ಭಾರತಕ್ಕೆ ಆಗಮಿಸಬೇಕಿದ್ದ 140 ಅಫ್ಘಾನ್ ಸಿಖ್ಖರನ್ನು ತಡೆದ ತಾಲಿಬಾನ್..! ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನೋತ್ಸವದಲ್ಲಿ ಭಾಗಿಯಾಗಬೇಕಿದ್ದ ಸಿಖ್ಖರು

ಗುರುವಾರ ಅಫ್ಘಾನಿಸ್ತಾನದಿಂದ ದೆಹಲಿಗೆ ಬರುತ್ತಿದ್ದ ಸುಮಾರು 140 ಸಿಖ್ಖರನ್ನು ವಿಮಾನ ಹತ್ತದಂತೆ ತಾಲಿಬಾನಿಗಳು  ತಡೆದಿದ್ದಾರೆ. ಈ ಸಿಖ್ಖರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದರು.  

Written by - Ranjitha R K | Last Updated : Aug 26, 2021, 06:14 PM IST
  • 140 ಸಿಖ್ಖರನ್ನು ತಡೆದ ತಾಲಿಬಾನ್
  • ಗುರು ತೇಗ್ ಬಹದ್ದೂರ್ 400 ನೇ ಜನ್ಮದಿನೋತ್ಸವದಲ್ಲಿ ಭಾಗಿಯಾಗಬೇಕಿದ್ದ ಸಿಖ್ಖರು
  • ಕಾಬೂಲ್ ವಿಮಾನ ನಿಲ್ದಾಣಕ್ಕೆ ಬರಲು ಅನುಮತಿ ನಿರಾಕರಣೆ
ಭಾರತಕ್ಕೆ ಆಗಮಿಸಬೇಕಿದ್ದ 140 ಅಫ್ಘಾನ್ ಸಿಖ್ಖರನ್ನು ತಡೆದ ತಾಲಿಬಾನ್..! ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನೋತ್ಸವದಲ್ಲಿ ಭಾಗಿಯಾಗಬೇಕಿದ್ದ ಸಿಖ್ಖರು title=
140 ಸಿಖ್ಖರನ್ನು ತಡೆದ ತಾಲಿಬಾನ್ (photo zee news)

ನವದೆಹಲಿ : ಅಫ್ಘಾನಿಸ್ತಾನದ (Afghanistan) ಅಧಿಕಾರವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಬಗೆಗಿನ ಕಾಳಜಿಯ ಬಗ್ಗೆ ಮಾತುಗಳನ್ನಾಡುತ್ತಿದೆ. ಆದರೆ ತಾಲಿಬಾನ್  (Taliban) ಕೆಲವು ನಿರ್ಧಾರಗಳು ಈಗಲೂ ಪ್ರಪಂಚದ ನಿದ್ದೆಗೆಡಿಸಿದೆ. 

140 ಸಿಖ್ಖರನ್ನು ತಡೆದ ತಾಲಿಬಾನ್  : 
 ಗುರುವಾರ ಅಫ್ಘಾನಿಸ್ತಾನದಿಂದ (Afghanistan) ದೆಹಲಿಗೆ ಬರುತ್ತಿದ್ದ ಸುಮಾರು 140 ಸಿಖ್ಖರನ್ನು ವಿಮಾನ ಹತ್ತದಂತೆ ತಾಲಿಬಾನಿಗಳು  (Taliban) ತಡೆದಿದ್ದಾರೆ. ಈ ಸಿಖ್ಖರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದರು.  ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ಕಾಬುಲ್ ವಿಮಾನ ನಿಲ್ದಾಣ (Kabul airport) ತಲುಪಲು ಅವಕಾಶ ನೀಡಲಿಲ್ಲ. 

ಇದನ್ನೂ ಓದಿ : ಕಾಶ್ಮೀರವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ನೆರವಾಗಲಿದೆ ಎಂದ ಪಾಕ್

ಈ ಸಮಾರಂಭದಲ್ಲಿ ಭಾಗಿಯಾಗಬೇಕಿತ್ತು : 
'ಒಂಬತ್ತನೇ ಗುರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಭಾನುವಾರ ಕೀರ್ತನ ದರ್ಬಾರ್ (Keerthan Darbar) ಅನ್ನು ಆಯೋಜಿಸಲಾಗಿದೆ. ಪ್ರಪಂಚದ ವಿವಿಧ ಭಾಗಗಳಿಂದ ಸಮುದಾಯದ ಸದಸ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೇ ಸಮಾರಂಭದಲ್ಲಿ ಭಾಗಿಯಾಗಲು ಅಫ್ಘಾನಿಸ್ತಾನದಿಂದ 140 ಜನ ಆಗಮಿಸಬೇಕಿತ್ತು. ಆದರೆ, ಅವರಿಗೆ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಲು ಅವಕಾಶ ನೀಡಲಾಗಿಲ್ಲ. 

ಈ ಸಮಾರಂಭದಲ್ಲಿ ಅಫ್ಘಾನ್ ಸಿಖ್ಖರ (Afghan Sikh) ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರವನ್ನು ವಿನಂತಿಸಲಾಗಿತ್ತು.  ಬುಧವಾರ ರಾತ್ರಿ, ಈ ಸಿಖ್ ಯಾತ್ರಿಗಳನ್ನು  15 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು. ಕೊನೆಗೆ ಎಲ್ಲರನ್ನೂ ವಾಪಸ್ ಕಳುಹಿಸಲಾಯಿತು ಎಂದು, ವಿಕಾಸಪುರಿಯ ಗುರು ನಾನಕ್ ಸಾಹಿಬ್ ಜಿ ಗುರುದ್ವಾರದ ಅಧ್ಯಕ್ಷರಾದ ಗುಲ್ಜಿತ್ ಸಿಂಗ್ ತಿಳಿಸಿದ್ದಾರೆ. 

ಇದನ್ನೂ ಓದಿ : Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..!

ತಾಲಿಬಾನ್‌ಗೆ ಮನವಿ : 
ಭಾರತ ವಿಶ್ವ ವೇದಿಕೆ ಅಧ್ಯಕ್ಷ ಪುನಿತ್ ಸಿಂಗ್ ಚಾಂದೋಕ್ ಅವರು ಅಫಘಾನ್ ಹಿಂದೂ ಮತ್ತು ಸಿಖ್ ಯಾತ್ರಿಕರಿಗೆ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ ತಾಲಿಬಾನ್ (Taliban) ನಾಯಕತ್ವಕ್ಕೆ ಮನವಿ ಮಾಡಲಾಗಿದೆ. ಆದರೆ, ಪ್ರಸ್ತುತ, ಈ ಮನವಿಗೆ ತಾಲಿಬಾನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News