ಶ್ರೀಲಂಕಾ ಅಧ್ಯಕ್ಷರಿಂದ ಭಾರತೀಯ ಮೀನುಗಾರರ ದೋಣಿಗಳ ಬಿಡುಗಡೆ ಭರವಸೆ

"ನಾವು ಮೀನುಗಾರರ ಸಮಸ್ಯೆಯನ್ನು ದೀರ್ಘವಾಗಿ ಚರ್ಚಿಸಿದ್ದೇವೆ. ನಮ್ಮ ವಶದಲ್ಲಿರುವ ಭಾರತಕ್ಕೆ ಸೇರಿದ ದೋಣಿಗಳನ್ನು ಬಿಡುಗಡೆ ಮಾಡಲು ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಶ್ರೀಲಂಕಾ ಅಧ್ಯಕ್ಷ ಗೊಟಯಬಾ ರಾಜಪಕ್ಸೆ ಭರವಸೆ ನೀಡಿದರು.

Yashaswini V Yashaswini V | Updated: Nov 29, 2019 , 03:50 PM IST
ಶ್ರೀಲಂಕಾ ಅಧ್ಯಕ್ಷರಿಂದ ಭಾರತೀಯ ಮೀನುಗಾರರ ದೋಣಿಗಳ ಬಿಡುಗಡೆ ಭರವಸೆ
Photo courtesy: ANI

ಕೊಲಂಬೊ: ದ್ವೀಪ ರಾಷ್ಟ್ರದ ವಶದಲ್ಲಿರುವ ಭಾರತೀಯ ಮೀನುಗಾರರ ದೋಣಿಗಳನ್ನು ಬಿಡುಗಡೆ ಮಾಡಲು ತಮ್ಮ ದೇಶ ಕ್ರಮ ಕೈಗೊಳ್ಳಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಯಬಾ ರಾಜಪಕ್ಸೆ(Gotayaba Rajapaksa) ಶುಕ್ರವಾರ ಭರವಸೆ ನೀಡಿದ್ದಾರೆ.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗೊಟಯಬಾ ರಾಜಪಕ್ಸೆ, "ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಂದು ಬೆಳಿಗ್ಗೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಚರ್ಚೆಯು ಅತ್ಯಂತ ಸೌಹಾರ್ದಯುತ ಮತ್ತು ಧೈರ್ಯ ತುಂಬುವಂತಿತ್ತು. ಇವುಗಳಲ್ಲಿ ನಮ್ಮ ಉಭಯ ದೇಶಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಿರ್ಧರಿಸಿರುವುದಾಗಿ" ತಿಳಿಸಿದರು.

"ನಾವು ಮೀನುಗಾರ(Fisherman)ರ ಸಮಸ್ಯೆಯನ್ನು ದೀರ್ಘವಾಗಿ ಚರ್ಚಿಸಿದ್ದೇವೆ. ನಮ್ಮ ವಶದಲ್ಲಿರುವ ಭಾರತಕ್ಕೆ ಸೇರಿದ ದೋಣಿಗಳನ್ನು ಬಿಡುಗಡೆ ಮಾಡಲು ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಭರವಸೆ ನೀಡಿದರು.

ಭಾರತ ಮತ್ತು ಶ್ರೀಲಂಕಾ(Srilanka) ನಡುವಿನ ನೀರಿನಲ್ಲಿರುವ ಕಾಲ್ಪನಿಕ ರೇಖೆಯಾದ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (IMBL) ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ನಿಯಮಿತವಾಗಿ ಶ್ರೀಲಂಕಾ ಅಧಿಕಾರಿಗಳು ಬಂಧಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ಮತ್ತು ಕೊಲಂಬೊ ಮೀನುಗಾರರ ವಿಷಯದಲ್ಲಿ ರಚನಾತ್ಮಕ ಮತ್ತು ಮಾನವೀಯ ವಿಧಾನವನ್ನು ಹೊಂದಲು ಸೂಚಿಸಿದ್ದಾರೆ ಎಂದು ಅವರ ಭಾಷಣದಲ್ಲಿ ತಿಳಿಸಿದರು.

"ನಾವು ಮೀನುಗಾರರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ತಿಳಿಸಿದ ಅಧ್ಯಕ್ಷ ಗೊಟಯಬಾ ಈ ವಿಷಯದಲ್ಲಿ ನಾವು ರಚನಾತ್ಮಕ ಮತ್ತು ಮಾನವೀಯ ವಿಧಾನವನ್ನು ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದಾಗಿ ತಿಳಿಸಿದರು. ಗುಪ್ತಚರ ಸಂಸ್ಥೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಐವತ್ತು ಮಿಲಿಯನ್ ಡಾಲರ್ ಸಾಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಗೊಟಯಬಾ ಧನ್ಯವಾದ ಅರ್ಪಿಸಿದರು."

(With ANI Inputs)