ನವದೆಹಲಿ: ಭಾರತೀಯ ಪ್ರದೇಶಗಳನ್ನು ಒಳಗೊಂಡ ದೇಶದ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ನವೀಕರಿಸಲು ನೇಪಾಳದ ರಾಷ್ಟ್ರೀಯ ಅಸೆಂಬ್ಲಿ ಗುರುವಾರ ಸರ್ವಾನುಮತದಿಂದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು.
ಭಾರತದ ಪ್ರದೇಶಗಳನ್ನು ಒಳಗೊಂಡ ನೇಪಾಳದ ಹೊಸ ರಾಜಕೀಯ ನಕ್ಷೆಗೆ ಸರ್ವಾನುಮತದಿಂದ ಅಂಗೀಕಾರದ ನಂತರ ಭಾರತವು ಈ ಕೃತಕ ಹಿಗ್ಗುವಿಕೆಯನ್ನು ಅಸಮರ್ಥನೀಯವಾಗಿದೆ ಎಂದು ಹೇಳಿದೆ.
ನೇಪಾಳಿ ಸಂಸತ್ತಿನ ಮೇಲ್ಮನೆ, ದೇಶದ ಹೊಸ ರಾಜಕೀಯ ನಕ್ಷೆಯನ್ನು ತನ್ನ ರಾಷ್ಟ್ರೀಯ ಲಾಂಛನದಲ್ಲಿ ಸೇರಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಎಲ್ಲಾ 57 ಸದಸ್ಯರು ಅದರ ಪರವಾಗಿ ಮತ ಚಲಾಯಿಸುವುದರೊಂದಿಗೆ ಮಸೂದೆಯನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ: ಭಾರತದ ತೀವ್ರ ವಿರೋಧದ ನಡುವೆಯೂ ನೂತನ ನಕ್ಷೆಗೆ ಅಸ್ತು ಎಂದ ನೇಪಾಳ ಸಂಸತ್ತು
ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಬಿಗಡಾಯಿಸಿದವು.
ರಸ್ತೆ ಉದ್ಘಾಟನೆಯನ್ನು ನೇಪಾಳ ಪ್ರತಿಭಟಿಸಿ ಅದು ತನ್ನ ಭೂಪ್ರದೇಶವನ್ನು ಹಾದುಹೋಯಿತು ಎಂದು ಹೇಳಿಕೊಂಡಿದೆ. ಇದಾದ ಕೆಲವು ದಿನಗಳ ನಂತರ ನೇಪಾಳವು ಹೊಸ ನಕ್ಷೆಯೊಂದಿಗೆ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾವನ್ನು ತನ್ನ ಪ್ರಾಂತ್ಯಗಳಾಗಿ ತೋರಿಸುತ್ತದೆ.