‘Omicron’ನಿಂದ ಏಪ್ರಿಲ್‌ ಅಂತ್ಯಕ್ಕೆ 75 ಸಾವಿರ ಜನರ ಸಾವು ಸಾಧ್ಯತೆ: ಅಧ್ಯಯನದ ಎಚ್ಚರಿಕೆ

ವ್ಯಕ್ತಿಯ ದೇಹದಲ್ಲಿನ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ‘ಒಮಿಕ್ರಾನ್’ ಹೊಂದಿದೆ. ಈ ತಳಿಯು ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದಲೂ ತಪ್ಪಿಸಿಕೊಳ್ಳುವುದೇ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

Written by - Puttaraj K Alur | Last Updated : Dec 14, 2021, 12:43 AM IST
  • ‘ಓಮಿಕ್ರಾನ್’ನಿಂದ ಏಪ್ರಿಲ್‌ ಅಂತ್ಯಕ್ಕೆ 75 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುವ ಸಾಧ್ಯತೆ
  • ‘ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌’ನ ಸಂಶೋಧಕರಿಂದ ಅಧ್ಯಯನ
  • ಸೋಮವಾರವಷ್ಟೇ ‘ಒಮಿಕ್ರಾನ್’​ ವೈರಸ್​ಗೆ ಇಂಗ್ಲೆಂಡ್​ನಲ್ಲಿ ಮೊದಲ ಬಲಿ, ಹೈ ಅಲರ್ಟ್ ಘೋಷಣೆ
‘Omicron’ನಿಂದ ಏಪ್ರಿಲ್‌ ಅಂತ್ಯಕ್ಕೆ 75 ಸಾವಿರ ಜನರ ಸಾವು ಸಾಧ್ಯತೆ: ಅಧ್ಯಯನದ ಎಚ್ಚರಿಕೆ title=
‘ಒಮಿಕ್ರಾನ್’ಗೆ ಇಂಗ್ಲೆಂಡ್ನಲ್ಲಿ ಮೊದಲ ಬಲಿ

ನವದೆಹಲಿ: ಕೋವಿಡ್-19 ವೈರಸ್ ನ ಹೊಸ ರೂಪಾಂತರ ‘ಓಮಿಕ್ರಾನ್’(Omicron Variant)ನಿಂದ ಏಪ್ರಿಲ್‌ ಅಂತ್ಯಕ್ಕೆ ಸುಮಾರು 75 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಇಡೀ ಪ್ರಪಂಚದಲ್ಲಿಯೇ Omicron ರೂಪಾಂತರಿ ವೈರಸ್ ಇಂಗ್ಲೆಂಡಿನಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಶನಿವಾರವಷ್ಟೇ 600ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಬಹುದೊಡ್ಡ ಆಪತ್ತು ಎದುರಾಗಲಿದೆ ಎಂದು ಎಚ್ಚರಿಸಲಾಗಿದೆ.

ಸೋಮವಾರವಷ್ಟೇ ‘ಒಮಿಕ್ರಾನ್’​ ವೈರಸ್​ಗೆ ಇಂಗ್ಲೆಂಡ್​ನಲ್ಲಿ ಮೊದಲ ಬಲಿಯಾಗಿದ್ದು, ಕೊವಿಡ್ ರೂಪಾಂತರಿಯಿಂದ ವಿಶ್ವದಾದ್ಯಂತ ಹೈ ಅಲರ್ಟ್ ಕ್ರಮ ಕೈಗೊಳ್ಳಲಾಗಿದೆ. ‘ಇಂಗ್ಲೆಂಡ್​ನಲ್ಲಿ ಕೊವಿಡ್ ಲಸಿಕಾ ಅಭಿಯಾನ (Covid Vaccine Campaign)ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ‘ಒಮಿಕ್ರಾನ್’​ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ’ ಅಂತಾ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ತಿಳಿಸಿದ್ದರು. ಕೊರೊನಾ ವೈರಸ್‌ನ ‘ಓಮಿಕ್ರಾನ್‌’ ತಳಿ ಸೋಂಕು ಪ್ರಸರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬ್ರಿಟನ್‌ನಲ್ಲಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ 75 ಸಾವಿರ ಜನರು ಸಾವಿಗೀಡಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನವೊಂದು ಹೇಳಿದೆ.

ಇದನ್ನೂ ಓದಿ: New Trouble: ವಿಶ್ವಕ್ಕೆ ಎಂಟ್ರಿ ಕೊಟ್ಟ ಮತ್ತೊಂದು ಅಪಾಯ! ಎರಡು ರೂಪಾಂತರಿಗಳಲ್ಲಿ ವಿಭಜನೆಯಾದ Omicron Variant

‘ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌’ನ(London School of Hygiene and Tropical Medicine) ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವರ್ಷ ಜನವರಿಯಲ್ಲಿ ವರದಿಯಾಗಿದ್ದಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡುಬರಬಹುದು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಅಧಿಕ(ಶೇ.60ರಷ್ಟು)ವಾಗಿರಲಿದೆ ಅಂತಾ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯ ದೇಹದಲ್ಲಿನ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ‘ಒಮಿಕ್ರಾನ್’ ಹೊಂದಿದೆ. ಈ ತಳಿಯು ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದಲೂ ತಪ್ಪಿಸಿಕೊಳ್ಳುವುದೇ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಅಂತಾ ಸಂಶೋಧಕರು ತಿಳಿಸಿದ್ದಾರೆ.

‘ಈ ಫಲಿತಾಂಶಗಳು ಇಂಗ್ಲೆಂಡ್‌(England)ನಲ್ಲಿ Omicron B.1.1.529 ರೂಪಾಂತರದ ಪರಿಚಯವು SARS-CoV2 ಪ್ರಸರಣದಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಇದು ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳ ಅನುಪಸ್ಥಿತಿಯಲ್ಲಿ ದಾಖಲಾದ ಪ್ರಕರಣಗಳಿಗಿಂತ ಗಣನೀಯವಾಗಿ ಹೆಚ್ಚಿನ ಪ್ರಕರಣದ ಪ್ರಮಾಣವನ್ನು ಹೊಂದಿದೆ. ಇದು ‘ಒಮಿಕ್ರಾನ್‌’ನ ಸ್ಪಷ್ಟವಾದ ಹೆಚ್ಚಿನ ಪ್ರಸರಣ ಮತ್ತು ಅಸ್ತಿತ್ವದಲ್ಲಿರುವ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳನ್ನು SARS-CoV2ಗೆ ಮೊದಲಿನ ಸೋಂಕಿನಿಂದ ಅಥವಾ ವ್ಯಾಕ್ಸಿನೇಷನ್‌ನಿಂದ ಸೋಂಕು ತಗುಲಿಸುವ ಸಾಮರ್ಥ್ಯದಿಂದಾಗಿ’ ಎಂದು ಅಧ್ಯಯನವು ಹೇಳುತ್ತದೆ.

ಇದನ್ನೂ ಓದಿ: ಯುಕೆಯಲ್ಲಿ 633 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲು

ಈ ರೂಪಾಂತರವು ಯುರೋಪ್‌ನಲ್ಲಿ ತ್ವರಿತವಾಗಿ ಹರಡಿದೆ. ವಿಶೇಷವಾಗಿ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್‌ನಲ್ಲಿ ಇದು ಹೆಚ್ಚು ತೀವ್ರ ಕಾಯಿಲೆಗಳನ್ನು ಉಂಟುಮಾಡುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ. ವಾಸ್ತವವಾಗಿ ಡೆಲ್ಟಾ ರೂಪಾಂತರ(Delta Virus)ಕ್ಕೆ ಹೋಲಿಸಿದರೆ ಇದು ಗಮನಾರ್ಹ ಸೌಮ್ಯ ರೋಗಲಕ್ಷಣ ಹೊಂದಿದೆ ಎಂದು ಇಲ್ಲಿಯವರೆಗಿನ ಎಲ್ಲಾ ಪುರಾವೆಗಳು ಸೂಚಿಸುತ್ತಿವೆ. ಆದರೆ ಪ್ರಕರಣಗಳು ವೇಗವಾಗಿ ಹೆಚ್ಚಾದಂತೆ ಮುಖ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆ ತಪ್ಪಿಸುವ ಅದರ ವರ್ಧಿತ ಸಾಮರ್ಥ್ಯದಿಂದ ಇಂಗ್ಲೆಂಡಿನಲ್ಲಿ ವೈರಸ್ ಭೀತಿ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News