Russian Fighter Plane Crash: ವಸತಿ ಅಪಾರ್ಟ್ ಮೆಂಟ್ ಮೇಲೆ ಅಪ್ಪಳಿಸಿದ ರಷ್ಯಾ ಯುದ್ಧ ವಿಮಾನ! ಬೆಂಕಿಯಿಂದ ಆವರಿಸಿದ ಕಟ್ಟಡ

Russian Fighter Plane Crash: ಬಹುಮಹಡಿ ಕಟ್ಟಡದಿಂದ ದೊಡ್ಡ ಬೆಂಕಿಯುಂಡೆಗಳು ಹೊರಹೊಮ್ಮುತ್ತಿರುವುದನ್ನು ದೃಶ್ಯಾವಳಿಗಳು ತೋರಿಸುತ್ತಿವೆ. ಇನ್ನು ಯುದ್ಧ ವಿಮಾನ ಅಪ್ಪಳಿಸುತ್ತಿದ್ದಂತೆ ಪೈಲಟ್‌ಗಳು ಹೊರಹಾಕಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.

Written by - Bhavishya Shetty | Last Updated : Oct 17, 2022, 10:54 PM IST
    • ವಸತಿ ಅಪಾರ್ಟ್ ಮೆಂಟ್ ಗೆ ಅಪ್ಪಳಿಸಿದ ರಷ್ಯಾದ ಫೈಟರ್ ವಿಮಾನ
    • ಸುಮಾರು ಐದು ಅಪಾರ್ಟ್ ಮೆಂಟ್ ಗಳಿಗೆ ಭಾರೀ ಹಾನಿ
    • ದಕ್ಷಿಣ ರಷ್ಯಾದ ನಗರವಾದ ಯೆಸ್ಕ್‌ನಲ್ಲಿ ಘಟನೆ
Russian Fighter Plane Crash: ವಸತಿ ಅಪಾರ್ಟ್ ಮೆಂಟ್ ಮೇಲೆ ಅಪ್ಪಳಿಸಿದ ರಷ್ಯಾ ಯುದ್ಧ ವಿಮಾನ! ಬೆಂಕಿಯಿಂದ ಆವರಿಸಿದ ಕಟ್ಟಡ title=
russia

Russian Fighter Plane Crash: ರಷ್ಯಾದ ಫೈಟರ್ ವಿಮಾನವು ಇಂದು ದಕ್ಷಿಣ ರಷ್ಯಾದ ನಗರವಾದ ಯೆಸ್ಕ್‌ನಲ್ಲಿ ವಸತಿ ಕಟ್ಟಡಕ್ಕೆ ಅಪ್ಪಳಿಸಿದೆ. ಪರಿಣಾಮ ಬೆಂಕಿ ಅಪಾರ್ಟ್‌ಮೆಂಟ್‌ನ್ನು ಆವರಿಸಿದೆ ಎಂದು ಪ್ರಾದೇಶಿಕ ಗವರ್ನರ್ ಹೇಳಿದ್ದಾರೆ.

ಬಹುಮಹಡಿ ಕಟ್ಟಡದಿಂದ ದೊಡ್ಡ ಬೆಂಕಿಯುಂಡೆಗಳು ಹೊರಹೊಮ್ಮುತ್ತಿರುವುದನ್ನು ದೃಶ್ಯಾವಳಿಗಳು ತೋರಿಸುತ್ತಿವೆ. ಇನ್ನು ಯುದ್ಧ ವಿಮಾನ ಅಪ್ಪಳಿಸುತ್ತಿದ್ದಂತೆ ಪೈಲಟ್‌ಗಳು ಹೊರಹಾಕಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.

ಇದನ್ನೂ ಓದಿ: ಮಧ್ಯ ಅಮೆರಿಕದ ಕರಾವಳಿಯಲ್ಲಿ 6.4 ತೀವ್ರತೆಯ ಭೂಕಂಪ

ಗವರ್ನರ್ ವೆನಿಯಾಮಿನ್ ಕೊಂಡ್ರಾಟೀವ್ ಅವರು ಮಾತನಾಡಿ, ವಿಮಾನವು ಸುಖೋಯ್ ಸು -34, ಸೂಪರ್ಸಾನಿಕ್ ಮಧ್ಯಮ-ಶ್ರೇಣಿಯ ಯುದ್ಧ-ಬಾಂಬರ್ ಆಗಿತ್ತು ಎಂದಿದ್ದಾರೆ. ಸೇನಾ ವಾಯುನೆಲೆಯಿಂದ ತರಬೇತಿ ಹಾರಾಟದ ವೇಳೆ ಪತನಗೊಂಡಿದೆ ಎಂದು RIA ಸುದ್ದಿ ಸಂಸ್ಥೆ ತಿಳಿಸಿದೆ. ಎಂಜಿನ್ ಬೆಂಕಿಯಿಂದ ಅಪಘಾತ ಸಂಭವಿಸಿದೆ ಎಂದು TASS ಹೇಳಿದೆ.

ಅಪಾರ್ಟ್ಮೆಂಟ್ ಕಟ್ಟಡದ ಐದು ಮಹಡಿಗಳು ಬೆಂಕಿಯಿಂದ ಆವರಿಸಿದೆ. ಮತ್ತೊಂದರ ಮೇಲಿನ ಮಹಡಿಗಳು ಕುಸಿದಿದ್ದು, ಸುಮಾರು 45 ಅಪಾರ್ಟ್‌ಮೆಂಟ್‌ಗಳು ಹಾನಿಗೊಳಗಾಗಿವೆ ಎಂದು ಇಂಟರ್‌ಫ್ಯಾಕ್ಸ್ ತುರ್ತು ಸೇವೆಗಳನ್ನು ಉಲ್ಲೇಖಿಸಿದೆ.

ಬೆಂಕಿಯು 2,000 ಚದರ ಮೀಟರ್ (21,500 ಚದರ ಅಡಿ) ವರೆಗೆ ವ್ಯಾಪಿಸಿದೆ ಎಂದು ಹೇಳಿದೆ. ಪ್ರಾದೇಶಿಕ ಗವರ್ನರ್ ವೆನಿಯಾಮಿನ್ ಕೊಂಡ್ರಾಟೀವ್ ಅವರು ಟೆಲಿಗ್ರಾಮ್‌ನಲ್ಲಿ "ಪ್ರದೇಶದ ಎಲ್ಲಾ ಅಗ್ನಿಶಾಮಕ ಮತ್ತು ರಕ್ಷಣಾ ಘಟಕಗಳು ಬೆಂಕಿ ನಂದಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

ರಷ್ಯಾದ ತನಿಖಾ ಸಮಿತಿಯು ನಂತರ ಅಪಘಾತದ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿತು.

ಇದನ್ನೂ ಓದಿ: ಯುರೋಪಿಗೆ ಮತ್ತೆ ಕೊರೊನಾ ಎಂಟ್ರಿ...! ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆ ಏನು ಗೊತ್ತೇ?

ಯೆಸ್ಕ್ ನಗರವು ದಕ್ಷಿಣ ಉಕ್ರೇನ್ ಮತ್ತು ದಕ್ಷಿಣ ರಷ್ಯಾವನ್ನು ಬೇರ್ಪಡಿಸುವ ಅಜೋವ್ ಸಮುದ್ರದ ಕರಾವಳಿಯ ಟಂಗರೋಗ್ ಕೊಲ್ಲಿಯಲ್ಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News