COVID-19 ಲಸಿಕೆ: ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಆರಂಭಿಸಿದ ಚೀನಾ

ಕರೋನವೈರಸ್ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲಿಗೆ ಕಾಣಿಸಿಕೊಂಡಿತು.

Last Updated : Apr 14, 2020, 09:27 AM IST
COVID-19 ಲಸಿಕೆ: ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಆರಂಭಿಸಿದ ಚೀನಾ title=

ನವದೆಹಲಿ: ಇಡೀ ವಿಶ್ವವನ್ನೇ ಭೀತಿಗೆ ಒಳಪಡಿಸಿರುವ  ಕೊರೊನಾವೈರಸ್  (Coronavirus)  COVID-19 ಮಹಾಮಾರಿಗೆ ಲಸಿಕೆ ಅಭಿವೃದ್ಧಿಪಡಿಸಲು ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಈ ಮಧ್ಯೆ, ಚೀನಾದ ವಿಜ್ಞಾನಿಗಳು ನಿರ್ಣಾಯಕ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಪ್ರವೇಶಿಸಲು ಮುಂದಾಗಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಯೋಜನೆಯಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗಾಗಿ 84 ವರ್ಷದ ವುಹಾನ್ (Wuhan) ನಿವಾಸಿ ಸೇರಿದಂತೆ 500 ಸ್ವಯಂಸೇವಕರನ್ನು ನೇಮಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಪುನರ್ ಸಂಯೋಜಕ ಲಸಿಕೆಯನ್ನು ಪಿಎಲ್‌ಎ ಮೇಜರ್ ಜನರಲ್ ಚೆನ್ ವೀ ನೇತೃತ್ವದ ಸಂಶೋಧನಾ ತಂಡವು ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ, ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್ ಸೈನ್ಸಸ್ ಆಫ್ ಚೀನಾ ಅಭಿವೃದ್ಧಿಪಡಿಸಿದೆ.

ಗ್ಲೋಬಲ್ ಟೈಮ್ಸ್ ಪ್ರಕಾರ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಲು ಜೆನೆಟಿಕ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿದ್ದಾರೆ. ಈ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಮೊದಲ ಹಂತದಲ್ಲಿ ಸಂಶೋಧಕರು ಅದರ ಸುರಕ್ಷತೆಯ ಬಗ್ಗೆ ಗಮನಹರಿಸಿದರೆ, ಎರಡನೇ ಹಂತವು ಅದರ ಪರಿಣಾಮಕಾರಿತ್ವದ ಮೇಲೆ ಇರುತ್ತದೆ. ಎರಡನೇ ಹಂತವು ಮೊದಲ ಹಂತಕ್ಕಿಂತ ಹೆಚ್ಚಿನ ಸ್ವಯಂಸೇವಕರನ್ನು ಹೊಂದಿದೆ ಮತ್ತು ಇದು ಪ್ಲಸೀಬೊ ನಿಯಂತ್ರಣ ಗುಂಪನ್ನು ಸಹ ಒಳಗೊಂಡಿದೆ.

ಗಮನಾರ್ಹವಾಗಿ ಕ್ಲಿನಿಕಲ್ ಮಾನವ ಪರೀಕ್ಷೆಗೆ ಪ್ರವೇಶಿಸಿದ  ಕೋವಿಡ್ 19 (Covid-19) ಗಾಗಿ ಚೀನಾದಲ್ಲಿ ಮೊದಲ ಹಂತದ ಪ್ರಯೋಗವನ್ನು ಮಾರ್ಚ್‌ನಲ್ಲಿ ನಡೆಸಲಾಯಿತು.

ಸಂಬಂಧಿತ ಬೆಳವಣಿಗೆಯೊಂದರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸೋಮವಾರ (ಏಪ್ರಿಲ್ 13) ಕರೋನವೈರಸ್ COVID-19 ಹಂದಿ ಜ್ವರಕ್ಕಿಂತ 10 ಪಟ್ಟು ಹೆಚ್ಚು ಮಾರಕವಾಗಿದೆ ಮತ್ತು ಲಸಿಕೆ ಮಾತ್ರ ಕರೋನವೈರಸ್ ಹರಡುವುದನ್ನು ಸಂಪೂರ್ಣವಾಗಿ ತಡೆಯುತ್ತದೆ ಎಂದು ಹೇಳಿದರು.

ಜಿನೀವಾದಿಂದ ವರ್ಚುವಲ್ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ಘೆಬ್ರೆಯೆಸಸ್ ಕರೋನವೈರಸ್ ಸಾಂಕ್ರಾಮಿಕವನ್ನು WHO ನಿಕಟವಾಗಿ ಗಮನಿಸುತ್ತಿದೆ, ಇದು ಈಗ 115,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1.8 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.

"COVID-19 ವೇಗವಾಗಿ ಹರಡುತ್ತದೆ ಮತ್ತು ಇದು 2009ರ ಜ್ವರ ಸಾಂಕ್ರಾಮಿಕಕ್ಕಿಂತ 10 ಪಟ್ಟು ಮಾರಕವಾಗಿದೆ" ಎಂದು ಅವರು ಹೇಳಿದರು.

Trending News