Coronavirus Third Wave - ಕೊರೊನಾ ವೈರಸ್ ಸಂತಾನೋತ್ಪತ್ತಿ ದರ ಹೆಚ್ಚುತ್ತಿದೆ, ಮೂರನೇ ಅಲೆಯ ಕುರಿತು ತಜ್ಞರು ನೀಡಿದ ಎಚ್ಚರಿಕೆ ಇದು

Coronavirus Third Wave -  ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ (AIIMS Director Dr. Randeep Guleria) ಅವರು ವೈರಸ್‌ನ ಸಂತಾನೋತ್ಪತ್ತಿ ದರ (Coronavirus R-Value) ದೇಶದಲ್ಲಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ದೇಶದಲ್ಲಿ ಕೊರೊನಾ ವೈರಸ್ ನ  ಮೂರನೇ ಅಲೆ ಬಂದೆ ಬರಲಿದೆ ಎಂದು ಡಾ. ಶೇಖರ್ ಮಾಂಡೆ (Dr. Shekhar Mande) ಹೇಳಿದ್ದಾರೆ ಆದರೆ ಅದು ಹೇಗೆ ಮತ್ತು ಯಾವಾಗ ಬರುತ್ತದೆ ಎಂದು ಹೇಳುವುದು ಕಷ್ಟಕರ ಎಂದು ಅವರು ಪುನರುಚ್ಚರಿಸಿದ್ದಾರೆ.

Written by - Nitin Tabib | Last Updated : Aug 2, 2021, 02:55 PM IST
  • ಕೊರೊನಾ ಮೂರನೇ ಅಲೆ ಬಂದೆ ಬರಲಿದೆ.
  • ಆದರೆ ಯಾವಾಗ ಮತ್ತು ಹೇಗೆ ಬರಲಿದೆ ಎಂದು ಹೇಳುವುದು ಕಷ್ಟಕರ.
  • ಕೊರೊನಾ ವೈರಸ್ ಸಂತಾನೋತ್ಪತ್ತಿ ದರ ಏರಿಕೆಯಾಗುತ್ತಿದೆ ಎಂದ ಡಾ. ಗುಲೇರಿಯಾ.
Coronavirus Third Wave - ಕೊರೊನಾ ವೈರಸ್ ಸಂತಾನೋತ್ಪತ್ತಿ ದರ ಹೆಚ್ಚುತ್ತಿದೆ, ಮೂರನೇ ಅಲೆಯ ಕುರಿತು ತಜ್ಞರು ನೀಡಿದ ಎಚ್ಚರಿಕೆ ಇದು title=
 Coronavirus Third Wave (File Photo)

ನವದೆಯಲಿ:  Coronavirus Third Wave - ದೇಶಾದ್ಯಂತ ಕೊರೊನಾ ಬಿಕ್ಕಟ್ಟು (Corona Crisis) ಇನ್ನೂ ಮುಂದುವರಿದಿದೆ. ಕಳೆದ ಆರು ದಿನಗಳಿಂದ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮತ್ತೊಂದೆಡೆ, ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ವೈರಸ್‌ನ ಸಂತಾನೋತ್ಪತ್ತಿ ದರ (R-Value) ದೇಶದಲ್ಲಿ ಹೆಚ್ಚುತ್ತಿದೆ ಮತ್ತು ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಡಾ. ಗುಲೇರಿಯಾ ಅವರು ಹೇಳುವ ಪ್ರಕಾರ, ವೈರಸ್‌ನ (Coronavirus) ಆರ್ ಮೌಲ್ಯವು ಈ ಮೊದಲು  0.99 ರಷ್ಟಿತ್ತು.  ಆದರೆ ಇದೀಗ ಅದು 1 ಕ್ಕೆ ತಲುಪಿದೆ.  ಹೀಗಾಗಿ ಪ್ರತಿಯೊಬ್ಬರು ಜಾಗರೂಕರಾಗಿರಬೇಕಾಗಿದೆ.  ವಾಸ್ತವದಲ್ಲಿ, ಆರ್-ಮೌಲ್ಯವು ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡುವಿಕೆಯ ವೇಗವಾಗಿದೆ, ಅಂದರೆ, ಆರ್-ಮೌಲ್ಯ ಹೆಚ್ಚಾಗುವುದು ಎಂದರೆ ವೈರಸ್ ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡುವ ವೇಗ ಹೆಚ್ಚಾದಂತೆ ಎಂದರ್ಥ.

ಕೇವಲ ವ್ಯಾಕ್ಸಿನ್ ಮಾತ್ರ ವೈರಸ್ ನಿಂದ ಕಾಪಾಡಬಲ್ಲದು
ಇನ್ನೊಂದೆಡೆ ಈ ಕುರಿತು ಮಾತನಾಡಿರುವ CSIR ಮಹಾ ನಿರ್ದೇಶಕ ಡಾ. ಶೇಖರ್ ಸಿ ಮಾಂಡೆ, ಕೊರೊನಾ (Covid-19) ಮೂರನೇ ಅಲೆ ಬಂದೆಬರಲಿದೆ. ಆದರೆ, ಅದು ಯಾವಾಗ ಮತ್ತು ಹೇಗೆ ಬರಲಿದೆ ಎಂಬುದನ್ನು ಹೇಳುವುದು ಕಷ್ಟಕರ ಎಂದಿದ್ದಾರೆ. ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ವ್ಯಾಕ್ಸಿನ್ ಡೆಲ್ಟಾ ವೇರಿಯಂಟ್ (Corona Delta Variant) ಮೇಲೆ ಪರಿಣಾಮಕಾರಿಯಾಗಿದೆ. ಹೀಗಿರುವಾಗ ಎಲ್ಲರು ವ್ಯಾಕ್ಸಿನ್ (Corona Vaccine) ಹಾಕಿಸಿಕೊಳ್ಳಲೇಬೇಕು. ಏಕೆಂದರೆ ವೈರಸ್ ನಿಂದ ರಕ್ಷಿಸಿಕೊಳ್ಳುವ ಏಕಮೇವ ಮಾರ್ಗ ಇದಾಗಿದೆ ಎಂದು ಡಾ. ಶೇಖರ್ ಹೇಳಿದ್ದಾರೆ. 

ಕೇರಳ ಬಳಿಕ ಮಹಾರಾಷ್ಟ್ರ ತಲುಪಲಿದೆ ವೈರಸ್
ಡಾ. ಮಾಂಡೆ ಹೇಳುವ ಪ್ರಕಾರ ಡೆಲ್ಟಾ ಪ್ಲಸ್ ವೇರಿಯಂಟ್ (Corona Delta Plus Variant) ಕೂಡ ಚಿಂತೆ ಹೆಚ್ಚಿಸುವ ರೂಪಾಂತರಿಯಾಗಿದೆ. ಇದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ದೇಶಾದ್ಯಂತ ಇರುವ ಹೊಸ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳು ಕೇರಳದಿಂದ ವರದಿಯಾಗಿವೆ. ಸೋಂಕಿನ ಹರಡುವಿಕೆಯನ್ನು ಗಮನಿಸಿದರೆ, ವೈರಸ್, ಕೇರಳದ (Kerala) ಬಳಿಕ ಮಹಾರಾಷ್ಟ್ರ (Maharashtra) ತಲುಪುತ್ತಿದೆ ಮತ್ತು ನಂತರ ದೇಶದ ಇತರೆ ಭಾಗಗಳಿಗೆ ಹರಡುತ್ತದೆ.

ಇದನ್ನೂ ಓದಿ- Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN

ಅತಿ ಹೆಚ್ಚು ಪ್ರಭಾವಿತ ಕ್ಷೇತ್ರಗಳಲ್ಲಿ ರಣತಂತ್ರ ರೂಪಿಸಬೇಕು
ಡಾ. ರಣದೀಪ್ ಗುಲೇರಿಯಾ ಹೇಳುವ ಪ್ರಕಾರ, ಸಾಂಕ್ರಾಮಿಕದಿಂದ ಅತಿ ಹೆಚ್ಚು ಪ್ರಭಾವಿತಕ್ಕೊಳಗಾದ ಕ್ಷೇತ್ರಗಳಲ್ಲಿ ವೈರಸ್ ಸರಪಳಿಯನ್ನು ಹಾಳು ಮಾಡಲು ಟೆಸ್ಟ್, ಟ್ರ್ಯಾಕ್ ಹಾಗೂ ಟ್ರೀಟ್ (Test, Track And Treat) ರಣತಂತ್ರವನ್ನು ಹೆಣೆಯುವ ಅವಶ್ಯಕತೆ ಇದೆ. ದೇಶದ ಸುಮಾರು 46 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕೂಡ ಶೇಕಡಾವಾರು ಹೆಚ್ಚಾಗಿದೆ.

ಇದನ್ನೂ ಓದಿ-Coronavirus Update: ಭಾರತದಲ್ಲಿ Covid-19ನಿಂದ ಸುಮಾರು 50 ಲಕ್ಷ ಸಾವು, ಸ್ವಾತಂತ್ರ್ಯದ ನಂತರದ ಅತಿ ದೊಡ್ಡ ದುರಂತ ಎಂದ US ವರದಿ

ಈ ರೀತಿ ತಿಳಿದುಕೊಳ್ಳಿ R-Value
ದಡಾರ ಹಾಗೂ ಚಿಕನ್ ಪಾಕ್ಸ್ ಆರ್-ವ್ಯಾಲ್ಯೂ ದರ ಎಂಟು ಅಥವಾ ಅದಕ್ಕಿಂತ ಹೆಚ್ಚಾಗಿತ್ತು. ಅಂದರೆ, ಓರ್ವ ವ್ಯಕ್ತಿಯಿಂದ 8 ವ್ಯಕ್ತಿಗಳು ಸೊಂಕಿತಕ್ಕೆ ಒಳಗಾಗುತ್ತಿದ್ದಾರೆ ಎಂದರ್ಥ. ಕೊರೊನಾ ವಿಷಯದಲ್ಲಿಯೂ ಕೂಡ ಇದೆ ರೀತಿ ಸಂಭವಿಸಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. ಕೊರೊನಾ ಎರಡನೇ ಅಲೆಯ ವೇಳೆ ಕುಟುಂಬದ ಓರ್ವ ಸೋಂಕಿತ ವ್ಯಕ್ತಿಯಿಂದ ಇಡೀ ಕುಟುಂಬವೇ ಸೋಂಕಿಗೆ ಒಳಗಾಗುತ್ತಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

ಇದನ್ನೂ ಓದಿ-China Launched UUV: ಕೊರೊನಾ ಕಾಲದಲ್ಲಿಯೂ ಕೂಡ ಕರಾಮತ್ತು ಮೆರೆದ ಚೀನಾ, ಏನ್ ಮಾಡಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News