ಯಾವ ದೇಶದಲ್ಲಿ ವಿಶ್ವದ ಅತಿ ದುಬಾರಿ ಬೆಲೆಯ Face Mask ತಯಾರಿಸುತ್ತಿದೆ ಗೊತ್ತಾ?

ಅಮೇರಿಕಾದಲ್ಲಿರುವ ಚೀನೀ ಉದ್ಯಮಿಗಳ ಡಿಮಾಂಡ್ ಆಧಾರದ ಮೇಲೆ ವಿಶ್ವದ ಅತ್ಯಂತ ದುಬಾರಿ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ.

Last Updated : Aug 10, 2020, 01:56 PM IST
ಯಾವ ದೇಶದಲ್ಲಿ  ವಿಶ್ವದ ಅತಿ ದುಬಾರಿ ಬೆಲೆಯ Face Mask ತಯಾರಿಸುತ್ತಿದೆ ಗೊತ್ತಾ?  title=

ನವದೆಹಲಿ: ಕೊರೊನಾ ವೈರಸ್ (Coronavirus) ಪ್ರಕೋಪದ ಕಾಲವನ್ನು ಅವಸರವನ್ನಾಗಿ ಸೃಷ್ಟಿಸುವ ಸಲುವಾಗಿ ಇಸ್ರೇಲ್ ಮೂಲದ ಕಂಪನಿಯೊಂದು ಚಿನ್ನ ಮತ್ತು ವಜ್ರ ಬಳಸಿ ಫೇಸ್ ಮಾಸ್ಕ್ ತಯಾರಿಸುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ನ ಆಭರಣ ತಯಾರಿಕಾ ಕಂಪನಿ, ಕೊರೋನಾವೈರಸ್ ನಿಂದ ಬಚಾವಾಗಲು ವಿಶ್ವದ ಅತ್ಯಂತ ದುಬಾರಿ ಫೇಸ್ ಮಾಸ್ಕ್ ಸಿದ್ಧಪಡಿಸಿರುವುದಾಗಿ ಹೇಳಿದೆ. ಮಾರುಕಟ್ಟೆಯಲ್ಲಿ ಈ ಮಾಸ್ಕ್ ಬೆಲೆ 15 ಲಕ್ಷ ಡಾಲರ್ ಇರಲಿದೆ ಎಂದು ಕಂಪನಿ ಹೇಳಿದೆ. ಚಿನ್ನದಿಂದ ತಯಾರಿಸಲಾಗಿರುವ ಈ ಮಾಸ್ಕ್ ನಲ್ಲಿ ವಜ್ರದ ಹರಳುಗಳನ್ನು ಕೂಡ ಉಪಯೋಗಿಸಲಾಗಿದೆ.

18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿರುವ ಈ ಫೇಸ್ ಮಾಸ್ಕ್ ನಲ್ಲಿ ಒಟ್ಟು 3,600 ಕಪ್ಪು ಮತ್ತು ಬಿಳಿ ವಜ್ರದ ಹರಳುಗಳು ಮತ್ತು ಎನ್ 99 ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ಈ ಮಾಸ್ಕ್  ವಿನ್ಯಾಸಕ ಇಸಾಕ್ ಲೆವಿ ಹೇಳಿದ್ದಾರೆ. ಖರೀದಿದಾರರ ಬೇಡಿಕೆಯ ಮೇರೆಗೆ ಇವುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಮುಕ್ತಾಯಕ್ಕೂ ಮುನ್ನವೇ ಈ ಮಾಸ್ಕ್ ತಯಾರಾಗಬೇಕು ಹಾಗೂ ಇದು ವಿಶ್ವದ ಅತ್ಯಂತ ದುಬಾರಿ ಮಾಸ್ಕ್ ಆಗಿರಬೇಕು ಎಂಬುದು ಈ ಮಾಸ್ಕ್ ಗೆ ಆರ್ಡರ್ ನೀಡಿದವರೇ ಬೇಡಿಕೆಯಾಗಿತ್ತು ಎಂದು ಎವೆಲ್ ಕಂಪನಿಯ ಮಾಲೀಕ ಲೆವಿ ಹೇಳಿದ್ದಾರೆ.

ಈ ಮಾಸ್ಕ್ ಅನ್ನು ಯಾರು ಮಾರಾಟಮಾಡಲಿದ್ದಾರೆ ಎಂಬ ಮಾಹಿತಿಯನ್ನು ನೀಡಲು ನಿರಾಕರಿಸಿರುವ ಲೆವಿ, ಈ ಮಾಸ್ಕ್ ಗಾಗಿ ಅಮೇರಿಕಾ ಮೂಲದ ಚೀನಿ ಉದ್ಯಮಿಯೊಬ್ಬರು ಈ ಮಾಸ್ಕ್ ಗಾಗಿ ಬೇಡಿಕೆ ಸಲ್ಲಿಸಿದ್ದಾರೆ ಏಂದು ಮಾತ್ರ ಮಾಹಿತಿ ನೀಡಿದ್ದಾರೆ.

ಇಂತಹ ಸವಾಲಿನಕಾಲದಲ್ಲಿ   ನನ್ನ ನೌಕರರಿಗೆ ಈ ಮಾಸ್ಕ್ ಮೂಲಕ ಕೆಲಸ ದೊರೆತಿರುವುದು ನನಗೆ ಸಂತೋಷವಾಗಿದೆ.' ಈ ಹಿಂದೆ, ಡಿಸೈನರ್ ಉಡುಪಿನೊಂದಿಗೆ ಹೊಂದಾಣಿಕೆಯಾಗುವ ಮಾಸ್ಕ್ ತಯಾರಿಕಾ ಕೆಲಸ  ಸಿಕ್ಕ ಕಾರಣ ಲಾಭ ಉಂಟಾಗಿತ್ತು. ಕರೋನಾ ಕಾಲದಲ್ಲಿ ನೆರೆವೆರಿಸಲಾದ ವಿವಾಹಗಳಲ್ಲಿ  ವಧುವಿಗಾಗಿ ಸಿದ್ಧಪದಿಸಲಾಗಿದ್ದ ಮಾಸ್ಕ್ ಗಳೂ ಕೂಡ ಜನರನ್ನು ತುಂಬಾ ಆಕರ್ಷಿಸಿದ್ದವು ಎಂದು ಅವರು ಹೇಳಿದ್ದಾರೆ.
 

Trending News