19 ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ WTC ದಾಳಿಯ ಮಾಸ್ಟರ್ ಮೈಂಡ್: ಇನ್ನೂ ಮುಗಿಯದ ವಿಚಾರಣೆ!

ಈ ಸಂದರ್ಭದಲ್ಲಿ ಅನೇಕ ಆರೋಪಿಗಳು ಸಹ ಸಿಕ್ಕಿಬಿದ್ದಿದ್ದರು. ಆದರೆ ದಾಳಿ ನಡೆದು 2 ದಶಕಗಳು ಕಳೆದರೂ ಅವರ ವಿರುದ್ಧದ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಇದರಲ್ಲಿ ಖಾಲಿದ್ ಶೇಖ್ ಮೊಹಮ್ಮದ್ ಎಂಬ ದಾಳಿಯ ಮಾಸ್ಟರ್ ಮೈಂಡ್ ವಿಚಾರಣೆ ಇನ್ನೂ ಅಂತ್ಯ ಕಂಡಿಲ್ಲ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Sep 12, 2022, 01:54 PM IST
    • 2001ರ ಸೆಪ್ಟೆಂಬರ್ 7ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆಸಿದ್ದ ಅಲ್ ಖೈದಾ
    • ಈ ದಾಳಿಯಲ್ಲಿ 2 ಸಾವಿರದ 977 ಜನರು ಸಾವನ್ನಪ್ಪಿದ್ದರು
    • ಈ ದಾಳಿಯ ಮಾಸ್ಟರ್ ಮೈಂಡ್ 19 ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ
19 ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ WTC ದಾಳಿಯ ಮಾಸ್ಟರ್ ಮೈಂಡ್: ಇನ್ನೂ ಮುಗಿಯದ ವಿಚಾರಣೆ! title=
World Trade Center

21 ವರ್ಷಗಳ ಹಿಂದೆ ಅಂದರೆ 2001ರ ಸೆಪ್ಟೆಂಬರ್ 7ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್ ಖೈದಾ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 2 ಸಾವಿರದ 977 ಜನರು ಸಾವನ್ನಪ್ಪಿದ್ದರು. ಈ ದಾಳಿಯ ನಂತರ, ಅಪರಾಧಿಗಳನ್ನು ಪತ್ತೆ ಹಚ್ಚಿ ಕೊಲ್ಲುವುದಾಗಿ ಅಮೆರಿಕ ಪ್ರತಿಜ್ಞೆ ಮಾಡಿತು. ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿಲ್ ಲಾಡೆನ್ ಅನ್ನು ಸೆರೆಹಿಡಿಯಲು ಯುಎಸ್ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತು. US ಸೇನೆಯು 2 ದಶಕಗಳ ಕಾಲ ಇಲ್ಲಿಯೇ ಉಳಿದುಕೊಂಡಿತು. ಬಳಿಕ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲುವಲ್ಲಿ ಅಮೆರಿಕ ಯಶಸ್ವಿಯಾಯಿತು. 

ಇದನ್ನೂ ಓದಿ: OMG: ಬೆಕ್ಕನ್ನು ಕೊಲೆಗೈಯಲು ಚಾಕು ತಂದ ಇಲಿರಾಯ! ಹಿಂದೆಂದು ನೋಡಿರ್ಲಿಕ್ಕಿಲ್ಲ ಇಂಥಾ ವಿಡಿಯೋ

ಈ ಸಂದರ್ಭದಲ್ಲಿ ಅನೇಕ ಆರೋಪಿಗಳು ಸಹ ಸಿಕ್ಕಿಬಿದ್ದಿದ್ದರು. ಆದರೆ ದಾಳಿ ನಡೆದು 2 ದಶಕಗಳು ಕಳೆದರೂ ಅವರ ವಿರುದ್ಧದ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಇದರಲ್ಲಿ ಖಾಲಿದ್ ಶೇಖ್ ಮೊಹಮ್ಮದ್ ಎಂಬ ದಾಳಿಯ ಮಾಸ್ಟರ್ ಮೈಂಡ್ ವಿಚಾರಣೆ ಇನ್ನೂ ಅಂತ್ಯ ಕಂಡಿಲ್ಲ ಎಂದು ಹೇಳಲಾಗುತ್ತಿದೆ. ಖಾಲಿದ್ ಜೊತೆಗೆ ಈ ದಾಳಿಗೆ ಸಂಬಂಧಿಸಿದ 4 ಆರೋಪಿಗಳು ಜೈಲಿನಲ್ಲಿದ್ದು, ಅವರ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ.

ಖಲೀದ್ ಶೇಖ್ ಮೊಹಮ್ಮದ್ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ವಿಮಾನದ ಮೂಲಕ ದಾಳಿ ಮಾಡುವ ಯೋಜನೆಯನ್ನು ಹೊಂದಿದ್ದನು. ಆದರೆ ಖಾಲಿದ್ ಶೇಖ್ ನನ್ನು ಮಾರ್ಚ್ 2003 ರಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಿಂದ ಬಂಧಿಸಲಾಯಿತು. ಇದರ ನಂತರ ಕ್ಯೂಬಾದ ಗ್ವಾಂಟನಾಮೊ ಬೇ ಬಂಧನ ಕೇಂದ್ರದಲ್ಲಿ ಇರಿಸಲಾಯಿತು. ಅಂದಿನಿಂದ ಅಲ್ಲಿಯೇ ವಾಸವಾಗಿದ್ದಾನೆ. ಈ 21 ವರ್ಷಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಮಿಲಿಟರಿ ಟ್ರಿಬ್ಯೂನಲ್ ಮುಂದೆ ಆತನ ಹಾಜರಾತಿಯನ್ನು ಲೆಕ್ಕವಿಲ್ಲದಷ್ಟು ಬಾರಿ ಮುಂದೂಡಲಾಗಿದೆ.

ಯುಎಸ್ ಸರ್ಕಾರದ ಈ ವಿಳಂಬದ ಬಗ್ಗೆ ಸಾಕಷ್ಟು ಟೀಕೆಗಳಿವೆ. ದಾಳಿ ನಡೆದು 21 ವರ್ಷ ಕಳೆದರೂ, ಆರೋಪಿ ಸಿಕ್ಕಿ 18 ವರ್ಷ ಕಳೆದರೂ ಈವರೆಗೂ ಶಿಕ್ಷೆಯಾಗಿಲ್ಲ ಎಂದು ಹಲವರು ಹೇಳುತ್ತಾರೆ. ಇದರಿಂದ ದಾಳಿಯಲ್ಲಿ ಮೃತಪಟ್ಟವರಿಗೆ ಅನ್ಯಾಯವಾಗಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷೆಯಾಗದಿರುವವರೆಗೆ ಜನರಿಗೆ ನ್ಯಾಯ ಸಿಗುವುದಿಲ್ಲ.

ಇದನ್ನೂ ಓದಿ: Earthquake: 7.6 ತೀವ್ರತೆಯ ಭೂಕಂಪನಕ್ಕೆ ನಲುಗಿತು ಈ ದೇಶ: ಭಯಾನಕ ವಿಡಿಯೋ ಸೆರೆ

9/11 ದಾಳಿಯ ಮೂವರು ಪ್ರಮುಖ ಆರೋಪಿಗಳಿದ್ದರು. ಮೊದಲನೆಯದು ಒಸಾಮಾ ಬಿನ್ ಲಾಡೆನ್, 2011 ರಲ್ಲಿ ಯುಎಸ್ನಿಂದ ಕೊಲ್ಲಲ್ಪಟ್ಟ. ದಾಳಿಯ ಎರಡನೇ ಆರೋಪಿ ಅಯ್ಮನ್ ಅಲ್-ಜವಾಹಿರಿ, ಬಿನ್ ಲಾಡೆನ್ ಸಾವಿನ ನಂತರ ಅಲ್-ಖೈದಾ ಮುಖ್ಯಸ್ಥನಾಗಿದ್ದನು, ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ, ಮೂರನೇ ಆರೋಪಿ ಖಾಲಿದ್ ಶೇಖ್ ಮೊಹಮ್ಮದ್.  ಇನ್ನೂ ಜೀವಂತವಾಗಿದ್ದು, ಬಂಧನದಲ್ಲಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News