'Sperm Smuggling': ಹೊರಗಿರುವ ತಮ್ಮ ಪತ್ನಿಯರನ್ನು ಗರ್ಭಿಣಿಯನ್ನಾಗಿಸುತ್ತಿದ್ದಾರಂತೆ ಜೈಲಿನಲ್ಲಿರುವ ಉಗ್ರರು

'Sperm Smuggling': ಇಸ್ರೇಲ್ನಲ್ಲಿ, ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿರುವ ಕೈದಿಗಳಿಗೆ ವೈವಾಹಿಕ ಭೇಟಿ ನೀಡಲು ಅವಕಾಶವಿಲ್ಲ. ಪ್ಯಾಲಿಸ್ತೇನ್ ನ  ಆಸ್ಪತ್ರೆಗಳಲ್ಲಿ ಇಂತಹ ಇವರಿಗೆ ಪ್ರಸವ ಪ್ರಕ್ರಿಯೆ ನಡೆಸಲಾಗುತ್ತದೆ.  ಜೈಲಿನಲ್ಲಿ ಭದ್ರತಾ ಸೋರಿಕೆ ಅಸಾಧ್ಯ ಆದರೆ ಕೆಲವೊಮ್ಮೆ ಇಂತಹ ಪ್ರಯತ್ನಗಳು ಯಶಸ್ವಿಯಾಗುತ್ತದೆ.

Last Updated : Dec 18, 2020, 02:49 PM IST
  • ಜೈಲಿನಲ್ಲಿ ವಿರ್ಯ ಕಳ್ಳಸಾಗಾಣಿಕೆ.
  • ಇದರಿಂದ ಉಗ್ರರು ತಮ್ಮ ಪತ್ನಿಯರನ್ನು ಗರ್ಭಿಣಿಯನ್ನಾಗಿಸುತ್ತಿದ್ದಾರೆ.
  • ಟಾಫಿ ಅಥವಾ ಕ್ಯಾಂಡಿ ಮೂಲಕ ಈ ವಿರ್ಯ ಕಳ್ಳಸಾಗಾಣಿಕೆ ನಡೆಸಲಾಗುತ್ತಿದೆ.
'Sperm Smuggling': ಹೊರಗಿರುವ ತಮ್ಮ ಪತ್ನಿಯರನ್ನು ಗರ್ಭಿಣಿಯನ್ನಾಗಿಸುತ್ತಿದ್ದಾರಂತೆ ಜೈಲಿನಲ್ಲಿರುವ ಉಗ್ರರು title=
Sperm Smuggling

ತೇಲ ಅವಿವಾ: 'Sperm Smuggling': ಇಸ್ರೇಲ್‌ನ ನೆರೆ ರಾಷ್ಟ್ರ ಪ್ಯಾಲೆಸ್ಟೈನ್‌ನಲ್ಲಿ 'ವೀರ್ಯ ಕಳ್ಳಸಾಗಣೆ' ಅಭ್ಯಾಸ ಭರದಿಂದ ಸಾಗುತ್ತಿದೆ. ಕಾರಣ ಇಸ್ರೇಲಿ ಜೈಲುಗಳಲ್ಲಿನ ಭಯೋತ್ಪಾದಕರು (Terrorists) ತಮ್ಮ ಹೆಂಡತಿಗಳಿಗೆ ವೀರ್ಯವನ್ನು ರಹಸ್ಯವಾಗಿ ಕಳುಹಿಸುತ್ತಿದ್ದಾರೆ ಇದರಿಂದ ಅವರು ತಮ್ಮ ಉತ್ತರಾಧಿಕಾರಿಗಳಿಗೆ ಜನ್ಮ ನೀಡುತ್ತಾರೆ. ಈ ಕಳ್ಳಸಾಗಾಣಿಕೆಯನ್ನು ಗಾಜಾದಲ್ಲಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವೀರ್ಯವನ್ನು ಕಳ್ಳಸಾಗಣೆ ಮಾಡುವ ಮೂಲಕ ಉಗ್ರರು ತಮ್ಮ ಪತ್ನಿಯರನ್ನು ಗರ್ಭಿಣಿಯನ್ನಾಗಿಸುತ್ತಿದ್ದಾರೆ  ಎಂಬುದು ಸ್ಪಷ್ಟವಾಗಿದೆ. ಇದನ್ನು ನಿಷೇಧಿಸದಿದ್ದರೆ, ಇಸ್ರೇಲಿಗೆ ದೊಡ್ಡ ಬೆದರಿಕೆ ಉಂಟಾಗಬಹುದು ಎಂದು ಮಧ್ಯಪ್ರಾಚ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾರಣನ ಏನು?
ಇಸ್ರೇಲ್ನಲ್ಲಿ, ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿರುವ ಕೈದಿಗಳಿಗೆ ಶಾರೀರಿಕವಾಗಿ ಒಂದಾಗಲು ಅನುಮತಿ ನೀಡಲಾಗುವುದಿಲ್ಲ. ಪ್ಯಾಲಿಸ್ತೇನ್ ನ  ಆಸ್ಪತ್ರೆಗಳಲ್ಲಿ ಇವರ ಪತ್ನಿಯರಿಗೆ ಪ್ರಸವ ಪ್ರಕ್ರಿಯೆ ನಡೆಸಲಾಗುತ್ತದೆ.  ಜೈಲಿನಲ್ಲಿ ಭದ್ರತಾ ಸೋರಿಕೆ ಅಸಾಧ್ಯ ಆದರೆ ಕೆಲವೊಮ್ಮೆ ಇಂತಹ ಪ್ರಯತ್ನಗಳು ಯಶಸ್ವಿಯಾಗುತ್ತದೆ.

Modus operandi
ಉಗ್ರರು ಹೇಗಾದರೂ ಮಾಡಿ ಸಣ್ಣ ಸಣ್ಣ ಡಬ್ಬಿಗಳಲ್ಲಿ ತಮ್ಮ ವಿರ್ಯವನ್ನು(Sperm) ಕಳ್ಳಸಾಗಾಣಿಕೆಯ ಮೂಲಕ ಪ್ಯಾಲಿಸ್ತೈನ್ ನಲ್ಲಿರುವ ತಮ್ಮ ಪತ್ನಿಯರಿಗೆ ಕಳುಹಿಸುತ್ತಾರೆ. ಇದಕ್ಕಾಗಿ ವಿಜ್ಞಾನದ ಸಹಾಯ ಕೂಡ ಪಡೆಯಲಾಗುತ್ತದೆ. ಹಲವು ಬಾರಿ ಕಾಫಿ ಹಾಗೂ ಕ್ಯಾಂಡಿಗಳ ರೂಪದಲ್ಲಿ ಅವರು ತಮ್ಮ  ವಿರ್ಯವನ್ನು ಸಂಗಾತಿಯವರೆಗೆ ತಲುಪಿಸುತ್ತಾರಂತೆ.

ಇದನ್ನು ಓದಿ-ಒಂದೇ ವರ್ಷದಲ್ಲಿ 23 ಮಕ್ಕಳಿಗೆ 'ತಂದೆ'ಯಾದ ಯುವಕ, ಮಹಿಳೆಯರಿಗೆ ಯಾಕೆ ಇಷ್ಟ ಗೊತ್ತಾ?

ಅಂಕಿ ಅಂಶಗಳಲ್ಲಿ ಸ್ಪಷ್ಟನೆ ಇಲ್ಲ
2012 ರಲ್ಲಿ ವೀರ್ಯ ಕಳ್ಳಸಾಗಣೆಯಿಂದಾಗಿ ಗರ್ಭಿಣಿಯಾದ ಮೊದಲ ಮಹಿಳೆ ಸನಾ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, 2018 ರ ಹೊತ್ತಿಗೆ 56 ಕ್ಕೂ ಹೆಚ್ಚು ಪ್ಯಾಲೇಸ್ಟಿನಿಯನ್ ಭಯೋತ್ಪಾದಕರ ಪತ್ನಿಯರು ವೀರ್ಯ ಕಳ್ಳಸಾಗಣೆ ಮೂಲಕ ತಾಯಂದಿರಾಗಿದ್ದರು. ರಜಾನ್  ಸೆಂಟರ್ ನಂತಹ ಕೆಲವು ಕೇಂದ್ರಗಳು ಸಹ ಇಂತಹ ಪ್ರಸವ ಮಾಡುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿವೆ ಎನ್ನಲಾಗುತ್ತದೆ.

ಇದನ್ನು ಓದಿ- ವೀರ್ಯಾಣುಗಳ ಗುಣಮಟ್ಟ ಸುಧಾರಣೆಗೆ ಯೋಗ ಒಂದು ಉತ್ತಮ ಸಾಧನ: ಅಧ್ಯಯನ

ಇದು ಹೇಗೆ ಆರಂಭಗೊಂಡಿತು?
1980 ರ ದಶಕದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ ಇಸ್ರೇಲಿ ಸೈನಿಕನೋರ್ವನನ್ನು ಅಪಹರಿಸಿ ಹತ್ಯೆಗೈದಿತ್ತು. ಇದರಿಂದ ಕೋಪಗೊಂಡ ಇಸ್ರೇಲ್ ತಿರಾದ ಇಸ್ರೇಲಿ ಅರೇಬಿಕ್ ಪ್ರಜೆಯಾದ ವಾಲಿದ್ ಡಕ್ಕಾನನ್ನು ವಶಕ್ಕೆ ತೆಗೆದುಕೊಂಡಿತು. ಭಯೋತ್ಪಾದನೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ, ಅವನು ಮಹಿಳಾ ಪತ್ರಕರ್ತೆ ಸನಾ ಜೊತೆಗೆ ವಿವಾಹವಾದ. ಪ್ಯಾಲೇಸ್ಟಿನಿಯನ್ ಕೈದಿಗಳ ಸ್ಥಿತಿಯ ಬಗ್ಗೆ ಸನಾ ನಂತರ ವರದಿ ಮಾಡುತ್ತಿದ್ದಳು, ಈ ಕಾರಣದಿಂದಾಗಿ ಇಸ್ರೇಲಿ ಜೈಲುಗಳಲ್ಲಿ ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಭೇಟಿಯಾಗಲು ಆಕೆಗೆ ಅನುಮತಿ ನೀಡಲಾಯಿತು. ದಂಪತಿಗಳು ಮಗುವಿಗೆ ಜನ್ಮ ನೀಡಲು ಬಯಸಿದ್ದರು, ಆದರೆ ಮದುವೆಗೆ ಅನುಮೋದನೆಯ ಕೊರತೆಯಿಂದಾಗಿ ಇದು ಸಂಭವಿಸಲಿಲ್ಲ. ಅದರ ನಂತರ, ವೀರ್ಯ ಕಳ್ಳಸಾಗಣೆ ವಿಧಾನವನ್ನು ರೂಪಿಸಲಾಯಿತು.

Trending News