Hafiz Muhammad Saeed : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ 31 ವರ್ಷ ಜೈಲು ಶಿಕ್ಷೆ!

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮುಹಮ್ಮದ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ, 3 ಲಕ್ಷ 40 ಸಾವಿರ ದಂಡವನ್ನೂ ನ್ಯಾಯಾಲಯ ವಿಧಿಸಿದೆ.

Written by - Channabasava A Kashinakunti | Last Updated : Apr 8, 2022, 07:48 PM IST
  • ಭಾರತದ ಪ್ರಮುಖ ದಾಳಿಯ ಹೊಣೆ ಹೊತ್ತ ಹಫೀಜ್
  • ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ವಿಶ್ವಸಂಸ್ಥೆ
  • ಎಲ್‌ಇಟಿ ನಿಷೇಧದ ನಂತರ ಹೊಸ ಸಂಘಟನೆ ಕಟ್ಟಿದ್ದ
Hafiz Muhammad Saeed : ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ 31 ವರ್ಷ ಜೈಲು ಶಿಕ್ಷೆ! title=

ಇಸ್ಲಾಮಾಬಾದ್ : ಪಾಕಿಸ್ತಾನದ ನ್ಯಾಯಾಲಯವೊಂದು ಭಯೋತ್ಪಾದಕ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮುಹಮ್ಮದ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ, 3 ಲಕ್ಷ 40 ಸಾವಿರ ದಂಡವನ್ನೂ ನ್ಯಾಯಾಲಯ ವಿಧಿಸಿದೆ.

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್

ಹಫೀಜ್ ಮುಹಮ್ಮದ್ ಸಯೀದ್(Hafiz Muhammad Saeed) ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಮುಖ್ಯಸ್ಥನಾಗಿದ್ದ. ಈ ಸಂಘಟನೆಯು ಭಾರತದಲ್ಲಿ ನಡೆದ ಹಲವು ಪ್ರಮುಖ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ. ಭಾರತೀಯ ಮುಸ್ಲಿಮರನ್ನು ಕೆರಳಿಸುವ ಹೇಳಿಕೆಗಳನ್ನೂ ನೀಡುತ್ತಿದ್ದ.

ಇದನ್ನೂ ಓದಿ : White House: ಭಾರತ ಮೂಲದ ವೇದಾಂತ್ ಪಟೇಲ್ 'ಸೂಪರ್ ಟ್ಯಾಲೆಂಟೆಡ್' ಎಂದ ಶ್ವೇತಭವನ

ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ವಿಶ್ವಸಂಸ್ಥೆ

ಭಾರತದ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯು ಹಫೀಜ್ ಮುಹಮ್ಮದ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಈತನ ಮೇಲೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಕಳೆದ ವರ್ಷ ಜುಲೈ 17ರಂದು ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.

ಎಲ್‌ಇಟಿ ನಿಷೇಧದ ನಂತರ ಹೊಸ ಸಂಘಟನೆ ಕಟ್ಟಿದ್ದ

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಫೆಬ್ರವರಿ 2021 ರಲ್ಲಿ ಭಯೋತ್ಪಾದಕರಿಗೆ ಧನಸಹಾಯ ನೀಡಿದ ಎರಡು ಆರೋಪದ ಮೇಲೆ 11 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. 71 ವರ್ಷದ ಹಫೀಜ್ ಸಯೀದ್ ಈ ದಿನಗಳಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಲಷ್ಕರ್-ಎ-ತೊಯ್ಬಾ ನಿಷೇಧದ ನಂತರ, ಹಫೀಜ್ ಸಯೀದ್ ಜಮಾತ್-ಉದ್-ದವಾ ಎಂಬ ಹೊಸ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಿದ್ದ.

ಹಫೀಜ್ ಸಯೀದ್ ಮುಂಬೈ ದಾಳಿಯ ಅಪರಾಧಿ

2008ರ ಮುಂಬೈ ದಾಳಿಯನ್ನು ನಡೆಸಿದ್ದು ಲಷ್ಕರ್-ಎ-ತೊಯ್ಬಾ. ಈ ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ 166 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಭಾರತವು ಹಫೀಜ್ ಸಯೀದ್ ವಿರುದ್ಧ ಕ್ರಮಕೈಗೊಳ್ಳಲು ಹಲವು ಬಾರಿ ಪಾಕಿಸ್ತಾನಕ್ಕೆ ದಾಖಲೆ ಪತ್ರವನ್ನು ಕಳುಹಿಸಿದೆ.  ಹೆಚ್ಚಿನ ಪುರಾವೆಗಳನ್ನು ಇಲ್ಲದ ಕಾರಣ, ಪಾಕಿಸ್ತಾನವು ಈ ವಿಷಯದಲ್ಲಿ ಇದುವರೆಗೆ ತಣ್ಣನೆಯ ನಿಲುವು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ : Plane Accident Video: :ವಿಮಾನ ಭೀಕರ ಅಪಘಾತ, ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಇಬ್ಭಾಗವಾದ ಪ್ಲೇನ್

ಭಾರತದಲ್ಲೂ ಹಫೀಜ್ ವಿರುದ್ಧ ಪ್ರಕರಣ ನಡೆಯುತ್ತಿವೆ

ಕಳೆದ ತಿಂಗಳು, ಭಾರತದ ಎನ್‌ಐಎ ನ್ಯಾಯಾಲಯವು ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್, ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರಾದ ಯಾಸಿನ್ ಮಲಿಕ್, ಶಬ್ಬೀರ್ ಶಾ, ಮಸರತ್ ಆಲಂ ಮತ್ತು ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಆದೇಶಿಸಿತ್ತು. ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಈ ನಾಯಕರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಭಯೋತ್ಪಾದಕ ಘಟನೆಗಳನ್ನು ಮಾಡಿಸುವುದು, ಅವರಿಗೆ ಹಣ ನೀಡುವುದು ಮತ್ತು ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವುದು ಮುಂತಾದ ಆರೋಪಗಳು ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News