COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ

COVID 22!: 'ಕೋವಿಡ್ -22' (Covid-22)ತಳಿ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಮಾರಕವಾಗಬಹುದು ಮತ್ತು ಇದರ ಮೇಲೆ ಲಸಿಕೆಯ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿಯವರೆಗೆ, ಕರೋನಾದ ಡೆಲ್ಟಾ ರೂಪಾಂತರವನ್ನು (Delta Varient) ಅತ್ಯಂತ ಅಪಾಯಕಾರಿ ಮತ್ತು ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

Written by - Nitin Tabib | Last Updated : Aug 24, 2021, 07:56 PM IST
  • ಪ್ರಸ್ತುತ ಇರುವ ಕೊರೊನಾ ವೈರಸ್ ನ ಎಲ್ಲಾ ರೂಪಾಂತರಿಗಳು ಒಂದುಗೂಡಿ ಹೊಸ ಅಪಾಯ ಸೃಷ್ಟಿಸಬಹುದು.
  • ಒಂದು ವೇಳೆ ಡೆಲ್ಟಾ ಮ್ಯೂಟೆಶನ್ ಅಭಿವೃದ್ಧಿಗೊಂದರೆ, ಮಹಾಮಾರಿಯ ಹೊಸದೊಂದು ಫೆಸ್ ಕಾಣಿಸಿಕೊಳ್ಳಲಿದೆ.
  • ಕೊವಿಡ್ 22 ಡೆಲ್ಟಾ ರೂಪಾಂತರಿಗಿಂತ ಹೆಚ್ಚು ಘಾತಕ ಹಾಗೂ ಮಾರಕವಾಗಬಹುದು.
COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ  title=
COVID 22 New Strain (File Photo)

Covid-22!: ಕೊರೊನಾ ವೈರಸ್ (Covid-19) ಅಪಾಯ ಇನ್ನೂ ಮುಗಿದಿಲ್ಲ. ಈ ನಡುವೆ ತಜ್ಞರು ಹೊಸ ಸೂಪರ್ ಸ್ಪೇನ್ ಅಪಾಯದ ಆತಂಕದಲ್ಲಿದ್ದಾರೆ. ಕೊರೊನಾ ವೈರಸ್ ನ (Coronavirus) ಸೂಪರ್ ಸ್ಪೇನ್ (Super Strain) ಆಗಿರುವ Covid-22 ಮೊದಲ ಎಲ್ಲಾ ತಲಿಗಿಂದ ಮಾರಕವಾಗುವ ಸಾಧ್ಯತೆ ಇದೆ ಮತ್ತು ಮುಂಬರುವ ದಿನಗಳಲ್ಲಿ ಈ ಪ್ರಕರಣಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದೆ ಎಂದು ಇಮ್ಯೂನಾಲಾಜಿಸ್ಟ್ ಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಕೊರೊನಾ ಡೆಲ್ಟಾಗಿಂತ ತುಂಬಾ ಅಪಾಯಕಾರಿಯಾಗಿದೆ
ತಜ್ಞರು ಹೇಳುವ ಪ್ರಕಾರ 'ಕೊವಿಡ್ 22' ಸ್ಟ್ರೆನ್ ಡೆಲ್ಟಾ ವೇರಿಯಂಟ್ ಗಿಂತ ಹೆಚ್ಚು ಅಪಾಯಕಾರಿ ಸಾಬೀತಾಗವಹುದು. ಇದುವರೆಗೆ ಕೊರೋನಾದ ಡೆಲ್ಟಾ ವೇರಿಯಂಟ್ ಅಪಾಯಕಾರಿ ಹಾಗೂ ತೀವ್ರ ಸಾಂಕ್ರಾಮಿಕ ಎಂದು ಭಾವಿಸಲಾಗಿತ್ತು. ಆದರೆ, ಕೊವಿಡ್ 22 ವೇರಿಯಂಟ್ ಪ್ರಸ್ತುತ ಇರುವ ಎಲ್ಲಕ್ಕಿಂತ ಅಪಾಯಕಾರಿ ಡೆಲ್ಟಾ ವೇರಿಯಂಟ್ ಗಿಂತಲೂ ಜಾಸ್ತಿ ಅಪಾಯಕಾರಿ ಇರುವ ಸಾಧ್ಯತೆ ಇದೆ. 

2022 ರಲ್ಲಿ ಕೊವಿಡ್ ಹೊಸ ರೂಪಾಂತರಿ?
ಕೊವಿಡ್-22 ಹೆಸರನ್ನು ಸ್ವಿಟ್ಜರ್ಲ್ಯಾಂಡ್ ETH ಜ್ಯೂರಿಕ್ ನಲ್ಲಿ Systems and Synthetic Immunology ನಲ್ಲಿ ಪ್ರೊಫೆಸರ್ ಆಗಿರುವ ಸಾಯಿ ರೆಡ್ಡಿ ಅವರು ಮೊದಲ ಬಾರಿಗೆ ಬಳಕೆ ಮಾಡಿದ್ದಾರೆ. ಒಂದು ವರದಿಯ ಪ್ರಕಾರ 2022ರಲ್ಲಿ ಕೊವಿಡ್ ನ ಒಂದು ಹೊಸ ರೂಪಾಂತರಿ ಮುನ್ನೆಲೆಗೆ ಬರುವ ಸಾಧ್ಯತೆ ಇದ್ದು, ಇದು ತುಂಬಾ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ, ಅವರು ಕೇವಲ ಈ ಕುರಿತು ಶಂಕೆ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.

ವ್ಯಾಕ್ಸಿನ್ ಪ್ರಭಾವ
ಇಮ್ಯೂನಾಲಾಜಿ ವೈದ್ಯರಾಗಿರುವ ಡಾ. ರೆಡ್ಡಿ, ಇತ್ತೀಚೆಗಷ್ಟೇ ಮುನ್ನೆಲೆಗೆ ಬಂದಿರುವ ಕೊರೊನಾ ರೂಪಾಂತರಿಗಳು ಎಲ್ಲವು ಒಟ್ಟಿಗೆ ಸೇರಿ ಒಂದು ಹೊಸ ರೂಪಾಂತರಿ ಹುಟ್ಟುಹಾಕುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಪ್ರಸ್ತುತ ಇರುವ ವ್ಯಾಕ್ಸಿನ್ ಗಳು ಅದರ ಮೇಲೆ ಯಾವುದೇ ಪ್ರಭಾವ ಬೀರದೆ ಇರಬಹುದು ಎಂದು ಡಾ. ರೆಡ್ಡಿ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Coronavirus in India: ಅಕ್ಟೋಬರ್ ನಲ್ಲಿ ಮತ್ತೆ ಕೊರೊನಾ ಅಬ್ಬರ, ಮಕ್ಕಳಿಗೆ ಸಂಬಂಧಿಸಿದಂತೆ ಸಿದ್ಧತೆಗಳು ಕಾಣುತ್ತಿಲ್ಲ: MHA ಪ್ಯಾನೆಲ್

ಜರ್ಮನಿಯ ದಿನಪತ್ರಿಕೆ Blick ಜೊತೆಗೆ ಮಾತನಾಡಿರುವ ಪ್ರೊಫೆಸ್ಸರ್ ರೆಡ್ಡಿ, ಡೆಲ್ಟಾ ರೂಪಾಂತರಿಗೆ (Delta Strain) ಕೊವಿಡ್ 21 ಹೆಸರನ್ನಿಟ್ಟು, ಇದು ಎಲ್ಲಕ್ಕಿಂತ ಅಪಾಯಕಾರಿ ಸ್ಟ್ರೆನ್ ಆಗಿದೆ ಎಂದಿದ್ದಾರೆ. ಒಂದು ವೇಳೆ ಬೀಟಾ ಹಾಗೂ ಗಾಮಾ ವೇರಿಯಂಟ್ ಗಳು ಅತಿ ಹೆಚ್ಚು ಸಾಂಕ್ರಾಮಿಕವಾದರೆ ಅಥವಾ ಡೆಲ್ಟಾ ಮ್ಯೂಟೆಶನ್ ಅಭಿವೃದ್ದಿಗೊಂಡರೆ, ನಾವು ಮಹಾಮಾರಿಯ ಹೊಸ ಫೆಸ್ ನೋಡಬಹುದು ಎಂದಿದ್ದಾರೆ.

ಇದನ್ನೂ ಓದಿ-Coronavirus Third Wave: ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಆರಂಭ, 5 ದಿನಗಳಲ್ಲಿ 242 ಮಕ್ಕಳಿಗೆ ಸೋಂಕು

ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇರುವವರು ಸೂಪರ್ ಸ್ಪ್ರೆಡರ್
ಮುಂಬರುವ ದಿನಗಳಲ್ಲಿ ಕೊವಿಡ್ 22 ದೊಡ್ಡ ಸಾಬೀತಾಗಬಹುದು. ಕೊವಿಡ್ 22 ಪ್ರಸ್ತುತ ಇರುವ ನಾವು ಅನುಭವಿಸುತ್ತಿರುವ ರೂಪಾಂತರಿಗಿಂತ ಮಾರಕವಾಗಿರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ನಡೆಸಲಾಗಿರುವ ಹಲವು ಅಧ್ಯಯನಗಳು ಡೆಲ್ಟಾ ರೂಪಾಂತರಿ ವೈರಸ್ ನ ವೈರಲ್ ಲೋಡ್ ತುಂಬಾ ಹೆಚ್ಚಾಗಿದೆ ಎಂದು ಡಾ.ರೆಡ್ಡಿ ಹೇಳಿದ್ದಾರೆ. ಯಾವುದೇ ಓರ್ವ ವ್ಯಾಕ್ಸಿನ್ ಹಾಕಿಸಿಕೊಳ್ಳದ ವ್ಯಕ್ತಿ ಒಂದು ವೇಳೆ ಇದರ ಸಂಪರ್ಕಕ್ಕೆ ಬಂದರೆ ಆತ ಸೂಪರ್ ಸ್ಪ್ರೆಡರ್ ಸಾಬೀತಾಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Coronavirus Third Wave - ಕೊರೊನಾ ವೈರಸ್ ಸಂತಾನೋತ್ಪತ್ತಿ ದರ ಹೆಚ್ಚುತ್ತಿದೆ, ಮೂರನೇ ಅಲೆಯ ಕುರಿತು ತಜ್ಞರು ನೀಡಿದ ಎಚ್ಚರಿಕೆ ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News