close

News WrapGet Handpicked Stories from our editors directly to your mailbox

ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ; 34 ಸಾವು, 17 ಮಂದಿಗೆ ಗಾಯ

ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Updated: Jul 31, 2019 , 04:00 PM IST
ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ;  34 ಸಾವು, 17 ಮಂದಿಗೆ ಗಾಯ
Representative image

ಕಾಬೂಲ್(ಅಫ್ಘಾನಿಸ್ತಾನ): ವಾಯುವ್ಯ ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆರಾತ್‌ನಿಂದ ಫರಾ ಪ್ರಾಂತ್ಯಕ್ಕೆ ತೆರಳುವ ಹೆದ್ದಾರಿಯಲ್ಲಿ ಡಜನ್ಗಟ್ಟಲೆ ಪ್ರಯಾಣಿಕರನ್ನು ಹೊತ್ತ ಬಸ್ ಹೋಗುತ್ತಿದ್ದಾಗ ಶಾವಿಜ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೆರಾತ್ ಆಸ್ಪತ್ರೆಯ ಅಧಿಕಾರಿ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದಿ ಟೋಲೋ ನ್ಯೂಸ್‌ಗೆ ತಿಳಿಸಿದ್ದಾರೆ.

ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಕಂದಹಾರ್ ಪ್ರಾಂತ್ಯದ ಬಿಡುವಿಲ್ಲದ ಮಾರುಕಟ್ಟೆಯಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದರು ಮತ್ತು 23 ಮಂದಿ ಗಾಯಗೊಂಡ ಒಂದು ದಿನದ ನಂತರ ಈ ಸ್ಫೋಟ ಸಂಭವಿಸಿದೆ.