ಇಸ್ಲಾಮಾಬಾದ್: ಇಲ್ಲೊಬ್ಬ ಭೂಪ 'ನನ್ನನ್ನು ಪಾಕಿಸ್ತಾನದ ಪ್ರಧಾನಿ ಮಾಡಿ' ಎಂದು ಹಠ ಹಿಡಿದು ಇಸ್ಲಾಮಾಬಾದ್ನಲ್ಲಿ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ.
ARY ನ್ಯೂಸ್ನ ಸುದ್ದಿ ಪ್ರಕಾರ, ಆ ಯುವಕನನ್ನು ಮೊಹಮ್ಮದ್ ಅಬ್ಬಾಸ್ ಎಂದು ಗುರುತಿಸಲಾಗಿದ್ದು, ಆಟ ಇಸ್ಲಾಮಾಬಾದ್ ನ ಬ್ಲೂ ಪ್ರದೇಶದಲ್ಲಿರುವ ಟವರ್ ನಲ್ಲಿ ಪಾಕಿಸ್ತಾನ ಧ್ವಜ ಹಿಡಿದು 'ನನ್ನನ್ನು ಪಾಕ್ ಪ್ರಧಾನಿ ಮಾಡಿ' ಎಂದು ಹಠ ಹಿಡಿದಿದ್ದನು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ.
ಪ್ರಧಾನಿ ಮಾಡುವ ಭರವಸೆ ನೀಡದೆ ಕೆಳಗಿಳಿಯಲ್ಲ ಎಂದು ಹಠ ಹಿಡಿದಿದ್ದ, ನಂತರ ಕನಿಷ್ಠ ಸ್ಥಳೀಯ ಅಧಿಕಾರಿಗಳು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ನೊಂದಿಗೆ ಮಾತನಾಡಲು ವ್ಯವಸ್ಥೆ ಮಾಡಿದ್ದಾರೆ.
ಕೊನೆಗೆ ಆತನನ್ನು ಕೆಳಗಿಳಿಸಲು ಪೊಲೀಸರು ಮಿಮಿಕ್ರಿ ಕಲಾವಿದ ಶಾಫತ್ ಅಲಿ ಅವರಿಂದ ಇಮ್ರಾನ್ ಖಾನ್ ಧ್ವನಿಯಲ್ಲಿ ಮಾತನಾಡಿಸಿದ್ದಾರೆ. ಕುತೂಹಲಕಾರಿಯಾಗಿ ಅಧಿಕಾರಿಗಳ ಈ ಪ್ಲಾನ್ ಕೆಲಸ ಮಾಡಿದೆ. ಪಾಕ್ ಪ್ರಧಾನಿ ಎಂದು ಭಾವಿಸಿ ಮಿಮಿಕ್ರಿ ಕಲಾವಿದನೊಂದಿಗೆ ಮಾತನಾಡಿದ ಆ ಭೂಪ ಐದು ನಿಮಿಷಗಳ ಕಾಲ ಫೋನಿನಲ್ಲಿ ಮಾತನಾಡಿ ಬಳಿಕ ಕೆಳಗಿಳಿದಿದ್ದಾನೆ.
ಪೊಲೀಸರು ಆ ವ್ಯಕ್ತಿಯನ್ನು ಬಂಧಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಆ ವ್ಯಕ್ತಿಯು ಮಾನಸಿಕ ಅಸ್ವಸ್ಥ ಎನ್ನಲಾಗಿದೆ.