ಬೀಜಿಂಗ್: ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೇ ಎಂಬುದನ್ನು ಒಪ್ಪಿಕೊಂಡಿರುವ ಪಾಕ್ ಮಿತ್ರ ರಾಷ್ಟ್ರ ಚೀನಾ, ವಿಶ್ವಸಂಸ್ಥೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣ ಸೊಕ್ಕಿನಿಂದ ಕೂಡಿತ್ತು ಎಂದು ನಿಂದಿಸಿದೆ.
ಚೀನಿ ಸರ್ಕಾರ ನಡೆಸುತ್ತಿರುವ 'ಗ್ಲೋಬಲ್ ಟೈಮ್ಸ್' ಎಂಬ ಮಾಧ್ಯಮದಲ್ಲಿ ಇಂತಹ ಅಭಿಪ್ರಾಯ ವ್ಯಕ್ತವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮಾತನಾಡುತ್ತಾ, ಪಾಕಿಸ್ತಾನವು ಭಯೋತ್ಪಾದನೆಯ ತವರು ಎಂದು ಕರೆದಿದ್ದರು. "ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೇ. ಆದರೆ ದೇಶದ ರಾಷ್ಟ್ರೀಯ ನೀತಿ ಎಂದರೆ ಭಯೋತ್ಪಾದನೆಯನ್ನು ಬೆಂಬಲಿಸುವುದು. ಭಯೋತ್ಪಾದನೆಯನ್ನು ರಫ್ತು ಮಾಡುವ ಮೂಲಕ ಪಾಕಿಸ್ತಾನ ಯಾವ ಪ್ರಯೋಜನವನ್ನು ಪಡೆಯಬಹುದು? ಎಂದು ಹೇಳಿದ್ದರು.
ಭಾರತವು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ ಗಳು, ವಿದ್ವಾಂಸರುಗಳನ್ನು ಹುಟ್ಟು ಹಾಕಿದೆ, ಆದರೆ ಪಾಕಿಸ್ತಾನವು LeT ಮತ್ತು Jam ನಂತಹ ಭಯೋತ್ಪಾದಕ ಸಂಘಟನೆಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದರು. ಸುಷ್ಮಾರವರ ಈ ಭಾಷಣಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಚೀನಿ ಸರ್ಕಾರಿ ಮಾಧ್ಯಮವು ಸುಷ್ಮಾರ ಭಾಷಣವನ್ನು ಅಹಂಕಾರದ ಮಾತು ಎಂದು ಹೇಳಿದೆ. ಅಲ್ಲದೆ ತನ್ನ ಮಿತ್ರ ರಾಷ್ಟ್ರವನ್ನು ಕೊನೆಗೂ ಭಯೋತ್ಪಾದನೆ ರಾಷ್ಟ್ರ ಎಂದು ಚೀನಾ ಒಪ್ಪಿಕೊಂಡಿದೆ.