ಲಾಹೋರ್: ಪತ್ನಿಯೊಂದಿಗೆ ಜಗಳವಾಡುವ ವೇಳೆ ವ್ಯಕ್ತಿಯೋರ್ವ ಆಕೆಯ ಮೂಗು ಮತ್ತು ಕೂದಲನ್ನು ಕತ್ತರಿಸಿದ ಕ್ರೂರ ಘಟನೆ ಮಂಗಳವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.
ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎಂದು ಸಮಾ ಟಿವಿ ವರದಿ ಮಾಡಿದೆ.
ನನ್ನ ತಾಯಿ ಹಲವು ಸಂಘಗಲ್ಗೆ ಸದಸ್ಯರಾಗಿ ಹಣ ಉಳಿಸುತ್ತಿದ್ದರು. ಆದರೆ, ಅಪ್ಪ-ಅಮ್ಮ ಯಾವಾಗಲೂ ಜಗಳ ಆಡುತ್ತಿದ್ದರು. ಅಮ್ಮನಿಗೆ ಹೊಡೆಯುತ್ತಿದ್ದರು ಎಂದು ವಿಚಾರಣೆ ವೇಳೆ ಅವರ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.
"ಇಬ್ಬರೂ ಜಗಳವಾಡುವಾಗ ಮೊದಲು ಅಪ್ಪ, ಅಮ್ಮನಿಗೆ ಪೈಪ್ ನಿಂದ ಹೊಡೆದರು. ಬಳಿಕ ಚಾಕು ತಂದು ಅಮ್ಮನ ಮೂಗು, ಕೂದಲು ಕತ್ತರಿಸಿದರು" ಎಂದು ಮಗಳು ಹೇಳಿಕೆ ನೀಡಿದ್ದಾಳೆ.
ಕುಟುಂಬದ ಇತರ ಸದಸ್ಯರ ಪ್ರಕಾರ, ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಸದಾ ಜಗಳವಾಡುತ್ತಿದ್ದುದಾಗಿ ತಿಳಿದುಬಂದಿದ್ದು, ಪತ್ನಿ ಈಗಾಗಲೇ ಎರಡು ಬಾರಿ ಮನೆಬಿಟ್ಟು ಹೋಗಿದ್ದಾಗಿ ತಿಳಿದುಬಂದಿದೆ.