ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಪ್ರಧಾನಿಯಾಗಿ ಯಾವುದೇ ನಿರ್ಧಾರ ತಗೆದುಕೊಳ್ಳುವಂತಿಲ್ಲ- ಸುಪ್ರೀಂಕೋರ್ಟ್

ಇತ್ತೀಚಿಗೆ ಶ್ರೀಲಂಕಾದ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ಅವರ ಆಯ್ಕೆ ನಡೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ನ್ಯಾಯಯುತವಾಗಿ ಈ ವಿಚಾರ ಬಗೆ ಹರಿಯುವವರೆಗೂ ಯಾವುದೇ ನಿರ್ಧಾರ ತಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Last Updated : Dec 3, 2018, 05:38 PM IST
ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಪ್ರಧಾನಿಯಾಗಿ ಯಾವುದೇ ನಿರ್ಧಾರ  ತಗೆದುಕೊಳ್ಳುವಂತಿಲ್ಲ- ಸುಪ್ರೀಂಕೋರ್ಟ್ title=

ಕೋಲಂಬೋ: ಇತ್ತೀಚಿಗೆ ಶ್ರೀಲಂಕಾದ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ಅವರ ಆಯ್ಕೆ ನಡೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ನ್ಯಾಯಯುತವಾಗಿ ಈ ವಿಚಾರ ಬಗೆ ಹರಿಯುವವರೆಗೂ ಯಾವುದೇ ನಿರ್ಧಾರ ತಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕಳೆದ ಅಕ್ಟೋಬರ್ 26 ರಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ರಣೀಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತಾಕಿ ರಾಜಪಕ್ಸೆಯವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದರು. ನಂತರ ಈ ನಡೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು ,

ಈಗ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ಸುಪ್ರೀಂಕೋರ್ಟ್ ಪ್ರಧಾನಿಯಾಗಿ ಅವರು ಯಾವುದೇ ಮಹತ್ವದ ನಿರ್ಧಾರವನ್ನು ತಗೆದುಕೊಳ್ಳುವ ಹಾಗಿಲ್ಲ ಎಂದು ತಿಳಿಸಿದೆ.ರಾಜಪಕ್ಸೆ ಅವರು ವಿರುದ್ದ ಸಂಸತ್ತಿನಲ್ಲಿ ಎರಡು ಬಾರಿ ಅವಿಶ್ವಾಸಮತ ಗೊತ್ತುವಳಿ ಜಾರಿಗೆ ತಂದಿದ್ದರು ಸಹಿತಪ್ರಧಾನಿ ಹುದ್ದೆಯಿಂದ ತೊರೆದಿರಲಿಲ್ಲ ಈ ಹಿನ್ನಲೆಯಲ್ಲಿ ಈಗ ಕೋರ್ಟ್ ಮಧ್ಯಪ್ರವೇಶಿಸಿದೆ.

Trending News