Diwali 2020: US ಹೌಸ್ ಆಫ್ ರೀಪ್ರೆಸೆಂಟೆಟಿವ್ ನಲ್ಲಿ ದೀಪಾವಳಿ ಪ್ರಾಮುಖ್ಯತೆಯ ನಿರ್ಣಯ ಮಂಡನೆ

ಯುಎಸ್ ಶಾಸಕರು ದೀಪಾವಳಿಯಂದು ಭಾರತೀಯ-ಅಮೇರಿಕನ್ ಸಮುದಾಯದ ಜನರಿಗೆ ಶುಭಕೋರಿದ್ದಾರೆ  ಮತ್ತು ಕಾಂಗ್ರೆಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು ಸದನದಲ್ಲಿ ಬೆಳಕಿನ ಹಬ್ಬದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸುವ ನಿರ್ಣಯವನ್ನು ಮಂಡಿಸಿದರು.

Last Updated : Nov 14, 2020, 04:22 PM IST
  • ಯುಎಸ್ ಶಾಸಕರು ದೀಪಾವಳಿಯಂದು ಭಾರತೀಯ-ಅಮೇರಿಕನ್ ಸಮುದಾಯದ ಜನರಿಗೆ ಶುಭಕೋರಿದ್ದಾರೆ.
  • ಯುಎಸ್ ಹೌಸ್ ಆಫ್ ರೀಪ್ರೆಸೆಂಟೆಟಿವ್ ನಲ್ಲಿ ದೀಪಾವಳಿ ಹಬ್ಬದ ಮಹತ್ವದ ಕುರಿತು ನಿರ್ಣಯ ಮಂಡನೆ.
  • ಸದಸ್ಯ ರಾಜ ಕೃಷ್ಣಮೂರ್ತಿ ಅವರು ಸದನದಲ್ಲಿ ಬೆಳಕಿನ ಹಬ್ಬದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸಿದ್ದಾರೆ.
Diwali 2020: US ಹೌಸ್ ಆಫ್ ರೀಪ್ರೆಸೆಂಟೆಟಿವ್ ನಲ್ಲಿ ದೀಪಾವಳಿ ಪ್ರಾಮುಖ್ಯತೆಯ  ನಿರ್ಣಯ ಮಂಡನೆ title=

ನವದೆಹಲಿ: ಯುಎಸ್ ಶಾಸಕರು ದೀಪಾವಳಿ  (Diwali) ಯಂದು ಭಾರತೀಯ-ಅಮೇರಿಕನ್ ಸಮುದಾಯದ ಜನರನ್ನು ಸ್ವಾಗತಿಸಿದ್ದಾರೆ ಮತ್ತು ಕಾಂಗ್ರೆಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು ಸದನದಲ್ಲಿ ಬೆಳಕಿನ ಹಬ್ಬದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸುವ ನಿರ್ಣಯವನ್ನು ಮಂಡಿಸಿದರು. ಶನಿವಾರ ಈ ಹಬ್ಬವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.

ಇದನ್ನು ಓದಿ- ಪದತ್ಯಾಗಕ್ಕೂ ಮುನ್ನ Chinaಗೆ ಭಾರಿ ಪೆಟ್ಟು ನೀಡಿದ Donald Trump, ಕೈಗೊಂಡ ನಿರ್ಣಯ ಏನು ಗೊತ್ತಾ?

ಅಮೆರಿಕಾದಲ್ಲಿ ಹಿಂದೂ, ಸಿಖ್ ಹಾಗೂ ಜೈನ ಸಮುದಾಯಕ್ಕ್ಕೆ ಸೇರಿಸುವ ಸುಮಾರು 40 ಲಕ್ಷಕ್ಕೂ ಅಧಿಕ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.  ಸದನದಲ್ಲಿ ಮಂಡಿಸಲಾದ ನಿರ್ಣಯವು ಭಾರತೀಯ-ಅಮೆರಿಕನ್ ಜನರಿಗೆ ದೀಪಾವಳಿಯ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಒತ್ತಿಹೇಳುತ್ತದೆ ಮತ್ತು ಜಗತ್ತಿನಾದ್ಯಂತ ಹರಡಿರುವ ಭಾರತೀಯ ಸಮುದಾಯದ ಜನರಿಗೆ ಆಳವಾದ ಗೌರವವನ್ನು ವ್ಯಕ್ತಪಡಿಸಿತು. ಶುಕ್ರವಾರ ಸದನದಲ್ಲಿ ಪ್ರಸ್ತಾಪ ಮಂಡಿಸುವಾಗ ಕೃಷ್ಣಮೂರ್ತಿ, "ಹಿಂದೂಗಳು, ಸಿಖ್ಖರು ಮತ್ತು ಜೈನರಿಗೆ, ದೀಪಾವಳಿಯ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ ಮತ್ತು ಈ ಬಾರಿ ಅಮೆರಿಕ ಮತ್ತು ವಿಶ್ವದಾದ್ಯಂತ ಸವಾಲುಗಳು ಮತ್ತು ಅನಿಶ್ಚಿತತೆಗಳಿಂದ ತುಂಬಿದ ವಾತಾವರಣದಲ್ಲಿ ಅದರ ಮಹತ್ವವನ್ನುಹೇಳುವುದರಲ್ಲಿ ಇನ್ನೂ ಹೆಚ್ಚು ಮಹತ್ವದ್ದಾಗಿದೆ. " ಎಂದಿದ್ದಾರೆ. 

ಇದನ್ನು ಓದಿ- Rahul Gandhiಯನ್ನು 'ನರ್ವಸ್ ಮುಖಂಡ' ಎಂದು ಕರೆದ US ಮಾಜಿ ರಾಷ್ಟ್ರಾಧ್ಯಕ್ಷ ಒಬಾಮಾ

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದಾದ್ಯಂತದ ಧಾರ್ಮಿಕ ವೈವಿಧ್ಯತೆಯನ್ನು ಶ್ಲಾಘಿಸುವ ಈ ಪ್ರಸ್ತಾಪವು ಉಭಯ ದೇಶಗಳ ನಡುವಿನ ಸಹಕಾರ ಮತ್ತು ಗೌರವದ ಸಂಬಂಧವನ್ನು ವಿವರಿಸುತ್ತದೆ. ಈ ವೇಳೆ ತನ್ನ ಶುಭಾಷಯಗಳನ್ನು ಹಂಚಿಕೊಂಡಿರುವ ಸೆನೆಟ್ ಸದಸ್ಯ ಮತ್ತು ಸೆನೆಟ್ ಇಂಡಿಯಾದ ಸಹ-ಅಧ್ಯಕ್ಷರು ಈ ವರ್ಷ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಉತ್ಸವಗಳು ಬಂದವು ಆದರೆ ದೀಪಾವಳಿ ಅವುಗಳಲ್ಲಿ ವಿಶಿಷ್ಟವಾಗಿದೆ ಎಂದು ಹೇಳಿದ್ದಾರೆ. "ನಾವು ದೊಡ್ಡ ಪ್ರಮಾಣದಲ್ಲಿ ಒಂದುಗೂಡಲು ಸಾಧ್ಯವಿಲ್ಲ. ಆದರೆ ನಾವು ಈ ಜಗತ್ತಿನಲ್ಲಿ ಒಳ್ಳೆಯತನಕ್ಕಾಗಿ ಹಬ್ಬವನ್ನು ಆಚರಿಸಬಹುದು" ಎಂದು ಅವರು ಹೇಳಿದ್ದಾರೆ. 

ಇದನ್ನು ಓದಿ- 'Political Islam'ಬ್ಯಾನ್, ಮಸೀದಿಗಳನ್ನು ಮುಚ್ಚಲು ಮುಂದಾಗಿದೆ ಈ ದೇಶ

ಒಂಟಿಯಾಗಿ ಬದುಕುಬೇಕಾಗಿರುವ ಈ ಇಂದಿನ ಸಮಯದಲ್ಲಿ ದೀಪಾವಳಿ ಸಂಪರ್ಕದ ಕೆಲಸ ಮಾಡಲು ಸಹಾಯಕಾರಿದೆ. ಈ ಕುರಿತು ಮಾತನಾಡಿರುವ  ಕಾರ್ನಿನ್, "ಪರಿಸ್ಥಿತಿ ಏನೇ ಇರಲಿ, ಬೆಳಕು ಯಾವಾಗಲೂ ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ ಮತ್ತು ಕೆಟ್ಟದ್ದರ ಮೇಲೆ ಉತ್ತಮ ಜಯಗಳಿಸುತ್ತದೆ ಎಂದು ದೀಪಾವಳಿ ನಮಗೆ ನೆನಪಿಸುತ್ತದೆ. ಅನಿಶ್ಚಿತತೆಯ ಈ ಅವಧಿಯಲ್ಲಿ ದೀಪಾವಳಿ ನಮಗೆ ಒಳ್ಳೆಯತನವನ್ನು ಹುಡುಕುವ ಅವಕಾಶ ನೀಡುತ್ತದೆ. ತುಳಸಿ ಗಬ್ಬಾರ್ಡ್ ಮತ್ತು ರೋ ಖನ್ನಾ ಸೇರಿದಂತೆ ಯುಎಸ್ ಕಾಂಗ್ರೆಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಹಲವಾರು ಸದಸ್ಯರು ದೀಪಾವಳಿ ಹಬ್ಬಕ್ಕೆ ಶುಭಾಷಯಗಳನ್ನು ಕೋರಿದ್ದಾರೆ.

Trending News