ಅಗಸ್ಟ್ 14 ರೊಳಗೆ ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ?

ಆಗಸ್ಟ್ 14 ರ ಒಳಗಡೆ  ಪಾಕಿಸ್ತಾನದ ನೂತನ  ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.ಈಗ  ಅವರು ಸರ್ಕಾರವನ್ನು ರಚಿಸಲು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರಿಗೆ ತಲುಪುವ  ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Last Updated : Jul 29, 2018, 05:07 PM IST
ಅಗಸ್ಟ್ 14 ರೊಳಗೆ ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ? title=

ಇಸ್ಲಾಮಾಬಾದ್: ಆಗಸ್ಟ್ 14 ರ ಒಳಗಡೆ  ಪಾಕಿಸ್ತಾನದ ನೂತನ  ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.ಈಗ  ಅವರು ಸರ್ಕಾರವನ್ನು ರಚಿಸಲು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರಿಗೆ ತಲುಪುವ  ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಜುಲೈ 25 ರ ಚುನಾವಣೆ ನಂತರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ  ಸರ್ಕಾರ ರಚಿಸಲು ಬಹುಮತದ ಕೊರತೆ ಇದೆ.ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಟಿಐ ನಾಯಕ ನೈನುಲ್ ಹಕ್ . "ನಮ್ಮ ಹೋಂ ವರ್ಕ್  ನಾವು ಮಾಡಿದ್ದೇವೆ ಮತ್ತು  ಆಗಸ್ಟ್ 14 ರ ಮೊದಲು ಇಮ್ರಾನ್ ಖಾನ್  ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ" ಎಂದು ಹಕ್ ತಿಳಿಸಿದರು.

ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಪ್ರಕಟಿಸಿದ ಫಲಿತಾಂಶಗಳ ಪ್ರಕಾರ ಪಿಟಿಐ 116 ಸ್ಥಾನಗಳನ್ನು ಗಳಿಸಿದೆ. ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್-ಎನ್) 64 ಸ್ಥಾನಗಳನ್ನು ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಗೆ 43 ಸ್ಥಾನಗಳನ್ನು  ಗಳಿಸಿ ಕ್ರಮವಾಗಿ ಎರಡನೆಯ ಮತ್ತು ಮೂರು ಸ್ಥಾನಗಳಲ್ಲಿವೆ ಎಂದು ಇಸಿಪಿ ಹೇಳಿದೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಒಟ್ಟು 342 ಸದಸ್ಯರನ್ನು ಒಳಗೊಂಡಿದೆ, ಅದರಲ್ಲಿ 272 ನೇರವಾಗಿ ಚುನಾಯಿತವಾಗಿದ್ದಾರೆ. 172 ಸೀಟುಗಳನ್ನು ಹೊಂದಿದ  ಪಕ್ಷವು ಮಾತ್ರ ಸರ್ಕಾರವನ್ನು ರಚಿಸಲಿದೆ. 

Trending News