18 ಯುದ್ಧವಿಮಾನಗಳ ಮೂಲಕ Taiwan ಗಡಿ ನುಸುಳಿದ China, USಗೂ ಕೂಡ ಎಚ್ಚರಿಕೆ

ತೈವಾನ್ ಅಧ್ಯಕ್ಷ ಸಾಯಿ ಇಂಗ್-ವೆನ್ (ತ್ಸೈ ಇಂಗ್-ವೆನ್) ಯುಎಸ್-ತೈವಾನ್ ಸಂಬಂಧವನ್ನು ಬಲಪಡಿಸುವತ್ತ ಸಂಪೂರ್ಣ ಒತ್ತು ನೀಡುತ್ತಿದ್ದಾರೆ.

Last Updated : Sep 19, 2020, 04:16 PM IST
  • ತೈವಾನ್ ಗಡಿ ಹೊಕ್ಕ 18 ಚೀನೀ ಯುದ್ಧವಿಮಾನಗಳು, ಅಸಮಾಧಾನಗೊಂಡ ತೈವಾನ್
  • ತೈವಾನ್-ಅಮೇರಿಕಾ ಒಟ್ಟಾಗಿ ಶಾಂತಿ ನೆಲೆಸಲು ಕೆಲಸ ಮಾಡುತ್ತಿವೆ.
  • ನಾಲ್ಕು ದಶಕಗಳ ಬಳಿಕ ಇದೆ ಬಾರಿ ಅಮೆರಿಕಾದ ಉನ್ನತ ಅಧಿಕಾರಿಯಿಂದ ತೈವಾನ್ ಭೇಟಿ.
18 ಯುದ್ಧವಿಮಾನಗಳ ಮೂಲಕ Taiwan ಗಡಿ ನುಸುಳಿದ China, USಗೂ ಕೂಡ ಎಚ್ಚರಿಕೆ title=

ತೈವಾನ್: ತೈವಾನ್ ಅಧ್ಯಕ್ಷ ಸಾಯಿ ಇಂಗ್-ವೆನ್ (ತ್ಸೈ ಇಂಗ್-ವೆನ್) ಯುಎಸ್(US)-ತೈವಾನ್(Taiwan) ಸಂಬಂಧವನ್ನು ಬಲಪಡಿಸುವತ್ತ ಸಂಪೂರ್ಣ ಒತ್ತು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಮೇರಿಕನ್ ನಿಯೋಗದೊಂದಿಗೆ ಸಂವಾದ ನಡೆಸಿದ್ದು ಮತ್ತು ಅವರಿಗೆ ಭೋಜನಕೂಟವನ್ನೂ ಕೂಡ ಆಯೋಜಿಸಿದ್ದರು. ಪ್ರಸ್ತುತ, ಯುಎಸ್ನ ಉನ್ನತ ನಿಯೋಗವು ತೈವಾನ್ಗೆ ಭೇಟಿ ನೀಡುತ್ತಿದೆ. ಆದರೆ ಈ ಮಧ್ಯೆ, ಚೀನಾ ದಾದಾಗಿರಿ ಮೆರೆಯುತ್ತ  ತೈವಾನ್ ಮೇಲೆ ಯುದ್ಧವಿಮಾನಗಳ ಹಾರಾಟ ನಡೆಸಿದೆ. ಒಟ್ಟಿಗೆ 18 ಚೈನೀಸ್ ಫೈಟರ್ ಜೆಟ್‌ಗಳಿದ್ದು, ಅವುಗಳಲ್ಲಿ ಎರಡು ಬಾಂಬ್ ಸುರಿಮಳೆಗೈಯುವ ವಿಮಾನಗಳಾಗಿವೆ.

Also Read - ತೈವಾನ್ ದ್ವೀಪದ ಮೇಲೆ ಯುಎಸ್ ವಿಮಾನ ಹಾರಾಟ, ಯುದ್ಧ ವಿಮಾನ ಕಳಿಸಿದ ಚೀನಾ

ಈ ಚೀನೀ ವಿಮಾನಗಳನ್ನು ತೈವಾನೀಸ್ ಫೈಟರ್ ಜೆಟ್‌ಗಳು ನಿಲ್ಲಿಸಲಾಗಲಿಲ್ಲ ಮತ್ತು ಅವು ತೈವಾನ್‌ ಆಗಸದಲ್ಲಿ ವಿವಿಧ ರಚನೆಗಳನ್ನು ರಚಿಸುತ್ತ ಹಾದುಹೊಗಿವೆ.  ಚೀನಾ ಇದನ್ನು ಸ್ವರಕ್ಷಣೆಯ ಕಸರತ್ತು ಎಂದು ಹೇಳಿದೆ ಮತ್ತು ಮಧ್ಯಪ್ರವೇಶಿಸದಂತೆ ಹೊರಗಿನ ದೇಶಗಳಿಗೆ ಮನವಿ ಮಾಡಿದೆ. ಇನ್ನೊಂದೆಡೆ ತೈವಾನ್ ಇದನ್ನು ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿದೆ. ಏತನ್ಮಧ್ಯೆ, ಶುಕ್ರವಾರ, ಚೀನಾ ಸೈನ್ಯವು ತೈವಾನ್ ಬಳಿ ಯುದ್ಧ ವ್ಯಾಯಾಮವನ್ನು ನಡೆಸಿದೆ. ಇದನ್ನು ಪ್ರತಿಭಟಿಸಿರುವ  ಯುಎಸ್ ಮತ್ತು ತೈವಾನ್ ತಮ್ಮ ಯುದ್ಧ ವಿಮಾನಗಳನ್ನು ನಿಯೋಜಿಸಿ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿವೆ.

Also Read - ತೈವಾನ್ ಬೇರ್ಪಡಿಸುವಿಕೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಚೀನಾ

ನಾಲ್ಕು ದಶಕಗಳ ಬಳಿಕ ಉನ್ನತ ಅಮೆರಿಕಾದ ಅಧಿಕಾರಿಗಳಿಂದ ತೈವಾನ್ ಭೇಟಿ
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ಹಿರಿಯ ಅಧಿಕಾರಿ ಕೀತ್ ಕ್ರಚ್ ತಮ್ಮ ಮೂರು ದಿನಗಳ ತೈವಾನ್ ಪ್ರವಾಸದಲ್ಲಿದ್ದಾರೆ. ನಾಲ್ಕು ದಶಕಗಳ ನಂತರ ಇದೆ ಮೊದಲ ಬಾರಿಗೆ ಅಮೆರಿಕದ ಉನ್ನತ ಅಧಿಕಾರಿಯೊಬ್ಬರ ತೈವಾನ್ ಪ್ರವಾಸ ಇದಾಗಿದೆ. ತೈವಾನ್ ಅಧ್ಯಕ್ಷ ಸಾಯಿ ಇಂಗ್-ವೆನ್ ಅವರ ಗೌರವಾರ್ಥ ಭೋಜನಕೂಟ ಏರ್ಪಡಿಸಿದ್ದರು. ತೈವಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ, ಇದರಿಂದ ಇಡೀ ಏಷ್ಯಾ ಪೆಸಿಫಿಕ್ ಪ್ರದೇಶ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಾಯಿ ಇಂಗ್-ವೆನ್ ಈ ವೇಳೆ ಹೇಳಿದ್ದಾರೆ.

Trending News