ಪಾಕಿಸ್ತಾನದಲ್ಲಿ ಹಣದುಬ್ಬರ: ಅನೇಕ ವಸ್ತುಗಳ ಬೆಲೆ ದುಬಾರಿ

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

Last Updated : Jul 2, 2020, 12:23 PM IST
ಪಾಕಿಸ್ತಾನದಲ್ಲಿ ಹಣದುಬ್ಬರ: ಅನೇಕ ವಸ್ತುಗಳ ಬೆಲೆ ದುಬಾರಿ title=

ನವದೆಹಲಿ : ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಪಾಕಿಸ್ತಾನದಲ್ಲಿ (Pakistan) ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ (Inflation) ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

ಪಾಕಿಸ್ತಾನದ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ ಅನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ಕ್ಸಿನ್ಹುವಾ ವಿವಿಧ ಸರಕು ಮತ್ತು ಸೇವೆಗಳ ಬೆಲೆ ಚಿಲ್ಲರೆ ಹಣದುಬ್ಬರ ದರವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ವರದಿಮಾಡಿದೆ. ಶಿಕ್ಷಣ, ಮನೆ ಬಾಡಿಗೆ ಮತ್ತು ಯುಟಿಲಿಟಿ ಬಿಲ್‌ಗಳು ಮತ್ತು ಆಹಾರ ಮತ್ತು ಪಾನೀಯಗಳ ಬೆಲೆಗಳು ಏರಿಕೆಯಾಗಿವೆ. 2020 ರ ಆರಂಭದಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಸರ್ಕಾರವು ಅನಿಲ ಮತ್ತು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿತ್ತು. ವಾಸ್ತವವಾಗಿ ಪಾಕಿಸ್ತಾನ ಸರ್ಕಾರ ಐಎಂಎಫ್ನಿಂದ ಬೇಲ್ ಔಟ್ ಪ್ಯಾಕೇಜ್ಗಾಗಿ ಕಾಯುತ್ತಿದೆ. ಹಣಕಾಸಿನ ನಷ್ಟವನ್ನು ಕಡಿಮೆ ಮಾಡಲು ಈ ಬೇಲ್‌ ಔಟ್ ಪ್ಯಾಕೇಜ್ ಬಹಳ ಮುಖ್ಯ.

ಯುರೋಪಿಯನ್ ಯೂನಿಯನ್ ಮಹತ್ವದ ನಿರ್ಧಾರದಿಂದ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ

ಅತಿ ಹೆಚ್ಚು ಹಣದುಬ್ಬರ :
ಪಾಕಿಸ್ತಾನ ಸ್ಟೇಟ್ ಬ್ಯಾಂಕ್ (ಎಸ್‌ಬಿಪಿ) 2020 ರ ಆರ್ಥಿಕ ವರ್ಷದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರವನ್ನು ಕಂಡಿದ್ದೇವೆ, ಇದು ಬಡ್ಡಿದರವನ್ನು ಹೆಚ್ಚಿಸಲು ನಮ್ಮನ್ನು ಒತ್ತಾಯಿಸಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಮಾತ್ರವಲ್ಲದೆ ಭಾರತ, ಚೀನಾ, ಬಾಂಗ್ಲಾದೇಶ ಮತ್ತು ನೇಪಾಳದಂತಹ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಪಾಕಿಸ್ತಾನ ಅತಿದೊಡ್ಡ ಹಣದುಬ್ಬರವನ್ನು ದಾಖಲಿಸಿದೆ.

ದ್ವಿದಳ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳ: 
ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಸರುಬೇಳೆ ಅನ್ನು ಪ್ರತಿ ಕೆ.ಜಿ.ಗೆ 220-260 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ತೊಗರಿ ಬೇಳೆ ಬೆಲೆ ಕೆ.ಜಿ.ಗೆ 160 ರೂ.ಗೆ ಏರಿದೆ. ಇದಲ್ಲದೆ ಸಕ್ಕರೆಯ ಬೆಲೆ 75 ರೂಪಾಯಿಗಳನ್ನು ಮೀರಿದೆ. ಪಾಕಿಸ್ತಾನ ಪಿಬಿಎಸ್ ಪ್ರಕಾರ, ಹಣದುಬ್ಬರ ದರವು ದಾಖಲೆಯ ಮಟ್ಟವನ್ನು ತಲುಪಿದೆ.

ಭಾರತದ ಪರಾಕ್ರಮ ಕಂಡು ಭಯಭೀತರಾದ ಪಾಕಿಸ್ತಾನ ವಿದೇಶಾಂಗ ಸಚಿವ

ಪಾಕಿಸ್ತಾನ ರೂಪಾಯಿ ಮೌಲ್ಯ ಕೂಡ ಕುಸಿದಿದೆ: 
ಪಾಕಿಸ್ತಾನದ ರೂಪಾಯಿ ಮೌಲ್ಯದಲ್ಲೂ ಕುಸಿತ ಕಂಡು ಬಂದಿದೆ. ಈ ವರ್ಷ ಪಾಕಿಸ್ತಾನದ ರೂಪಾಯಿ ಮೌಲ್ಯ ಇದುವರೆಗೆ ಶೇ 25 ರಷ್ಟು ಕುಸಿದಿದೆ. ಇದರಿಂದಾಗಿ ಹಣದುಬ್ಬರದ ಕೆಟ್ಟ ಸ್ಥಿತಿ ಇದೆ. ಕಳೆದ ತಿಂಗಳು ಸಹ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ಪಾಕಿಸ್ತಾನದಲ್ಲಿ ಹಣದುಬ್ಬರವು ಹಲವು ವರ್ಷಗಳ ಉತ್ತುಂಗದಲ್ಲಿದೆ ಎಂದು ವರದಿಯಲ್ಲಿ ತಿಳಿಸಿತ್ತು. ಜನವರಿಯಲ್ಲಿ ಹಣದುಬ್ಬರ ಶೇ 14.6 ತಲುಪಿದೆ. ಆದಾಗ್ಯೂ ಪೆಟ್ರೋಲಿಯಂ ಉತ್ಪನ್ನಗಳ ಕಡಿತ ಮತ್ತು ಬಡ್ಡಿದರಗಳಿಂದ ಇದು ಸ್ವಲ್ಪ ಕಡಿಮೆಯಾಗಿದೆ. ಈ ಹಿಂದೆ ಆರ್ಥಿಕ ವರ್ಷ 2012 ರಲ್ಲಿ ವಿವಿಧ ಕಾರಣಗಳಿಂದಾಗಿ ಹಣದುಬ್ಬರವು  ಶೇಕಡಾ 11.0 ಕ್ಕೆ ತಲುಪಿತ್ತು.

Trending News