ಬಾಗ್ದಾದ್‌ನ ಯುಎಸ್ ರಾಯಭಾರ ಕಚೇರಿ ಬಳಿ ಅಪ್ಪಳಿಸಿದ ರಾಕೆಟ್‌

ಹಲವಾರು ವಿದೇಶಿ ರಾಜತಾಂತ್ರಿಕ ಕಾರ್ಯಗಳನ್ನು ಹೊಂದಿರುವ ಬಾಗ್ದಾದ್‌ನಲ್ಲಿನ ಹೆಚ್ಚಿನ ಸುರಕ್ಷತೆಯ `ಹಸಿರು ವಲಯ'ಕ್ಕೆ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಇರಾಕಿ ಅಧಿಕಾರಿಗಳನ್ನು ಉಲ್ಲೇಖಿಸಿ ಅನಾಡೋಲು ಏಜೆನ್ಸಿ ವರದಿ ಮಾಡಿದೆ.

Last Updated : Jan 27, 2020, 12:10 PM IST
ಬಾಗ್ದಾದ್‌ನ ಯುಎಸ್ ರಾಯಭಾರ ಕಚೇರಿ ಬಳಿ ಅಪ್ಪಳಿಸಿದ ರಾಕೆಟ್‌  title=

ಬಾಗ್ದಾದ್: ಬಾಗ್ದಾದ್‌ನ ಯುಎಸ್ ರಾಯಭಾರ ಕಚೇರಿಯ ಬಳಿ ಭಾನುವಾರ ಐದು ರಾಕೆಟ್‌ಗಳು ಅಪ್ಪಳಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ವಸ್ತು ಹಾನಿ ಸಂಭವಿಸಿಲ್ಲ ಎಂದು ಇರಾಕಿ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ವಿದೇಶಿ ರಾಜತಾಂತ್ರಿಕ ಕಾರ್ಯಗಳನ್ನು ಹೊಂದಿರುವ ಬಾಗ್ದಾದ್‌ನಲ್ಲಿನ ಹೆಚ್ಚಿನ ಸುರಕ್ಷತೆಯ `ಹಸಿರು ವಲಯ'ಕ್ಕೆ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಇರಾಕಿ ಅಧಿಕಾರಿಗಳನ್ನು ಉಲ್ಲೇಖಿಸಿ ಅನಾಡೋಲು ಏಜೆನ್ಸಿ ವರದಿ ಮಾಡಿದೆ. ಈವರೆಗೂ ಈ ದಾಳಿಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ.

ಯುಎಸ್ ಸೈನ್ಯವನ್ನು ದೇಶದಿಂದ ಹಿಂತೆಗೆದುಕೊಳ್ಳುವಂತೆ ಸಾವಿರಾರು ಜನರು ಬಾಗ್ದಾದ್‌ನಲ್ಲಿ ನೆರೆದ ನಂತರ ಈ ಘಟನೆ ನಡೆದಿದೆ.

ಈ ತಿಂಗಳ ಆರಂಭದಲ್ಲಿ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ವೈಮಾನಿಕ ದಾಳಿಯಲ್ಲಿ ಅಮೆರಿಕ ಇರಾನಿನ ಜನರಲ್ ಕಾಸ್ಸೆಮ್ ಸೊಲೈಮಾನಿ ಅವರನ್ನು ಹತ್ಯೆಗೈದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.

ಬಾಗ್ದಾದ್‌ನ 'ಹಸಿರು ವಲಯ' ಇರಾಕಿ ರಾಜಧಾನಿಯ ಮಧ್ಯಭಾಗದಲ್ಲಿ ಹೆಚ್ಚು ಭದ್ರವಾದ ಪ್ರದೇಶವಾಗಿದ್ದು, ಅಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಗಳು ಇವೆ.

Trending News