Dragon FDI Proposals ಗಳಿಗೆ ಅನುಮತಿ ನೀಡಲು ಆರಂಭಿಸಿದ ಭಾರತ

China FDI Proposals - ಭಾರತ-ಚೀನಾ ಗಡಿಯಲ್ಲಿ ಕಡಿಮೆಯಾಗುತ್ತಿರುವ ಉದ್ವಿಗ್ನತೆಯ ಹಿನ್ನೆಲೆ ಕೇಂದ್ರ ಸರ್ಕಾರ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಕೇಸ್-ಟು-ಕೇಸ್ ಆಧಾರದ ಮೇಲೆ ಹಸಿರು ನಿಶಾನೆ ನೀಡಲು ಆರಂಭಿಸಿದೆ. ಇದಕ್ಕೂ ಮೊದಲು ಗಡಿವಿವಾದದ ಹಿನ್ನೆಲೆ ಭಾರತ (India) ಸರ್ಕಾರ ಚೀನಾದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದನ್ನು ನಿಲ್ಲಿಸಿತ್ತು.

Written by - Nitin Tabib | Last Updated : Feb 22, 2021, 06:32 PM IST
  • ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಸ್ತಾಪಗಳಿಗೆ ಅನುಮತಿ ನೀಡಲು ಆರಂಭಿಸಿದ ಭಾರತ.
  • ಆದರೆ ಇನ್ನೂ ದೊಡ್ಡ ಪ್ರಸ್ತಾಪಗಳಿಗೆ ಅನುಮೋದನೆ ನೀಡುವುದನ್ನು ನಿಲ್ಲಿಸಲಾಗಿದೆ.
  • ಕೇಸ್ ಟು ಕೇಸ್ ಆಧಾರದ ಮೇಲೆ ಅನುಮೋದನೆ ನೀಡಲಾಗುತ್ತಿದೆ.
Dragon FDI Proposals ಗಳಿಗೆ ಅನುಮತಿ ನೀಡಲು ಆರಂಭಿಸಿದ ಭಾರತ title=
China FDI Proposals (File Photo)

ನವದೆಹಲಿ: China FDI Proposals - ಸುಮಾರು 9 ತಿಂಗಳ ನಂತರ, ಕೇಂದ್ರ ಸರ್ಕಾರವು (Modi Government)ಚೀನಾ ವಿದೇಶಿ ನೇರ ಹೂಡಿಕೆ (FDI) ಪ್ರಸ್ತಾಪಗಳನ್ನು ಕೇಸ್ ಟು ಕೇಸ್ (Case-To-Case)ಆಧಾರದ ಮೇಲೆ ಅನುಮೋದಿಸಲು ಪ್ರಾರಂಭಿಸಿದೆ. ಇದಕ್ಕೂ ಮೊದಲು ಚೀನಾದೊಂದಿಗಿನ ಗಡಿ ವಿವಾದದ ಹಿನ್ನೆಲೆ ಭಾರತ (India) ಸರ್ಕಾರ ಎಫ್‌ಡಿಐ ಪ್ರಸ್ತಾಪಗಳಿಗೆ ಅನುಮೋದನೆ ನೀಡುವುದನ್ನು ಸ್ಥಗಿತಗೊಳಿಸಿತ್ತು. ಇದೀಗ, ಚೀನಾ (China) ಸೈನ್ಯವು ಗಾಲ್ವಾನ್ ಕಣಿವೆಯಲ್ಲಿ ಹಿಮ್ಮೆಟ್ಟುವ ಮೂಲಕ ಮತ್ತು ಗಡಿ ಉದ್ವೇಗವನ್ನು (Border Tension) ಕಡಿಮೆಗೊಳಿಸುವುದರೊಂದಿಗೆ, ಚೀನಾಕ್ಕೆ ಮತ್ತೆ ಎಫ್‌ಡಿಐ ಮಾಡಲು ಅವಕಾಶ ನೀಡಲಾಗಿದೆ. 

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಪ್ರಕಾರ, ಚೀನಾದ ಎಫ್‌ಡಿಐ ಪ್ರಸ್ತಾಪಗಳು ಕಳೆದ ಕೆಲವು ವಾರಗಳಿಂದ ಅನುಮೋದನೆ ಪಡೆಯಲು ಆರಂಭಿಸಿವೆ. ಆದರೆ, ದೊಡ್ಡ FDI ಪ್ರಸ್ತಾಪಗಳನ್ನು ಸರ್ಕಾರ ನಿಲ್ಲಿಸಿದೆ. ಸೀಮಿತ ಮತ್ತು ಸಣ್ಣ ವಿಷಯಗಳಿಗೆ ಮಾತ್ರ ಅನುಮೋದನೆ ನೀಡಲಾಗುತ್ತಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅಂದಾಜು ಮಾಡಿದ ನಂತರ ಚೀನಾದ ಎಫ್‌ಡಿಐನ ದೊಡ್ಡ ಪ್ರಸ್ತಾಪಗಳಿಗೆ ಅನುಮೋದನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅನುಮೋದನೆ ನೀಡಲು ಕೋ-ಆರ್ಡಿನೆನ್ಸ್ ಕಮೀಟಿ ರಚನೆ
ಮಾಧ್ಯಮ ವರದಿಗಳ ಪ್ರಕಾರ, ಎಫ್‌ಡಿಐ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಸಮನ್ವಯ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಗೃಹ, ವಿದೇಶಿ, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ನೀತಿ ಆಯೋಗದ ಅಧಿಕಾರಿಗಳನ್ನು ಒಳಗೊಂಡಿದೆ. ಆದರೆ, ಈ ಸಮಿತಿಯು ಎಲ್ಲಾ ವಿಷಯಗಳ ಬಗ್ಗೆ ವ್ಯವಹರಿಸುವ ವಿದೇಶಿ ಹೂಡಿಕೆ ಉತ್ತೇಜನ ನೀಡುವ ಮಂಡಳಿಯಂತೆ ಅಲ್ಲ. ನೆರೆಯ ರಾಷ್ಟ್ರಗಳ ಎಲ್ಲಾ ಎಫ್‌ಡಿಐ ಪ್ರಸ್ತಾಪಗಳನ್ನು ಸಂಬಂಧಪಟ್ಟ ಸಚಿವಾಲಯವು ಪರಿಶೀಲಿಸುತ್ತದೆ ಮತ್ತು ಅದನ್ನು ನಿರ್ಧರಿಸುತ್ತದೆ. ಟೆಲಿಕಾಂ ಅಥವಾ ವಿಮೆಯಂತಹ ಕ್ಷೇತ್ರಗಳಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳಲ್ಲಿ, ಪ್ರಸ್ತಾಪಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಮೊದಲು ಅವುಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ- LAC ಬಳಿ ಹಿಂದೆ ಸರಿದ China, 2 ದಿನಗಳಲ್ಲಿ ಹಿಮ್ಮೆಟ್ಟಿದ 200ಕ್ಕೂ ಹೆಚ್ಚು ಟ್ಯಾಂಕ್‌ಗಳು

ಗಡಿ ವಿವಾದದ ಬಳಿಕ ನಿಯಮ ಬದಲಾಯಿಸಿದ್ದ ಕೇಂದ್ರ ಸರ್ಕಾರ, ಚೀನಾದ 12000 ಕೋಟಿ ರೂ. ಗಳ ಪ್ರಸ್ತಾಪಗಳನ್ನು ತಡೆಹಿಡಿಯಲಾಗಿದೆ
ಈ ಮೊದಲು, ಸ್ವಯಂಚಾಲಿತವಾಗಿ ಅನುಮೋದನೆಯ ಸಂದರ್ಭದಲ್ಲಿ, ಕಂಪನಿಗಳು ಸರ್ಕಾರದಿಂದ ಅನುಮೋದನೆ ಪಡೆಯುವ ಅವಶ್ಯಕತೆ ಇರಲಿಲ್ಲ. ಆದರೆ ಗಡಿ ವಿವಾದದ ನಂತರ ಸರ್ಕಾರ ಎಫ್‌ಡಿಐ ನಿಯಮಗಳನ್ನು ಬದಲಾಯಿಸಿದೆ. ನೆರೆಯ ದೇಶದ ಪ್ರಸ್ತಾಪಗಳಿಗೆ ಸರ್ಕಾರದ ಅನುಮೋದನೆಯನ್ನು ಕಡ್ಡಾಯಗೊಳಿಸಲಾಯಿತು. ಸ್ವಯಂಚಾಲಿತ ಕ್ಲಿಯರೆನ್ಸ್ ಅನ್ನು ಅನುಮತಿಸುವ ಆ ಕ್ಷೇತ್ರಗಳಲ್ಲಿಯೂ ಇದು ಅಗತ್ಯವಾಗಿತ್ತು. ಇದರಿಂದ ಚೀನಾದ ಹೂಡಿಕೆದಾರರು ತೀವ್ರವಾಗಿ ಪ್ರಭಾವಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ, ತಂತ್ರಜ್ಞಾನ ಮತ್ತು ಡಿಜಿಟಲ್ ಸ್ಪೇಸ್ ನಲ್ಲಿ ಚೀನಾದಿಂದ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಬದಲಾದ ನಿಯಮಗಳಿಂದಾಗಿ, ಪಾಲನ್ನು ವರ್ಗಾಯಿಸಲು ಸರ್ಕಾರದ ಅನುಮೋದನೆಯೂ ಅಗತ್ಯವಾಗಿರುತ್ತದೆ. ಈ ಕಾರಣದಿಂದಾಗಿ ದೇಶದಲ್ಲಿ ಚೀನಾದ ಒಟ್ಟು 12000 ಕೋಟಿ ರೂಪಾಯಿಗಳ ಎಫ್‌ಡಿಐ ಪ್ರಸ್ತಾಪಗಳು ಬಾಕಿ ಉಳಿದಿವೆ.

ಇದನ್ನೂ ಓದಿ- India-China Standoff : ಇನ್ಮುಂದೆ ಚೀನಾದ ಯಾವುದೇ ಕುತಂತ್ರ ಕೆಲಸ ಮಾಡಲ್ಲ!

ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸರ್ಕಾರ ಹೂಡಿಕೆಯ ಮೇಲೆ ಪ್ರಭಾವ ಬೀರಲು ಬಯಸುತ್ತಿಲ್ಲ
ರಾಷ್ಟ್ರೀಯ ಭದ್ರತೆಯ (India) ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಚೀನಾದ ಎಫ್‌ಡಿಐ ಪ್ರಸ್ತಾಪಗಳ ವಿಷಯದಲ್ಲಿ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಚೀನಾದ ಎಫ್‌ಡಿಐ ಪ್ರಸ್ತಾಪಗಳ ಸೀಮಿತ ಅನುಮೋದನೆಯಿಂದಲೂ ಇದು ಪ್ರತಿಫಲಿಸುತ್ತದೆ. ಕರೋನಾ ಸಾಂಕ್ರಾಮಿಕ ಕಾಲದಲ್ಲಿ ಹೂಡಿಕೆಯ ಮೇಲೆ ಪರಿಣಾಮ ಬೀರದಿರಲು ಸರ್ಕಾರ ಬಯಸುತ್ತಿದೆ.

ಇದನ್ನೂ ಓದಿ-China ವಿರುದ್ಧ ಮತ್ತೊಂದು ಸ್ಟ್ರೈಕ್ಗೆ ಮುಂದಾದ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News