Ian Hurricane Update: ಅಮೆರಿಕಾದಲ್ಲಿ 'ಇಯಾನ್ ಚಂಡಮಾರುತದ' ರೌದ್ರ ನರ್ತನ, ಇದುವೆರೆಗೆ 70ಕ್ಕೂ ಅಧಿಕ ಸಾವು

Ian Hurricane Update: ಅಮೆರಿಕಾದಲ್ಲಿ ಇಯಾನ್ ಚಂಡಮಾರುತದ ರೌದ್ರ ನರ್ತನ ಮುಂದುವರೆದಿದೆ. ಫ್ಲೋರಿಡಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಂಟೆಗೆ 200 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೀಸುತ್ತಿರುವ ಗಾಳಿ ಭಾರಿ ಅನಾಹುತಕ್ಕೆ ಕಾರಣವಾಗಿದೆ. ಇದರಿಂದ ಇದುವರೆಗೂ 70ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Written by - Nitin Tabib | Last Updated : Oct 2, 2022, 08:41 PM IST
  • ಅಧಿಕೃತ ಅಂಕಿ-ಅಂಶಗಳು ಮತ್ತು ಅದರ ವರದಿಯ ಆಧಾರದ ಮೇಲೆ ಭಾನುವಾರ, NBC ನ್ಯೂಸ್ ಈ ಮಾಹಿತಿಯನ್ನು ನೀಡಿದೆ.
  • ಶನಿವಾರ ಚಂಡಮಾರುತದಿಂದ ಸತ್ತವರ ಸಂಖ್ಯೆ 77 ಕ್ಕೆ ಏರಿದೆ ಮತ್ತು ಸಂಖ್ಯೆ ಹೆಚ್ಚಾಗಬಹುದು ಎಂದು NBC ಹೇಳಿದೆ.
  • ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದಿಂದ ಕನಿಷ್ಠ 45 ಶಂಕಿತ ಸಾವುಗಳು ವರದಿಯಾಗಿವೆ ಎಂದು ಯುಎಸ್ ಮಾಧ್ಯಮ ಶುಕ್ರವಾರ ತಿಳಿಸಿದೆ.
Ian Hurricane Update: ಅಮೆರಿಕಾದಲ್ಲಿ 'ಇಯಾನ್ ಚಂಡಮಾರುತದ' ರೌದ್ರ ನರ್ತನ, ಇದುವೆರೆಗೆ 70ಕ್ಕೂ ಅಧಿಕ ಸಾವು title=
Ian Hurricane Update

Ian Hurricane Update: ಫ್ಲೋರಿಡಾ ಮತ್ತು ಉತ್ತರ ಕೆರೊಲಿನಾದಲ್ಲಿ, ಇಯಾನ್ ಚಂಡಮಾರುತದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 70 ಮೀರಿದೆ. ಇವುಗಳಲ್ಲಿ ಫ್ಲೋರಿಡಾ ಒಂದರಲ್ಲೇ 45 ಶಂಕಿತ ಸಾವುಗಳು ವರದಿಯಾಗಿವೆ. ಬುಧವಾರ ಮತ್ತು ಗುರುವಾರ ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತ ಸೃಷ್ಟಿಸಿದ ಭಾರಿ ವಿನಾಶದ  ನಂತರ, ಶುಕ್ರವಾರ ಯುಎಸ್ ರಾಜ್ಯ ದಕ್ಷಿಣ ಕೆರೊಲಿನಾದಲ್ಲಿ ಭೂಕುಸಿತ ಸಂಭವಿಸಿದೆ. ಶನಿವಾರ ದಕ್ಷಿಣ-ಮಧ್ಯ ವರ್ಜೀನಿಯಾಕ್ಕೆ ಚಂಡಮಾರುತ ಸ್ಥಳಾಂತರಗೊಂಡಿದೆ.

ಅಧಿಕೃತ ಅಂಕಿ-ಅಂಶಗಳು ಮತ್ತು ಅದರ ವರದಿಯ ಆಧಾರದ ಮೇಲೆ ಭಾನುವಾರ, NBC ನ್ಯೂಸ್ ಈ ಮಾಹಿತಿಯನ್ನು ನೀಡಿದೆ. ಶನಿವಾರ ಚಂಡಮಾರುತದಿಂದ ಸತ್ತವರ ಸಂಖ್ಯೆ 77 ಕ್ಕೆ ಏರಿದೆ ಮತ್ತು ಸಂಖ್ಯೆ ಹೆಚ್ಚಾಗಬಹುದು ಎಂದು NBC ಹೇಳಿದೆ. ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದಿಂದ ಕನಿಷ್ಠ 45 ಶಂಕಿತ ಸಾವುಗಳು ವರದಿಯಾಗಿವೆ ಎಂದು ಯುಎಸ್ ಮಾಧ್ಯಮ ಶುಕ್ರವಾರ ತಿಳಿಸಿದೆ.

ಇದನ್ನೂ ಓದಿ-

ಇನ್ನೂ ಹಲವರು ಕಾಣೆಯಾಗಿದ್ದಾರೆ
ಫ್ಲೋರಿಡಾದ ತುರ್ತು ನಿರ್ವಹಣಾ ನಿರ್ದೇಶಕ ಕೆವಿನ್ ಗುತ್ರೀ ಅವರು ನೀಡಿರುವ ಮಾಹಿತಿಯ ಪ್ರಕಾರ, ಇಯಾನ್ ಚಂಡಮಾರುತದಿಂದ ರಾಜ್ಯದಲ್ಲಿ ಒಂದು ದೃಢೀಕೃತ ಸಾವು ಸಂಭವಿಸಿದ್ದು, 20 ದೃಢೀಕರಿಸದ ಸಾವುಗಳು ತನಿಖೆಯಲ್ಲಿವೆ ಎನ್ನಲಾಗಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಪ್ರಕಾರ, ಇಯಾನ್ ಬುಧವಾರ ಫ್ಲೋರಿಡಾಕ್ಕೆ ಅಪ್ಪಳಿಸಿದ್ದಾಗಿನಿಂದ ಕನಿಷ್ಠ 1,100 ಜನರನ್ನು ರಕ್ಷಿಸಲಾಗಿದೆ. ಚಂಡಮಾರುತದಿಂದಾಗಿ ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-

ಕತ್ತಲಲ್ಲಿ ಕಾಲ ಕಳೆದ 19 ಲಕ್ಷ ಜನ
ಚಂಡಮಾರುತದ ಹಿನ್ನೆಲೆ ರಾಜ್ಯದ 19 ಲಕ್ಷ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಅಮೆರಿಕಾದ ಮಾಧ್ಯಮ ವರದಿಗಳ ಪ್ರಕಾರ ಶುಕ್ರವಾರ ದಕ್ಷಿಣ ಕೆರೋಲಿನಾದಲ್ಲಿ ಎರಡು ಲಕ್ಷ ಮತ್ತು ಉತ್ತರ ಕೆರೋಲಿನಾದಲ್ಲಿ 1.38 ಲಕ್ಷಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಚಂಡಮಾರುತದ ಹಿನ್ನೆಲೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ದಕ್ಷಿಣ ಕೆರೋಲಿನಾದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ ಮತ್ತು ಇಯಾನ್ ಚಂಡಮಾರುತ ಫ್ಲೋರಿಡಾ ಇತಿಹಾಸದಲ್ಲಿಯೇ ಅತ್ಯಂತ ಅಪಾಯಕಾರಿ ಚಂಡಮಾರುತ ಸಾಬೀತಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News