಬಂದರನ್ನು ಗುತ್ತಿಗೆ ಪಡೆದಿದ್ದ ಚೀನಾ
  • ಚೀನಾವನ್ನು ಬದಿಗೊತ್ತಲು ಬಯಸಿತಾ ರಷ್ಯಾ?
ವ್ಲಾಡಿವೋಸ್ಟಾಕ್ - ಚೆನ್ನೈ ಕಡಲ ಮಾರ್ಗ.. ಚೀನಾವನ್ನು ಬದಿಗೊತ್ತಲು ಬಯಸಿತಾ ರಷ್ಯಾ? title=

ಮಾಸ್ಕೋ: ಉಕ್ರೇನ್ ಯುದ್ಧದ ನಂತರ ರಷ್ಯಾವನ್ನು ಇಡೀ ವಿಶ್ವದಲ್ಲಿ ಪ್ರತ್ಯೇಕಿಸಿತು. ವ್ಲಾಡಿವೋಸ್ಟಾಕ್ ಬಂದರನ್ನು 163 ವರ್ಷಗಳ ಕಾಲ ಗುತ್ತಿಗೆ ನೀಡುವ ಮೂಲಕ ರಷ್ಯಾದ ಪ್ರತ್ಯೇಕತೆಯ ಲಾಭವನ್ನು ಚೀನಾ ಪಡೆದುಕೊಂಡಿದೆ. ಆದರೆ ಚೀನಾವನ್ನು ದೀರ್ಘಕಾಲ ನಂಬಲು ಸಾಧ್ಯವಿಲ್ಲ ಎಂದು ರಷ್ಯಾ ಇದೀಗ ಅರಿತುಕೊಂಡಂತಿದೆ. ಈಗ ಭಾರತವು ವ್ಲಾಡಿವೋಸ್ಟಾಕ್ ಬಂದರಿನಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಬೇಕು ಎಂದು ರಷ್ಯಾ ಬಯಸಿದೆ. ವ್ಲಾಡಿವೋಸ್ಟಾಕ್ ಬಂದರು ವ್ಯೂಹಾತ್ಮಕವಾಗಿ ಬಹಳ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಚೀನಾ ಕಣ್ಣು ಈ ಬಂದರಿನ ಮೇಲೆ ಬಿದ್ದಿದೆ. 

ರಷ್ಯಾ ಅಧಿಕೃತವಾಗಿ ವ್ಲಾಡಿವೋಸ್ಟಾಕ್ ಬಂದರನ್ನು ಚೀನಾಕ್ಕೆ ಜೂನ್ 1 ರಂದು ಹಸ್ತಾಂತರಿಸಿತು. ಇದಾದ ಬಳಿಕ ಈಗ ಈ ಬಂದರು ಅಧಿಕೃತವಾಗಿ ಚೀನಾದ ಹಡಗುಗಳ ಸಾರಿಗೆ ಕೇಂದ್ರವಾಗಿದೆ. ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರು ಚೀನಾಕ್ಕೆ ಗ್ಯಾಸ್‌ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯನ್ನು ಅನುಮೋದಿಸಿದರು. ವ್ಲಾಡಿವೋಸ್ಟಾಕ್‌ನಲ್ಲಿ ಈ ಗ್ಯಾಸ್ ಪೈಪ್‌ಲೈನ್ ಕೊನೆಗೊಳ್ಳುತ್ತದೆ. ಆದರೆ ಚೆನ್ನೈ - ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗವನ್ನು ವೇಗಗೊಳಿಸಲು ರಷ್ಯಾ ಉತ್ಸುಕವಾಗಿದೆ. 

ಇದನ್ನೂ ಓದಿ: 45 ಚೀಲಗಳಲ್ಲಿ ಮಾನವನ ಅವಶೇಷಗಳು ಪತ್ತೆ

ಈ ಮಾರ್ಗವು ಉಭಯ ದೇಶಗಳ ನಡುವಿನ ಕಡಲ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ರಷ್ಯಾದ ಈ ಮಹತ್ವದ ವ್ಲಾಡಿವೋಸ್ಟಾಕ್ ಬಂದರಿನೊಂದಿಗೆ ಚೆನ್ನೈ ಸಂಪರ್ಕಗೊಂಡರೆ ಭಾರತದ ಕಡಲ ವ್ಯಾಪಾರಕ್ಕೆ ಸಹಾಯಕವಾಗುತ್ತದೆ. ಇದು ಭಾರತದ ಕಡಲ ವ್ಯಾಪಾರವನ್ನು ಹೆಚ್ಚಿಸುತ್ತದೆ.

ಕಲ್ಲಿದ್ದಲು, ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಗ್ಯಾಸ್‌ನ್ನು ರಷ್ಯಾದಿಂದ ಭಾರತಕ್ಕೆ ತರಲು ಚೆನ್ನೈ - ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗ ಸಹಾಯಕವಾಗಿದೆ. ಈ ಮಾರ್ಗದಲ್ಲಿ ಸುಮಾರು 10,300 ಕಿಮೀ ಅಥವಾ 5,600 ನಾಟಿಕಲ್ ಮೈಲುಗಳನ್ನು 10 ದಿನಗಳಲ್ಲಿ ಕ್ರಮಿಸಬಹುದು. ಇದು ಪ್ರಪಂಚದ ಈ ಭಾಗದಲ್ಲಿ ದೊಡ್ಡ ಸರಕು ಸಾಗಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Odisha Rail Accident ಕುರಿತು ಪಾಕ್ ಪ್ರತಿಕ್ರಿಯೆ, ಟ್ವೀಟ್ ಮಾಡಿದ ಬಿಲಾವಲ್ ಭುಟ್ಟೊ

ವ್ಲಾಡಿವೋಸ್ಟಾಕ್ ಬಳಿ ಭಾರತ ಉಪಗ್ರಹ ನಗರವನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿದೆ. ಉತ್ತರ ಸಮುದ್ರ ಮಾರ್ಗದಲ್ಲಿ ಟ್ರಾನ್ಸ್-ಆರ್ಕ್ಟಿಕ್ ಕಂಟೈನರ್ ಶಿಪ್ಪಿಂಗ್ ಮಾರ್ಗ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆಯೂ ಅನೇಕ ಚರ್ಚೆಗಳು ನಡೆಯುತ್ತಿವೆ. ವ್ಲಾಡಿವೋಸ್ಟಾಕ್‌ನ ಸಂಪನ್ಮೂಲ-ಸಮೃದ್ಧ ಬಂದರಿಗೆ ಭಾರತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019 ರಲ್ಲಿ ವ್ಲಾಡಿವೋಸ್ಟಾಕ್‌ನಿಂದ ಭಾರತದ ಪೂರ್ವ ನೀತಿಯ ಕಾಯಿದೆಯನ್ನು ಘೋಷಿಸಿದರು. ಆ ಸಮಯದಲ್ಲಿ, ಅವರು ಈ ಪ್ರದೇಶದಲ್ಲಿ ಹಲವಾರು ಯೋಜನೆಗಳಿಗೆ ಬಿಲಿಯನ್ ಡಾಲರ್ ಸಾಲವನ್ನು ಘೋಷಿಸಿದರು.  

ಇದನ್ನೂ ಓದಿ: ಫ್ಲೈಟ್ ನಲ್ಲಿ ಪ್ರಯಾಣ ಬೆಳೆಸುವ ಮುನ್ನ ತೂಕ ಪರೀಕ್ಷಿಸಿಕೊಳ್ಳಬೇಕು, ಈ ದಿನದಿಂದ ಆರಂಭಗೊಳ್ಳಲಿದೆ ಸಮೀಕ್ಷೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News