ನ್ಯೂಯಾರ್ಕ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತ ದಾಳಿ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಎದುರು 'ಗ್ಲೋಬಲ್ ಟೆರರ್ ಪಾಕಿಸ್ತಾನ', 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆಗಳು ಮೊಳಗಿವೆ.
ಲಷ್ಕರ್ ಇ ತೊಯ್ಬಾ ಪಾಕಿಸ್ತಾನ ಘೋಷಣೆ:
ಪುಲ್ವಾಮಾ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿ ಅಮೆರಿಕದಲ್ಲಿ ವಾಸವಿರುವ ಭಾರತೀಯರು ಈ ಪ್ರತಿಭಟನೆ ಕೈಗೊಂಡಿದ್ದು, ನ್ಯೂಯಾರ್ಕ್ನ ಪಾಕಿಸ್ತಾನದ ರಾಯಭಾರ ಕಚೇರಿ ಎದುರು 'ಲಷ್ಕರ್ ಇ ತೊಯ್ಬಾ', 'ಪಾಕಿಸ್ತಾನ್ ಮುರ್ದಾಬಾದ್', 'ಗ್ಲೋಬಲ್ ಟೆರರ್ ಪಾಕಿಸ್ತಾನ', 'ಎಲ್ ಇ ಟಿ ಪಾಕಿಸ್ತಾನ', '9/11 ಪಾಕಿಸ್ತಾನ', '26/11 ಪಾಕಿಸ್ತಾನ', 'ಒಸಾಮಾ ಬಿನ್ ಲಾಡೆಲ್ ಪಾಕಿಸ್ತಾನ'' ಎಂಬಿತ್ಯಾದಿ ಘೋಷಣೆ ಕೂಗುತ್ತಿದ್ದಾರೆ.
#WATCH Members of Indian community protested outside the Pakistan consulate in New York,US on 22 February, against #PulwamaTerrorAttack. pic.twitter.com/sXJCDA6jXF
— ANI (@ANI) February 23, 2019
ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ ಬಳಿಕ ಉಭಯ ದೇಶಗಳ ನಡುವೆ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ನೀಡಲು ಭಾರತ ಎದುರು ನೋಡುತ್ತಿದೆ. ಉಗ್ರ ದಾಳಿಯಲ್ಲಿ 50 ಯೋಧರನ್ನು ಕಳೆದುಕೊಂಡಿದೆ. ಪುಲ್ವಾಮಾ ದಾಳಿ ನಿಜಕ್ಕೂ ದುರದೃಷ್ಟಕರ. ಇದೇ ಘಟನೆ ಎರಡು ದೇಶಗಳ ನಡುವೆ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತ-ಪಾಕಿಸ್ತಾನದ ನಡುವಿನ ವಿಷಮ ಪರಿಸ್ಥಿತಿಯನ್ನು ತಿಳಿಗೊಳಿಸಲು ನಾವು ಬಯಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನೊಂದೆಡೆ ಕೊನೆಗೂ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, 40 ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.