ಮೂರನೇ ಮಗುವಾದರೆ ಈ ಕಂಪನಿಯಲ್ಲಿ ಸಿಗುತ್ತದೆ ಒಂದು ವರ್ಷದ ಸುದೀರ್ಘ ರಜೆ, 11 ಲಕ್ಷ ರೂಪಾಯಿಗಳ ಬೋನಸ್

Chinese Company Offers Cash Bonus: ವರದಿಗಳ ಪ್ರಕಾರ, ಬೀಜಿಂಗ್ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಮೂರನೇ ಮಗುವಿಗೆ ಜನ್ಮ ನೀಡಲು 90,000 ಯುವಾನ್ ನಗದು ಬೋನಸ್ ಅನ್ನು ನೀಡುತ್ತಿದೆ. ಅಂದರೆ ,  ಸರಿಸುಮಾರು 11.50 ಲಕ್ಷ ರೂ.  ಮೊದಲ, ಎರಡನೆಯ ಮತ್ತು ಮೂರನೇ ಮಕ್ಕಳಿಗೆ ಜನ್ಮ ನೀಡಿದರೆ ಉದ್ಯೋಗಿಗಳಿಗೆ ಗಣನೀಯ ಬೋನಸ್ ನೀಡಲಾಗುತ್ತಿದೆ. 

Written by - Ranjitha R K | Last Updated : May 5, 2022, 10:44 AM IST
  • ಚೀನಾ ಒನ್ ಚೈಲ್ಡ್ ಪಾಲಿಸಿಯನ್ನು 2016 ರಲ್ಲಿ ಕೊನೆಗೊಳಿಸಿದೆ.
  • ಮೂರನೇ ಮಗುವಿಗೆ ಜನ್ಮ ನೀಡಿದರೆ ಬೋನಸ್
  • ಜೊತೆಗೆ ಸಿಗಲಿದೆ ಒಂದು ವರ್ಷಗಳ ರಜೆ
ಮೂರನೇ  ಮಗುವಾದರೆ ಈ ಕಂಪನಿಯಲ್ಲಿ ಸಿಗುತ್ತದೆ ಒಂದು ವರ್ಷದ ಸುದೀರ್ಘ ರಜೆ, 11 ಲಕ್ಷ ರೂಪಾಯಿಗಳ ಬೋನಸ್  title=
Chinese Company Offers Cash Bonus (file photo)

ನವದೆಹಲಿ : Chinese Company Offers Cash Bonus: ಚೀನಾ ತನ್ನ ಒಂದು ಮಗುವಿನ ನೀತಿಯನ್ನು 2016 ರಲ್ಲಿ ಅಧಿಕೃತವಾಗಿ ಕೊನೆಗೊಳಿಸಿದೆ. ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಈ ನೀತಿಯನ್ನು 1980 ರಲ್ಲಿ ಜಾರಿಗೆ ತರಲಾಗಿತ್ತು.  ಈ ಮಧ್ಯೆ,  ಮೇ 2021 ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಚೀನಾ ಸರ್ಕಾರವು ಹೆಚ್ಚು ಮಕ್ಕಳನ್ನು ಹೊಂಡುವಂತೆ ನಾಗರೀಕರನ್ನು ಪ್ರೋತ್ಸಾಹಿಸುತ್ತಿದೆ. ಇತ್ತೀಚೆಗೆ ಚೀನಾದ ಕಂಪನಿಯೊಂದು ಮೂರನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವ ಬಗ್ಗೆ ವರದಿಯಾಗಿದೆ. 

ಮೂರನೇ ಮಗುವಿಗೆ ಜನ್ಮ ನೀಡಿದರೆ ಬೋನಸ್ :
ವರದಿಗಳ ಪ್ರಕಾರ, ಬೀಜಿಂಗ್ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಮೂರನೇ ಮಗುವಿಗೆ ಜನ್ಮ ನೀಡಲು 90,000 ಯುವಾನ್ ನಗದು ಬೋನಸ್ ಅನ್ನು ನೀಡುತ್ತಿದೆ. ಅಂದರೆ,  ಸರಿಸುಮಾರು 11.50 ಲಕ್ಷ ರೂ. ವರದಿಯ ಪ್ರಕಾರ ನಗದು ಬೋನಸ್ ಹೊರತುಪಡಿಸಿ, ಕಂಪನಿಯು ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮತ್ತು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ರಜೆಯನ್ನು ಕೂಡಾ ನೀಡುತ್ತಿದೆ.

ಇದನ್ನೂ ಓದಿ : ಶೀಘ್ರದಲ್ಲೇ ಮತ್ತೊಂದು ಹೊಸ ಕೊರೊನಾ ರೂಪಾಂತರ ಹೊರಹೊಮ್ಮುವ ಸಾಧ್ಯತೆ..!

ಮೊದಲ ಮತ್ತು ಎರಡನೇ ಮಗುವನ್ನು ಹೊಂದಲು ಆಫರ್ :
ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳು 60,000 ಯುವಾನ್ ಬೋನಸ್‌ಗೆ ಅರ್ಹರಾಗಿರುತ್ತಾರೆ. 60,000 ಯುವಾನ್ ಅಂದರೆ 7 ಲಕ್ಷ ರೂ. ಇನ್ನು ಮೊದಲ ಮಗುವಿಗೆ ಜನ್ಮ ನೀಡಿದರೂ ಅವರಿಗೆ 30,000 ಯುವಾನ್ ಅಂದರೆ ಹೆಚ್ಚು ಕಮ್ಮಿ 3.50 ಲಕ್ಷ ದಷ್ಟು ಬೋನಸ್ ಪಡೆಯುತ್ತಾರೆ.  

ಯಾಕೆ ಜಾರಿಗೆ ಬಂತು ಈ ನೀತಿ : 
 ಒಂದು ಮಗು ನೀತಿಯು ಲಿಂಗ ಅನುಪಾತದಲ್ಲಿ ಬದಲಾವಣೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಚೀನಾ ಜನಸಂಖ್ಯೆಯ ಅಸಮಾನತೆಯನ್ನು ಎದುರಿಸುತ್ತಿದೆ.  ಒಂದು ಮಗುವಿನ ನೀತಿಯ ಕಾರಣದಿಂದಾಗಿ ಗಂಡು ಮಗುವಿನ ಬಯಕೆಯ ಮೇರೆಗೆ  ಗರ್ಭಪಾತಗಳ ಪ್ರಕರಣ ಗಳಲ್ಲಿಯೂ ಹೆಚ್ಚಳ ಕಂಡು ಬಂದಿತ್ತು. ಈ ಕಾರಣಕ್ಕಾಗಿ, ದೇಶವು ಒಂದು ಮಗು ನೀತಿಯನ್ನು ಕೊನೆಗೊಳಿಸಿತ್ತು. 

ಇದನ್ನೂ ಓದಿ : Knowledge Story: OK ಎಂಬುದರ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಆಸಕ್ತಿಕರ ಮಾಹಿತಿ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News