ಜಮ್ಮು ಕಾಶ್ಮೀರದ ಕಲಂ 370 ರದ್ದು : ಇಬ್ಬರು ಭಾರತೀಯ ಖೈದಿಗಳ ವಾಪಸಾತಿಗೆ ಪಾಕ್ ತಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ 370 ಅನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರದ್ದುಗೊಳಿಸಿದ ನಂತರ ಇದಕ್ಕೆ ಪ್ರತಿಯಾಗಿ ಪಾಕ್ ಈಗ ಇಬ್ಬರು ಭಾರತೀಯ ಕೈದಿಗಳನ್ನು ವಾಪಸ್ ಕಳುಹಿಸುವುದಕ್ಕೆ ಪಾಕಿಸ್ತಾನ ತಡೆ ನೀಡಿದೆ. 

Last Updated : Aug 7, 2019, 07:13 PM IST
ಜಮ್ಮು ಕಾಶ್ಮೀರದ ಕಲಂ 370 ರದ್ದು : ಇಬ್ಬರು ಭಾರತೀಯ ಖೈದಿಗಳ ವಾಪಸಾತಿಗೆ ಪಾಕ್ ತಡೆ   title=
file photo

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ 370 ಅನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರದ್ದುಗೊಳಿಸಿದ ನಂತರ ಇದಕ್ಕೆ ಪ್ರತಿಯಾಗಿ ಪಾಕ್ ಈಗ ಇಬ್ಬರು ಭಾರತೀಯ ಕೈದಿಗಳನ್ನು ವಾಪಸ್ ಕಳುಹಿಸುವುದಕ್ಕೆ ಪಾಕಿಸ್ತಾನ ತಡೆ ನೀಡಿದೆ. 

ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಭಾರೀ ಕೋಲಾಹಲದ ನಡುವೆ ರಾಜ್ಯಸಭೆಯಲ್ಲಿ ಕಲಂ 370 ನ್ನು ರದ್ದುಗೊಳಿಸುವ ಪ್ರಸ್ತಾವವನ್ನು ಮಂಡಿಸಲಾಗಿತ್ತು, ನಂತರ ಲೋಕಸಭೆಯಲ್ಲಿಯೂ ಸಹ ಅದು ಸುಲಭವಾಗಿ ಅಂಗೀಕಾರವಾಗಿತ್ತು. ಜಮ್ಮು ಕಾಶ್ಮೀರದಲ್ಲಿ  370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ ನಂತರ ಸೋಮವಾರ ನಿಗದಿಯಾಗಿದ್ದ ಇಬ್ಬರು ಭಾರತೀಯ ಕೈದಿಗಳನ್ನು ವಾಪಸ್ ಕಳುಹಿಸುವುದನ್ನು ಕೊನೆಯ ಕ್ಷಣದಲ್ಲಿ ತಡೆ ಹಿಡಿಯಲಾಗಿದೆ ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

ಇಬ್ಬರು ಕೈದಿಗಳ ವಶಕ್ಕೆ ತೆಗೆದುಕೊಳ್ಳಲು ಭಾರತೀಯ ಅಧಿಕಾರಿಗಳು ಹೋದಾಗ ಪಾಕಿಸ್ತಾನ ಅಧಿಕಾರಿಗಳು ನಿರಾಕರಿಸಿದರು ಎನ್ನಲಾಗಿದೆ. ಆದರೆ ಆ ಇಬ್ಬರು ಭಾರತೀಯ ಕೈದಿಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಈ ವಿಷಯದ ಬಗ್ಗೆ ಟಿಪ್ಪಣಿ ಮೌಖಿಕ ಪತ್ರವನ್ನು ಕಳುಹಿಸಿ ಇಬ್ಬರು ಭಾರತೀಯ ಕೈದಿಗಳನ್ನು ವಾಪಾಸು  ಕಳುಹಿಸುವುದನ್ನು ಏಕೆ ನಿಲ್ಲಿಸಲಾಗಿದೆ ಎಂದು ವಿವರಣೆ ನೀಡಲು ಈಗ ಪಾಕಿಸ್ತಾನವನ್ನು ಕೇಳಿದೆ. 

ಕಲಂ 370 ಅನ್ನು ರದ್ದುಗೊಳಿಸುವ ಸರ್ಕಾರದ ಕ್ರಮವನ್ನು ಹಲವಾರು ರಾಷ್ಟ್ರಗಳು ಭಾರತದ ಆಂತರಿಕ ವಿಷಯವೆಂದು ಕರೆದರೆ, ಚೀನಾ ಮತ್ತು ಪಾಕಿಸ್ತಾನಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಚೀನಾ ಜಮ್ಮು ಕಾಶ್ಮೀರದ ಕುರಿತಾದ ಈ ಭಾರತದ ನಿರ್ಧಾರವನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ ಮತ್ತು ಗಡಿ ಸಮಸ್ಯೆಗಳ ಬಗ್ಗೆ ನವದೆಹಲಿ ಜಾಗರೂಕರಾಗಿರಬೇಕು ಎಂದು ತಿಳಿಸಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಭಾರತ ಇದು ದೇಶಕ್ಕೆ ಸಂಬಂಧಿಸಿದ ಆಂತರಿಕ ವಿಷಯ ಎಂದು ಹೇಳಿದೆ.  

 

Trending News