ಹಿಂದೂ ಮಹಾಸಾಗರದಲ್ಲಿ ಸುನಾಮಿ ಭೀತಿ: ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ

ಭೂಕಂಪದ ಕೇಂದ್ರ ಬಿಂದು ಪೆಸಿಫಿಕ್ ಮಹಾಸಾಗರದ ತಳದಲ್ಲಿ ಕಂಡುಬಂದಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಟೆಕ್ಟೋನಿಕ್ ಪ್ಲೇಟ್‌ಗಳ ನಿರಂತರ ಚಲನೆಯಿಂದ ಭೂಕಂಪಗಳು ಉಂಟಾಗುತ್ತವೆ. ಇದರ ಜೊತೆಗೆ, ಈ ಪ್ರದೇಶದಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. 

Written by - Bhavishya Shetty | Last Updated : May 28, 2022, 03:13 PM IST
  • ಹಿಂದೂ ಮಹಾಸಾಗರದಲ್ಲಿ ಸುನಾಮಿ ಭೀತಿ
  • ಟಿಮೋರ್ ದ್ವೀಪದಿಂದ ಸ್ವಲ್ಪದೂರದಲ್ಲಿಯೇ ಇದೆ ಕೇಂದ್ರಬಿಂದು
  • 2004ರಲ್ಲಿ ಸಮತ್ರ ದ್ವೀಪದಲ್ಲಿ 9.1 ತೀವ್ರತೆಯ ಭೂಕಂಪನ ಸಂಭವಿಸಿತ್ತು
ಹಿಂದೂ ಮಹಾಸಾಗರದಲ್ಲಿ ಸುನಾಮಿ ಭೀತಿ:  ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ title=
Tsunami warning

ಇಂಡೋನೇಷ್ಯಾ ಸಮೀಪದ ಪೂರ್ವ ಟಿಮೋರ್ ಪ್ರದೇಶದಲ್ಲಿ ಕಳೆದ ದಿನ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಹಿಂದೂ ಮಹಾಸಾಗರದಲ್ಲಿ ಸುನಾಮಿ ಉಂಟಾಗುವ ಸೂಚನೆ ಎಂದು ತಿಳಿದುಬಂದಿದೆ. ಮಧ್ಯ ಇಂಡೋನೇಷ್ಯಾದ ಟಿಮೋರ್ ದ್ವೀಪದಿಂದ 51.4 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ವರದಿಯಾಗಿದೆ.

ಭೂಕಂಪದ ಕೇಂದ್ರ ಬಿಂದು ಪೆಸಿಫಿಕ್ ಮಹಾಸಾಗರದ ತಳದಲ್ಲಿ ಕಂಡುಬಂದಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಟೆಕ್ಟೋನಿಕ್ ಪ್ಲೇಟ್‌ಗಳ ನಿರಂತರ ಚಲನೆಯಿಂದ ಭೂಕಂಪಗಳು ಉಂಟಾಗುತ್ತವೆ. ಇದರ ಜೊತೆಗೆ, ಈ ಪ್ರದೇಶದಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ನೆಟ್ವರ್ಕ್ ಇಲ್ಲದಿದ್ದರೂ ಕೂಡ ಯಾರಿಗೆ ಬೇಕಾದರೂ ಕರೆ ಮಾಡಿ, ಕೇವಲ ಈ ಸೆಟ್ಟಿಂಗ್ ಆನ್ ಮಾಡಿ ಸಾಕು

2004 ರಲ್ಲಿ ಸಮತ್ರ ದ್ವೀಪಗಳಲ್ಲಿ 9.1 ತೀವ್ರತೆಯ ಭೂಕಂಪನವು ಕಂಡುಬಂದಿತ್ತು. ಇದು ಹಿಂದೂ ಮಹಾಸಾಗರದಲ್ಲಿ ಭಾರಿ ಸುನಾಮಿಯನ್ನು ಸೃಷ್ಟಿಮಾಡಿತ್ತು. ಆ ಸಮಯದಲ್ಲಿ ಭಾರತ ಮತ್ತು ಶ್ರೀಲಂಕಾದ ಮೇಲೂ ಸುನಾಮಿಯ ಪರಿಣಾಮ ಬೀರಿತ್ತು. ವಿಶ್ವಾದ್ಯಂತ 2 ಲಕ್ಷ 20 ಸಾವಿರ ಜನರು ಸಾವನ್ನಪ್ಪಿದ್ದರು. ಅದರಲ್ಲಿ ಇಂಡೋನೇಷ್ಯಾ ಒಂದರಲ್ಲಿಯೇ ಬರೋಬ್ಬರಿ 1 ಲಕ್ಷ 70 ಸಾವಿರ ಮಂದಿ ಕೊನೆಯುಸಿರೆಳೆದಿದ್ದರು. ಅಂದಿನಿಂದ, ಪ್ರತಿ ಬಾರಿ ಭೂಕಂಪ ಸಂಭವಿಸಿದಾಗ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ. 

ಏಪ್ರಿಲ್‌ ತಿಂಗಳಲ್ಲಿ ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಉತ್ತರ ಮಲುಕುದಲ್ಲಿ 6.0 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇನ್ನು ಫೆಬ್ರವರಿಯಲ್ಲಿ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಈ ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ, ಸುಮಾರು 13,000 ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗಿತ್ತು. 

ಇದನ್ನು ಓದಿ: ಮುಂದಿನ ವಾರ ಸಂಖ್ಯಾ ಶಾಸ್ತ್ರದ ಪ್ರಕಾರ ಇವರಿಗೆ ಆರ್ಥಿಕ ಲಾಭ! 

ಇದೀಗ ದೈತ್ಯ ಸುನಾಮಿ ಆವರಿಸುತ್ತಿದ್ದು, ಇಂಡೋನೇಷ್ಯಾದ ಜನರು ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News