ಪಾಲಕ್ ತಿಂದು ಆಸ್ಪತ್ರೆ ಸೇರಿದ ಸಾವಿರಾರು ಮಂದಿ .!

Toxic Spinach Australia:ವಿಷಕಾರಿ ಪಾಲಕ್ ತಿಂದಿರುವುದೇ ಜನ ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎನ್ನಲಾಗಿದೆ.  ಪಾಲಕ್ ಸೊಪ್ಪು ತಿಂದು  ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Written by - Ranjitha R K | Last Updated : Dec 16, 2022, 03:35 PM IST
  • ಪಾಲಕ್ ಸೊಪ್ಪು ತಿಂದ ಕಾರಣ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
  • ವಿಷಕಾರಿ ಪಾಲಕ್ ತಿಂದಿರುವುದೇ ಜನರ ಅನಾರೋಗ್ಯಕ್ಕೆ ಕಾರಣ
  • ಪಾಲಕ್ ವಿಷಕಾರಿಯಾಗಲು ಏನು ಕಾರಣ ?
ಪಾಲಕ್ ತಿಂದು ಆಸ್ಪತ್ರೆ ಸೇರಿದ ಸಾವಿರಾರು ಮಂದಿ .!  title=
Toxic Spinach Australia

Toxic Spinach Australia : ಆಸ್ಟ್ರೇಲಿಯಾದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಇಲ್ಲಿ ಪಾಲಕ್ ಸೊಪ್ಪು ತಿಂದ ಕಾರಣ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ವಿಷಕಾರಿ ಪಾಲಕ್ ತಿಂದಿರುವುದೇ ಜನ ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎನ್ನಲಾಗಿದೆ.  ಪಾಲಕ್ ಸೊಪ್ಪು ತಿಂದು  ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಚಿಕಿತ್ಸೆ ನಡೆಯುತ್ತಿದೆ. ಮಾಹಿತಿಯ ಪ್ರಕಾರ, ವಿಷಕಾರಿ ಪಾಲಕ್ ಸೇವಿಸಿದ ಜನರು ಹೆಲುಸಿನೆಶನ್ ಮತ್ತು  ಡೆಲಿರಿಯಂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಪಾಲಕ್ ತಿಂದು ಅಸ್ವಸ್ಥರಾದ ಜನ : 
ಹೆಲುಸಿನೆಶನ್ ಸಮಸ್ಯೆಯಲ್ಲಿ ಜನರು ಭ್ರಮೆಗೊಳಗಾಗುತ್ತಾರೆ. ಡೆಲಿರಿಯಮ್ ಕಾಯಿಲೆಯಲ್ಲಿ, ಜನರ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಪಾಲಕ್ ಸೊಪ್ಪು ಸೇವಿಸಿದ ಜನರ ಹೃದಯ ಬಡಿತದಲ್ಲಿ ಏರುಪೇರು, ಮಂದ ದೃಷ್ಟಿ ಮುಂತಾದ ಲಕ್ಷಣಗಳನ್ನೂ ಎದುರಿಸುತ್ತಿದ್ದಾರೆ.  ರಿವೇರಿಯಾ ಫಾರ್ಮ್ಸ್ ಬ್ರಾಂಡ್‌ನ ಪಾಲಕ್ ಟಿನ್ ಡು ಇಷ್ಟು ಜನ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : 300 ಅಡಿ ಎತ್ತರದಿಂದ ಹಾರಿಬಿದ್ದ ಕಾರು.. ಗಂಡ ಹೆಂಡತಿ ಪ್ರಾಣ ಉಳಿಸಿದ iPhone 14

ಪಾಲಕ್ ವಿಷಕಾರಿಯಾಗಲು ಏನು ಕಾರಣ ? :
 ಈ ಮಧ್ಯೆ, ಹೊಲದಲ್ಲಿ ಬೆಳೆದ ಕಳೆಯ ಕಾರಣವೇ ಪಾಲಕ್ ಸೊಪ್ಪು ವಿಷಕಾರಿಯಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಬ್ರಾಂಡ್ ನ ಬೇರೆ ಉತ್ಪನ್ನಗಳ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ಆರೋಗ್ಯ ಇಲಾಖೆ ಮನವಿ : 
ರಿವೇರಿಯಾ ಫಾರ್ಮ್ಸ್ ಬ್ರ್ಯಾಂಡ್ ನ ಪಾಲಕ್ ತಿಂದು ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಡಿಸೆಂಬರ್ 16 ರ ಎಕ್ಸ್ಪೈರುಇ ಡೇಟ್ ಹೊಂದಿರುವ ಯಾವುದೇ ಬ್ರಾಂಡ್ ನ ಪ್ಯಾಕೇಜ್ ಮಾಡಿದ ಪಾಲಕ ಅನ್ನು ಸೇವಿಸದಂತೆ ನ್ಯೂ ಸೌತ್ ವೇಲ್ಸ್ ಹೆಲ್ತ್ ಹೇಳಿದೆ. ಯಾವುದೇ ಪಾಲಕ್ ಸೊಪ್ಪನ್ನು ಸೇವಿಸಿದ ಮೇಲೆ ಏನೇ ಸಮಸ್ಯೆ ಕಾಣಿಸಿಕೊಂಡರೂ ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಘಟನೆಯಿಂದ ಯಾವುದೇ ರೀತಿಯ ಪ್ರಾನಹಾನಿಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ.  

ಇದನ್ನೂ ಓದಿ :  Rosie Moore: ಅಪಾಯಕಾರಿ ಜಂತುಗಳನ್ನು ಮೈಮೇಲೆ ಎಳೆದುಕೊಳ್ಳುವ ವಿಶ್ವದ ಹಾಟ್ ಸೈಂಟಿಸ್ಟ್ ಇವಳೇ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News