Germany: ಭಾರೀ ಮಳೆ ಪ್ರವಾಹಕ್ಕೆ 20ಕ್ಕೂ ಹೆಚ್ಚು ಮಂದಿ ಬಲಿ, 50 ಜನರು ನಾಪತ್ತೆ..!

ರಕ್ಷಣೆಗಾಗಿ ಮನೆಗಳ ಛಾವಣಿ ಮೇಲೆ ಕುಳಿತವರು ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.

Written by - Zee Kannada News Desk | Last Updated : Jul 15, 2021, 05:01 PM IST
  • ಪಶ್ಚಿಮ ಜರ್ಮನಿಯಲ್ಲಿ ಮಳೆ ಮತ್ತು ಪ್ರವಾಹ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತ
  • ಅನೇಕ ಮನೆಗಳು ನೆಲಕಚ್ಚಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ
  • ಭೀಕರ ಪ್ರವಾಹದ ಮಧ್ಯೆಯೇ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ
Germany: ಭಾರೀ ಮಳೆ ಪ್ರವಾಹಕ್ಕೆ 20ಕ್ಕೂ ಹೆಚ್ಚು ಮಂದಿ ಬಲಿ, 50 ಜನರು ನಾಪತ್ತೆ..! title=
ಜರ್ಮನಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ

ಜರ್ಮನಿ: ಪಶ್ಚಿಮ ಜರ್ಮನಿಯಲ್ಲಿ ಭಾರಿ ಮಳೆ ಮತ್ತು ಪ್ರವಾಹಕ್ಕೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ವರುಣನ ಆರ್ಭಟ ಹೆಚ್ಚಾಗಿದ್ದರಿಂದ ಇದ್ದಕ್ಕಿದ್ದಂತೆ ಭಾರೀ ಪ್ರವಾಹ ಉಂಟಾಗಿದೆ. ಅನೇಕ ಮನೆಗಳ ಸುತ್ತ ನೀರು ಆವರಿಸಿದ್ದರಿಂದ ಜನರು ಪರದಾಡುವಂತಾಗಿತ್ತು. ಜೀವ ಉಳಿಸಿಕೊಳ್ಳಲು ಅನೇಕರು ಮನೆಗಳ ಛಾವಣಿಗಳ ಮೇಲೆ ಕುಳಿತುಕೊಂಡಿದ್ದರು. ಆದರೆ ಪ್ರವಾಹದ ಮಟ್ಟ ಏರಿಕೆಯಾಗಿದ್ದರಿಂದ ನೋಡನೋಡುತ್ತಿದ್ದಂತೆ ಅನೇಕರು ಕೊಚ್ಚಿಹೋಗಿದ್ದಾರೆಂದು ಕೊಬ್ಲೆನ್ಜ್ ನಗರದ ಪೊಲೀಸರು ತಿಳಿಸಿದ್ದಾರೆ.

ಷುಲ್ಡ್ ಪುರಸಭೆಗೆ ವ್ಯಾಪ್ತಿಗೆ ಬರುವ ಅನೇಕ ಮನೆಗಳು ಪ್ರವಾಹ(Flood)ದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿವೆ. ಉತ್ತರ ರೈನ್-ವೆಸ್ಟ್ಫಾಲಿಯಾ ರಾಜ್ಯದಲ್ಲಿರುವ ಷುಲ್ಡ್ ನಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಮತ್ತು ಜೀವಹಾನಿಯುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಂಡಮಾರುತದ ಹೊಡೆತಕ್ಕೆ ಭಾರೀ ಅಲೆಗಳು ಸೃಷ್ಟಿಯಾಗಿದ್ದವು. ಇದರಿಂದ ಹೆಚ್ಚು ಹಾನಿಗೊಳಗಾದ ನದಿಗಳು ದಡಗಳನ್ನು ಸೀಳಿ ಪ್ರವಾಹಕ್ಕೆ ಕಾರಣವಾಗಿದೆ.

ಇದನ್ನೂ ಓದಿ: COVID-19 Effect: ಕೊರೊನಾದಿಂದ ವಾಡಿಕೆ ಲಸಿಕೆ ತಪ್ಪಿಸಿಕೊಂಡ 23 ಮಿಲಿಯನ್ ಮಕ್ಕಳು..!

ಎಡಬಿಡದೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ(Heavy Rainfall)ಯಿಂದಾಗಿ ಅನೇಕರು ನಾಪತ್ತೆಯಾಗಿದ್ದು, ಹಲವು ಮನೆಗಳು ನೆಲಕಚ್ಚಿವೆ. ರೈನ್ಲ್ಯಾಂಡ್-ಪ್ಯಾಲಟಿನೇಟ್ ರಾಜ್ಯದಲ್ಲಿಯೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಅನೇಕ ಮನೆಗಳು ಕುಸಿಯುವ ಭೀತಿಯಲ್ಲಿದ್ದು, ಇನ್ನು ಕೆಲ ಪ್ರದೇಶಗಳ ಪರಿಸ್ಥಿತಿಯು ಅತ್ಯಂತ ಶೋಚನೀಯವಾಗಿದೆ.  

ಪ್ರವಾಹದಿಂದಾಗಿ ಇನ್ನೂ ಅನೇಕರು ಮನೆಗಳ ಛಾವಣಿಗಳ ಮೇಲೆ ಸಿಲುಕಿಕೊಂಡು ಪರದಾಡುತ್ತಿದ್ದಾರೆ.  ಪ್ರವಾಹ(Flood)ದ ಮಧ್ಯೆಯೇ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಮನೆಯ ಛಾವಣಿ ಏರಿ ಎಷ್ಟು ಜನರು ರಕ್ಷಣೆಗೋಸ್ಕರ ಕಾಯುತ್ತಿದ್ದಾರೆಂಬ ಅಂದಾಜು ನಮಗೆ ಇನ್ನೂ ಸ್ಪಷ್ಟವಾಗಿಲ್ಲ. ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರವಾಹದ ಮಧ್ಯೆಯೇ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: 6 ಸಾವಿರ ಅಡಿ ಎತ್ತರದಲ್ಲಿ ಉಯ್ಯಾಲೆ ತೂಗುತ್ತಿದ್ದ ಮಹಿಳೆಯರು, ಮುಂದೇನಾಯ್ತು? ವಿಡಿಯೋ ನೋಡಿ

ನೈಋತ್ಯ ಜರ್ಮನಿಯಲ್ಲಿಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(IMD) ಎಚ್ಚರಿಕೆ ನೀಡಿದ್ದು, ನದಿಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಿದ್ದಾರೆ. ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News