Ethiopian Airlines Pilots: ಇಥಿಯೋಪಿಯನ್ ಏರ್‌ಲೈನ್ಸ್‌ನ ಇಬ್ಬರು ಪೈಲಟ್‌ಗಳು ಸುಡಾನ್‌ನ ಖಾರ್ಟೂಮ್‌ನಿಂದ ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬಾಗೆ ಹಾರುತ್ತಿದ್ದಾಗ ನಿದ್ರಿಸುತ್ತಾ ತಮ್ಮ ಲ್ಯಾಂಡಿಂಗ್ ತಪ್ಪಿಸಿಕೊಂಡರು. ಏವಿಯೇಷನ್ ಹೆರಾಲ್ಡ್ ಪ್ರಕಾರ, ಈ ಘಟನೆ ಸೋಮವಾರ ಸಂಭವಿಸಿದೆ. ET-343 ಫ್ಲೈಟ್ ವಿಮಾನ ನಿಲ್ದಾಣವನ್ನು ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆ ನೀಡಿತು, ಆದರೆ ವಿಮಾನ ಇಳಿಯಲು ಪ್ರಾರಂಭಿಸಲಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ: Explainer : ಶ್ರೀಲಂಕಾದಲ್ಲಿ ಚೀನಾದ ʻಸ್ಪೈ ಶಿಪ್ʼ ಇರೋದು ಭಾರತಕ್ಕೆ ಅಪಾಯವೇ?
ವರದಿಯಲ್ಲಿ ಏನೆಲ್ಲಾ ಹೇಳಲಾಗಿದೆ?
ಪೈಲಟ್‌ಗಳು ನಿದ್ರಿಸುತ್ತಿರುವಾಗ, ಬೋಯಿಂಗ್ 737 ನ ಆಟೋಪೈಲಟ್ ವ್ಯವಸ್ಥೆಯು ವಿಮಾನವನ್ನು 37,000 ಅಡಿಗಳಷ್ಟು ಎತ್ತರದಲ್ಲಿ ಹಾರಿಸಿತು ಎಂದು ವರದಿ ತಿಳಿಸಿದೆ. ವಿಮಾನವು ತನ್ನ ಮುಂದಿನ ಹಾರಾಟಕ್ಕೆ ಹೊರಡುವ ಮೊದಲು ಸುಮಾರು 2.5 ಗಂಟೆಗಳ ಕಾಲ ನೆಲದ ಮೇಲೆ ಇತ್ತು. ಎಟಿಸಿ ಪೈಲಟ್‌ಗಳನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ ಎಂದು ಏವಿಯೇಷನ್ ಹೆರಾಲ್ಡ್ ವರದಿ ಹೇಳಿದೆ. ವಿಮಾನವು ಇಳಿಯಬೇಕಿದ್ದ ರನ್‌ವೇಯನ್ನು ದಾಟಿದಾಗ, ಆಟೊಪೈಲಟ್ ಸಂಪರ್ಕ ಕಡಿತಗೊಂಡಿತು. ಅಲಾರಾಂ ಮೊಳಗಿದ ನಂತರ ವಿಮಾನದ ಪೈಲಟ್‌ಗಳಿಬ್ಬರೂ ಎಚ್ಚರಗೊಂಡರು. ಇದರ ನಂತರ, ಅವರು 25 ನಿಮಿಷಗಳ ನಂತರ ರನ್‌ವೇಯಲ್ಲಿ ಇಳಿಯಲು ಸುತ್ತಿದರು. ಅದೃಷ್ಟವಶಾತ್ ಯಾವುದೇ ಹಾನಿಯಾಗದೇ ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು.
Deeply concerning incident at Africa’s largest airline — Ethiopian Airlines Boeing 737 #ET343 was still at cruising altitude of 37,000ft by the time it reached destination Addis Ababa
Why hadn’t it started to descend for landing? Both pilots were asleep. https://t.co/cPPMsVHIJD pic.twitter.com/RpnxsdtRBf
— Alex Macheras (@AlexInAir) August 18, 2022
ವಿಮಾನಯಾನ ಕಣ್ಗಾವಲು ವ್ಯವಸ್ಥೆ ADS-B ಘಟನೆಯನ್ನು ದೃಢಪಡಿಸಿದೆ. ಅಡಿಸ್ ಅಬಾಬಾ ವಿಮಾನ ನಿಲ್ದಾಣದ ಬಳಿ ಇರುವ ವಿಮಾನದ ಫೋಟೋವನ್ನು ಅದು ಪೋಸ್ಟ್ ಮಾಡಿದೆ. ಮೇ ತಿಂಗಳಲ್ಲಿ ನ್ಯೂಯಾರ್ಕ್‌ನಿಂದ ರೋಮ್‌ಗೆ ವಿಮಾನವು ನೆಲದಿಂದ 38,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಇಬ್ಬರು ಪೈಲಟ್‌ಗಳು ನಿದ್ರಿಸಿದಾಗ ಇದೇ ರೀತಿಯ ಘಟನೆ ವರದಿಯಾಗಿದೆ. ಏವಿಯೇಷನ್ ರೆಗ್ಯುಲೇಟರ್‌ನಿಂದ ತನಿಖೆ ನಡೆಸಲಾಗಿದ್ದು, ಐಟಿಎ ಏರ್‌ವೇಸ್‌ನ ಇಬ್ಬರೂ ಪೈಲಟ್‌ಗಳು ನಿದ್ರಿಸುತ್ತಿದ್ದರು ಎಂದು ದೃಢಪಡಿಸಿದೆ.
ಇದನ್ನೂ ಓದಿ: Elon Musk: ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಾರಂತೆ ಎಲೋನ್ ಮಸ್ಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.